ವಿಕ ಸುದ್ದಿಲೋಕ ನಂದೇಶ್ವರ
ಪರಸ್ಪರ ಸಹಾಯ, ಸಹಕಾರದಿಂದ ಬದುಕುವುದೇ ಶರಣ ತತ್ವದ ಸಾರವಾಗಿದೆ. ವಿಶ್ವ ಮಾನ್ಯವಾದ ಬಸವ ತತ್ವಗಳ ಜ್ಞಾನದ ಬೆಳಕಿನಲ್ಲಿಪ್ರತಿಯೊಬ್ಬರೂ ಸಾಗಬೇಕು ಎಂದು ಸಂಖ ಗುರುಬಸವ ವಿರಕ್ತ ಮಠದ ಡಾ. ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಸಂಕೋನಟ್ಟಿ ಗ್ರಾಮದಲ್ಲಿಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘‘ ವಚನ ಸಾಹಿತ್ಯ ನಮಗೆಲ್ಲದೊರೆತ ಅತ್ಯಮೂಲ್ಯ ಕೊಡುಗೆ. ಎಂತಹ ಕಷ್ಟದ ಸಂದರ್ಭ ಎದುರಾದರೂ ಯಾರ ಮನಸ್ಸನ್ನು ನೋಯಿಸದೆ ಎಲ್ಲರೂ ನಮ್ಮಂತೆ ಎಂದು ತಿಳಿಯಬೇಕು. ಯಾವುದೇ ವ್ಯಕ್ತಿಯು ಒಳ್ಳೆಯ ಕಾರ್ಯಗಳನ್ನು ಮಾಡುವುದರಿಂದ ಪ್ರತಿಫಲ ತಾನಾಗಿಯೇ ದೊರೆಯುತ್ತದೆ,’’ ಎಂದು ಅವರು ಹೇಳಿದರು.
ಜಾತ್ರಾ ಸಮಿತಿ ಮುಖಂಡ ಬಸಪ್ಪ ಪಾಟೀಲ, ಸಂತೋಷ ಧರಿಗೌಡ, ಪರಮಾನಂದ ಧರಿಗೌಡ, ಪರಮಾನಂದ ಕೌಜಲಗಿ, ಆನಂದ ಸೋಮಣ್ಣವರ, ಶಂಕರ ಧರಿಗೌಡ, ಮಂಜು ದೊಡವಾಡ, ವಿಜಯ ಮುಗಳಖೋಡ, ಬಸಯ್ಯ ಅವರವಾಡ, ಸಚಿನ್ ಹವನಾಳ, ಅಶೋಕ ಕೌಜಲಗಿ, ಅಶೋಕ ಕರಬಸಪ್ಪಗೋಳ, ಶ್ರೀಶೈಲ ಧರಿಗೌಡ, ಮುತ್ತಪ್ಪ ಅಥಣಿ, ಕಲ್ಲಪ್ಪ ಧರಿಗೌಡ, ಅಶೋಕ ನಾಯಿಕ ಸೇರಿದಂತೆ ಅಕ್ಕನ ಬಳಗದ ತಾಯಂದಿರು ಉಪಸ್ಥಿತರಿದ್ದರು.
- 16ಎನ್ ಡಿಆರ್ 1
ಡಾ. ಶಿವಲಿಂಗೇಶ್ವರ ಸ್ವಾಮೀಜಿ

