ಮೇ 15ರವರೆಗೆ ಮನೆ ಮನೆ ಗಣತಿ

Contributed bynasirmnkodagu@gmail.com|Vijaya Karnataka

ಕೊಡಗು ಜಿಲ್ಲೆಯಲ್ಲಿ 2027ರ ಜನಗಣತಿಯ ಮೊದಲ ಹಂತ ಆರಂಭವಾಗಿದೆ. ಸ್ವಯಂ ಗಣತಿ ಪೂರ್ಣಗೊಂಡಿದ್ದು, ಮೇ 15ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಲಿದ್ದಾರೆ. 999 ಗಣತಿದಾರರು ಹಾಗೂ 172 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಸಾರ್ವಜನಿಕರು ಗಣತಿಯಲ್ಲಿ ಪಾಲ್ಗೊಂಡು ಮಾಹಿತಿ ನೀಡಬೇಕು. ಇದು ದೇಶದ ಶಕ್ತಿ ಎಂದು ಜಿಲ್ಲಾಧಿಕಾರಿ ಎಸ್‌.ಜೆ.ಸೋಮಶೇಖರ್‌ ತಿಳಿಸಿದ್ದಾರೆ.

household census by may 15 progress and significance

ಜಿಲ್ಲಾಧಿಕಾರಿ ಎಸ್ .ಜೆ.ಸೋಮಶೇಖರ್ ಮಾಹಿತಿ

ವಿಕ ಸುದ್ದಿಲೋಕ ಮಡಿಕೇರಿ

ನಮ್ಮ ಗಣತಿ , ನಮ್ಮ ಅಭಿವೃದ್ಧಿ 2027ರ ಜನಗಣತಿಯ ಮೊದಲ ಹಂತವು ಈಗಾಗಲೇ ಆರಂಭವಾಗಿದ್ದು, ಸ್ವಯಂ ಗಣತಿ ಕಾರ್ಯ ಪೂರ್ಣಗೊಂಡಿದೆ. ಆ ದಿಸೆಯಲ್ಲಿಕೊಡಗು ಜಿಲ್ಲೆಯಲ್ಲಿಸುಮಾರು 1,74,114 ಕುಟುಂಬಗಳಲ್ಲಿ7,379 ಪ್ರಗತಿಯಾಗಿದೆ. ಉಳಿದಂತೆ ಮೇ 15ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್ .ಜೆ.ಸೋಮಶೇಖರ್ ಮಾಹಿತಿ ನೀಡಿದ್ದಾರೆ.

‘‘ ಮನೆ ಮನೆ ಗಣತಿ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ999 ಗಣತಿದಾರರನ್ನು ನಿಯೋಜಿಸಲಾಗಿದೆ. ಮಡಿಕೇರಿ ತಾಲೂಕಿಗೆ 187, ಮಡಿಕೇರಿ ನಗರಕ್ಕೆ 61, ಸೋಮವಾರಪೇಟೆ ತಾಲೂಕಿಗೆ 186, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ 12, ವಿರಾಜಪೇಟೆ ತಾಲೂಕಿಗೆ 133, ವಿರಾಜಪೇಟೆ ಪುರಸಭೆ ವ್ಯಾಪ್ತಿಗೆ 36, ಪೊನ್ನಂಪೇಟೆ ತಾಲೂಕಿನಲ್ಲಿ161, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ19, ಕುಶಾಲನಗರ ತಾಲ್ಲೂಕಿಗೆ 158, ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ46, ಒಟ್ಟು 999 ಗಣತಿದಾರರನ್ನು ನಿಯೋಜಿಸಲಾಗಿದೆ. ಜತೆಗೆ 172 ಮಂದಿ ಗಣತಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಹಾಗೆಯೇ ಶೇ.10 ರಷ್ಟು ಗಣತಿದಾರರನ್ನು ಕಾಯ್ದಿರಿಸಲಾಗಿದೆ,’’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

‘‘ಸರಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳಲ್ಲಿಗಣತಿ ಕಾರ್ಯವು ಒಂದಾಗಿದ್ದು, ಸಾರ್ವಜನಿಕರು ಗಣತಿಯಲ್ಲಿಪಾಲ್ಗೊಂಡು ಮಾಹಿತಿ ನೀಡುವಂತಾಗಬೇಕು. ಜನಗಣತಿಯಲ್ಲಿಭಾಗವಹಿಸಬೇಕು. ಜನಗಣತಿಯು ದೇಶದ ಶಕ್ತಿ ಎಂಬುದನ್ನು ಮರೆಯಬಾರದು. ಎಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು,’’ ಎಂದು ಮನವಿ ಮಾಡಿದರು.

ಫೋಟೊ: ಒಆಏ16ಓ- Tಎ TಔಒಂTಊಇಏಂಖ ಆಅ (ಎಸ್ .ಜೆ.ಸೋಮಶೇಖರ್ ಜಿಲ್ಲಾಧಿಕಾರಿ)