ಡಾ.ಬಿ.ಆರ್ .ಅಂಬೇಡ್ಕರ್ , ಡಾ.ಬಾಬೂಜಿ ಜಯಂತಿ ಆಚರಣೆ (ಕಿಕ್ಕರ್ )
ಸಮಾನತೆ ಹರಿಕಾರನ ಸ್ಮರಣೆ (ಹೆಡ್ )
ವಿಕ ಸುದ್ದಿಲೋಕ ಗದಗ
ಡಾ.ಬಿ.ಆರ್ .ಅಂಬೇಡ್ಕರ್ ಹಾಗೂ ಡಾ.ಬಾಬೂಜಿ ಅವರ ಜೀವನದ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಬಡತನವು ಸಾಧನೆಗೆ ಅಡ್ಡಿಯಾಗುವುದಿಲ್ಲಎಂಬುದನ್ನು ಡಾ.ಅಂಬೇಡ್ಕರ್ ಅವರ ಜೀವನವೇ ಸ್ಪಷ್ಟಪಡಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್ .ವಿ. ಸಂಕನೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಗದಗ-ಬೆಟಗೇರಿ ಆಶ್ರಯದಲ್ಲಿಗದಗ ನಗರದ ಡಾ.ಬಿ.ಆರ್ .ಅಂಬೇಡ್ಕರ್ ಭವನದಲ್ಲಿಮಂಗಳವಾರ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ, ಭಾರತರತ್ನ ಡಾ.ಬಿ.ಆರ್ .ಅಂಬೇಡ್ಕರ್ ಅವರ 135ನೇ ಜಯಂತಿ ಹಾಗೂ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬೂ ಜಗಜೀವನ ರಾಂ ಅವರ 119ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ಅಂಬೇಡ್ಕರ್ ಅವರು ಬಡವರ ಹಾಗೂ ಹಿಂದುಳಿದ ವರ್ಗಗಳ ಉನ್ನತಿಗಾಗಿ ಸಂಪೂರ್ಣ ಜೀವನ ಅರ್ಪಿಸಿದ್ದು, ಸಮಾನತೆ ಆಧಾರಿತ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಭಾರತೀಯ ಸಂವಿಧಾನ ರೂಪಿಸಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದ ಮಹತ್ವದ ವ್ಯಕ್ತಿತ್ವ ಅವರದು ಎಂದರು.
ಅರ್ಥಶಾಸ್ತ್ರ, ಇತಿಹಾಸ ಹಾಗೂ ಮನಶಾಸ್ತ್ರ ಸೇರಿದಂತೆ ಹಲವು ವಿಷಯಗಳಲ್ಲಿಅಪಾರ ಜ್ಞಾನ ಹೊಂದಿದ್ದ ಡಾ.ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಯ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ಜಾತಿ ಪದ್ಧತಿ ನಿರ್ಮೂಲನೆಗೊಳಿಸಿ ಸಮಾನತೆ ಸ್ಥಾಪನೆಗೆ ಅವರು ಕೈಗೊಂಡ ಪ್ರಯತ್ನಗಳು ಶ್ಲಾಘನೀಯ ಎಂದು ಹೇಳಿದರು.
ಎಸ್ .ಎನ್ .ಬಳ್ಳಾರಿ ಮಾತನಾಡಿ, ಡಾ.ಬಿ.ಆರ್ .ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ ಮಹಾನ್ ವ್ಯಕ್ತಿ ಎಂದರು.
ಎಚ್ ಸಿಇಎಸ್ ಪಪೂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ಡಿ.ಜಿ.ಜೋಗಣ್ಣನವರ ಮಾತನಾಡಿ, ಸಮಾಜದಲ್ಲಿಇಂದಿಗೂ ಅಸ್ಪೃಶ್ಯತೆ ಅಸ್ತಿತ್ವದಲ್ಲಿದೆ. ಪ್ರತಿಯೊಬ್ಬರೂ ಮನುಷ್ಯರನ್ನು ಮನುಷ್ಯರಂತೆ ಕಾಣಬೇಕು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾನೂನು ವಿದ್ಯಾರ್ಥಿ ಮಣಿಕಂಠ ಹಾದಿಮನಿ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಸಿ.ಎನ್ .ಶ್ರೀಧರ್ ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ.ನಂದಾ ಹಣಬರಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊ.ಬಾಹುಬಲಿ ಜೈನರ ನಿರ್ವಹಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ಬಸವಾರಾಜ ಕಡೆಮನಿ, ಕೃಷ್ಣಾ ಪರಾಪೂರ, ಅಶೋಕ ಕುಡತಿನಿ, ಕೃಷ್ಣಗೌಡ ಪಾಟೀಲ, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಸಿ.ಎನ್ .ಶ್ರೀಧರ್ , ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ , ಜಿಪಂ ಉಪಕಾರ್ಯದರ್ಶಿ ಸಿ.ಆರ್ .ಮುಂಡರಗಿ, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್ , ಸಹಾಯಕ ಆಯುಕ್ತ ಗಂಗಪ್ಪ ಎಂ, ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ.ನಂದಾ ಹಣಬರಟ್ಟಿ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಎಸ್ .ಪವಾರ ಸೇರಿದಂತೆ ಇತರರು ಹಾಜರಿದ್ದರು.
ಬಾಕ್ಸ್
ಮೆರವಣಿಗೆ: ಡಾ.ಅಂಬೇಡ್ಕರ್ ಹಾಗೂ ಡಾ.ಬಾಬೂಜಿ ಅವರ ಭಾವಚಿತ್ರಗಳ ಮೆರವಣಿಗೆಯು ಗದಗ ನಗರಸಭೆ ಆವರಣದಲ್ಲಿರುವ ಡಾ.ಬಿ.ಆರ್ .ಅಂಬೇಡ್ಕರ್ ಪ್ರತಿಮೆಗೆ ಗೌರವ ಮಾಲಾರ್ಪಣೆಯೊಂದಿಗೆ ಪ್ರಾರಂಭಗೊಂಡು ಮಹಾತ್ಮಾ ಗಾಂಧಿ ಸರ್ಕಲ್ , ಮಹೇಂದ್ರಕರ್ ಸರ್ಕಲ್ , ಟಾಂಗಾ ಕೂಟ್ , ಬಸವೇಶ್ವರ ಸರ್ಕಲ್ , ಗುಜ್ಜರಬಸ್ತಿ, ಮುಳಗುಂದ ನಾಕಾ ಮಾರ್ಗವಾಗಿ ಡಾ.ಬಿ.ಆರ್ .ಅಂಬೇಡ್ಕರ್ ಭವನಕ್ಕೆ ಬಂದು ತಲುಪಿತು.
ಫೋಟೊ: 14ಜಿಡಿಜಿ 3:
ಡಾ.ಬಿ.ಆರ್ .ಅಂಬೇಡ್ಕರ್ ಭವನದಲ್ಲಿನಡೆದ ಡಾ.ಬಿ.ಆರ್ .ಅಂಬೇಡ್ಕರ್ , ಡಾ.ಬಾಬೂ ಜಗಜೀವನ ರಾಂ ಅವರ ಜಯಂತಿ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎಸ್ .ವಿ.ಸಂಕನೂರ ಉದ್ಘಾಟಿಸಿದರು.
ಫೋಟೊ: 14ಜಿಡಿಜಿ 3ಅ:
ಡಾ.ಬಿ.ಆರ್ .ಅಂಬೇಡ್ಕರ್ ಹಾಗೂ ಡಾ.ಬಾಬೂ ಜಗಜೀವನ ರಾಂ ಅವರ ಜಯಂತಿ ನಿಮಿತ್ತ ಗದಗ ನಗರದಲ್ಲಿಅದ್ಧೂರಿಯಾಗಿ ಮೆರವಣಿಗೆ ನಡೆಯಿತು.
ಫೋಟೊ: 14ಜಿಡಿಜಿ 3ಬ:
ಮೆರವಣಿಗೆಯಲ್ಲಿಕಲಾ ತಂಡ ಪಾಲ್ಗೊಂಡ ಕ್ಷಣ.
ಫೋಟೊ: 14ಜಿಡಿಜಿ 3ಸಿ:
ಕಾರ್ಯಕ್ರಮದಲ್ಲಿಸಾಧಕರಿಗೆ ಸನ್ಮಾನಿಸಲಾಯಿತು.

