ಆರೋಗ್ಯ ರಕ್ಷಣೆಗೆ ವೈದ್ಯರ ಸಲಹೆ

Contributed bymudholvk@gmail.com|Vijaya Karnataka
Vijay Karnataka

ಆರೋಗ್ಯ ರಕ್ಷಣೆಗೆ ವೈದ್ಯರ ಸಲಹೆ

ವಿಕ ಸುದ್ದಿಲೋಕ ಮುಧೋಳ

‘‘ಬೇಸಿಗೆಯ ಬಿರು ಬಿಸಿಲು ಬಹಳಷ್ಟು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬೆಳಗ್ಗೆ 10 ರ ನಂತರ ಚಿಕ್ಕಮಕ್ಕಳು, ವಯೋವೃದ್ಧರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಜನರು ಹೊರಗೆ ಬಾರದೆ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕು,’’ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ಸಲಹೆ ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘‘ಮುಂದಿನ ದಿನಗಳಲ್ಲಿಬಿಸಿಲಿನ ಪ್ರಖರತೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಂಪು ಪಾನೀಯಗಳಾದ ಎಳನೀರು, ಮಜ್ಜಿಗೆ, ಹಣ್ಣುಗಳ ರಸ ಸೇವಿಸಿ ದೇಹವನ್ನು ತಂಪಾಗಿ ಇಟ್ಟುಬೇಕು. ಘನ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು,’’ ಎಂದು ಅವರು ಹೇಳಿದರು.

ಬೇಸಿಗೆಯಲ್ಲಿನಿರ್ಜಲೀಕರಣ (ಡಿಹೈಡ್ರೇಷನ್ ) ಉಂಟಾಗದಂತೆ ಮೇಲಿಂದ ಮೇಲೆ ಶುದ್ಧ ನೀರು ಸೇವಿಸಬೇಕು. ಈ ಸಮಸ್ಯೆ ನಿವಾರಣೆಗೆ ಎಲ್ಲಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ನಗರ ಕೆಇಎಂ, ನಮ್ಮ ಕ್ಲಿನಿಕ್ , ಉಪ ಆರೋಗ್ಯ ಕೇಂದ್ರ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಬಳಿ ಒಆರ್ ಎಸ್ ಪಾಕೆಟ್ ಗಳು ಲಭ್ಯವಿದ್ದು, ಅವುಗಳನ್ನು ಪಡೆದು ಸೇವಿಸಬೇಕು ಎಂದು ಅವರು ತಿಳಿಸಿದರು.

ಫೋಟೊ 14 ಎಂಡಿಎಲ್ 6

ಡಾ.ಮಲಘಾಣ