ಜಾತಿ ವ್ಯವಸ್ಥೆ ಸಂಪೂರ್ಣ ನಿರ್ಮೂಲನೆ ಆಗಲಿ

Contributed bybhrahmanand.arali@timesgroup.com|Vijaya Karnataka
Vijay Karnataka

ಚಿತ್ರ:14ಜಿಎಲ್ ಬಿ66

ನಗರದ ಜಗತ್ ವೃತ್ತದಲ್ಲಿಡಾ.ಬಿ.ಆರ್ .ಅಂಬೇಡ್ಕರ್ ಜಿಲ್ಲಾಜಯಂತ್ಯುತ್ಸವ ಸಮಿತಿಯಿಂದ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಮಾತನಾಡಿದರು.

**

ಚಿತ್ರ:14ಜಿಎಲ್ ಬಿ65

ನಗರದ ಜಗತ್ ವೃತ್ತದಲ್ಲಿನಡೆದ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿಡಾ.ಬಿ.ಆರ್ .ಅಂಬೇಡ್ಕರ್ ಜಿಲ್ಲಾಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಅಶೋಕ ವೀರಾನಾಯಕ ದಂಪತಿಯನ್ನು ಸನ್ಮಾನಿಸಲಾಯಿತು.

**

*ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿಯಿಂದ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿಬಿ.ಆರ್ .ಪಾಟೀಲ್ ಅಭಿಮತ

ಜಾತಿ ವ್ಯವಸ್ಥೆ ಸಂಪೂರ್ಣ ನಿರ್ಮೂಲನೆ ಆಗಲಿ

ವಿಕ ಸುದ್ದಿಲೋಕ ಕಲಬುರಗಿ

ಸಮಾಜದಲ್ಲಿಹುದುಗಿರುವ ಜಾತಿ ವ್ಯವಸ್ಥೆ ಸಂಪೂರ್ಣ ನಿರ್ಮೂಲನೆ ಮಾಡಿದರೆ ಮಾತ್ರ ನಾವು ಮಹಾನ ನಾಯಕರಾದ ಬಸವಣ್ಣ ಹಾಗೂ ಡಾ.ಬಿ.ಆರ್ .ಅಂಬೇಡ್ಕರ್ ಅವರಿಗೆ ಪೂರ್ಣ ಗೌರವ ಕೊಟ್ಟಂತಾಗುತ್ತದೆ ಎಂದು ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್ .ಪಾಟೀಲ್ ಹೇಳಿದರು.

ನಗರದ ಜಗತ್ ವೃತ್ತದಲ್ಲಿಡಾ.ಬಿ.ಆರ್ .ಅಂಬೇಡ್ಕರ್ ಜಿಲ್ಲಾಜಯಂತ್ಯುತ್ಸವ ಸಮಿತಿಯಿಂದ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿಮಾತನಾಡಿ, ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಿ ಸಮಾನತೆ ತರಲು ಶ್ರಮಿಸಿದ ಮಹಾನ್ ನಾಯಕ ಡಾ.ಬಿ.ಆರ್ .ಅಂಬೇಡ್ಕರ್ ಅವರಾಗಿದ್ದಾರೆ. ಇಂದಿಗೂ ಜಾತಿ ವ್ಯವಸ್ಥೆ ಸಮಾಜದಲ್ಲಿಕಾಣುತ್ತಿರುವುದು ನೋವಿನ ಸಂಗತಿ ಎಂದು ಬೇಸರಿಸಿದರು.

ಡಾ.ಬಿ.ಆರ್ .ಅಂಬೇಡ್ಕರ್ ಕೇವಲ ಸಂವಿಧಾನ ರಚನೆ ಮಾಡಲಿಲ್ಲ, ಮುಂದಿನ ಭವಿಷ್ಯ ಭಾರತದ ಕನಸನ್ನು ಕಂಡಿವರಾಗಿದ್ದಾರೆ. ಅಂದಿನ ಅವರ ಆರ್ಥಿಕ ನೀತಿಯಿಂದ ಆರ್ ಬಿಐ ಜನ್ಮತಾಳಿತು. ಕೃಷಿಕರ ಬೆಳೆಗೆ ಉತ್ತಮ ಬೆಳೆ ಸಿಕ್ಕು ರೈತರು ಆರ್ಥಿಕ ಸ್ವಾವಲಂಬಿ ಸಾಧಿಸಬೇಕು ಎಂಬುದು, ಯುವ ಜನರಿಗೆ ಕಾಯಂ ಉದ್ಯೋಗ ಸಿಗಬೇಕು ಎಂದು ಕನಸು ಕಂಡಿದ್ದರು. ಅದನ್ನು ತಮ್ಮ ಸಂವಿಧಾನದ ಮೂಲಕ ಇಡೀ ನಾಡಿಗೆ ನೀಡಿದ್ದಾರೆ ಎಂದು ಹೇಳಿದರು.

ಶಾಸಕ ಡಾ.ಅವಿನಾಶ ಜಾಧವ್ ಮಾತನಾಡಿ, ಸಂವಿಧಾನದ ಬಲದಿಂದ ಇಂದು ಕೆಳ ಹಂತದ ವ್ಯಕ್ತಿ ದೊಡ್ಡ ಸ್ಥಾನ ಪಡೆಯಲು ಸಾಧ್ಯವಾಗುತ್ತಿದೆ. ಸಂವಿಧಾನ ಎಂಬುದು ನಮ್ಮ ದೇಶದ ಪವಿತ್ರ ಗ್ರಂಥವಾಗಿದ್ದು, ಅದನ್ನು ಎಂದಿಗೂ ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಎಂಎಲ್ಸಿ ಬಿ.ಜಿ.ಪಾಟೀಲ್ , ಮಾಜಿ ಶಾಸಕ ಸುಭಾಷ ಗುತ್ತೇದಾರ, ದತ್ತಾತ್ರೇಯ ಪಾಟೀಲ್ ರೇವೂರ್ , ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ, ನೀಲಕಂಠರಾವ್ ಮೂಲಗೆ ಮಾತನಾಡಿದರು.

ಅಣದೂರದ ಭಂತೆ ವರಜ್ಯೋತಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಅಶೋಕ್ ವೀರನಾಯಕ, ಗಣೇಶ್ ವಳಕೇರಿ, ಅಂಬಾರಾಯ ಅಷ್ಟಗಿ, ಸುಭಾಷ್ ರಾಥೋಡ್ , ಬಾಬು ದಶರತ್ ವಂಟಿ, ವಿಶಾಲ ದರ್ಗಿ, ಅರುಣ ಕುರಣೆ, ಸುರೇಶ ಹಾದಿಮನಿ, ದಿನೇಶ್ ದೊಡ್ಡಮನಿ, ಸಂತೋಷ್ ಹಾದಿಮನಿ, ರಾಜು ಜಾನೆ, ಮಲ್ಲಪ್ಪ ಹೊಸಮನಿ ಇತರರಿದ್ದರು.

***

ಕೋಟ್ ...

ಬಾಬಾ ಸಾಹೇಬರನ್ನು ಇಂದು ಇಷ್ಟು ಅದ್ಧೂರಿಯಾಗಿ ನೆನೆಯಲು ಕಾರಣ ಅವರ ವಿಚಾರಗಳಾಗಿವೆ. ವಿಚಾರಗಳಿಗೆ ಎಂದಿಗೂ ಮಾನ್ಯತೆ ಇದೆ. ಅವರು ನೀಡಿದ ಶಿಕ್ಷಣ, ಸಂಘಟನೆ, ಹೋರಾಟದ ಹಾದಿಯಲ್ಲಿಎಲ್ಲರೂ ನಡೆಯಬೇಕು.

- ಬಿ.ಆರ್ .ಪಾಟೀಲ್ , ಶಾಸಕ

***

ಜಗತ್ ವೃತ್ತದಲ್ಲಿಜಾತ್ರೆ ನಿರ್ಮಾಣ

ಸಂಜೆ ವೇಳೆಗೆ ಜಗತ್ ವೃತ್ತದಲ್ಲಿಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಇತ್ತ ಬಹಿರಂಗ ಸಭೆ ನಡೆದರೆ, ಮತ್ತೊಂದೆಡೆ ಡಿಜೆ ಸದ್ದಿಗೆ ಯುವಕರು ನಿರಂತರ ಹೆಜ್ಜೆ ಹಾಕುತ್ತಿದ್ದರು. ಇನ್ನು ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿ ನಮನ ಸಲ್ಲಿಸುವುದು ತಡ ರಾತ್ರಿವರೆಗೆ ಮುಂದುವರಿದಿತ್ತು.