*19ಜಿಎಲ್ ಬಿ80*
ನಗರದ ಶರಣಬಸವೇಶ್ವರರ ಜಾತ್ರಾ ಮೈದಾನದ ಪೂಜ್ಯ ಲಿಂ.ಡಾ.ಶರಣಬಸವಪ್ಪ ಅಪ್ಪಾ ವೇದಿಕೆಯಲ್ಲಿ893ನೇ ಬಸವ ಜಯಂತಿ ಪ್ರಯುಕ್ತ ಬಹಿರಂಗ ಸಭೆಯಲ್ಲಿಗಣ್ಯರಿಂದ ಷಟಸ್ಥಲ ಧ್ವಜಾರೋಹಣ ನೆರವೇರಿತು. ಎಲ್ಲಸಚಿವರು, ಶಾಸಕರು ಸಮಾಜದ ಮುಖಂಡರು ಇದ್ದರು.
**
*19ಜಿಎಲ್ ಬಿ85*
893ನೇ ಬಸವ ಜಯಂತಿಯ ಬಹಿರಂಗ ಸಭೆಯಲ್ಲಿಸಚಿವ ಈಶ್ವರ ಖಂಡ್ರೆ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
**
*19ಜಿಎಲ್ ಬಿ90*
ಬಸವ ಜಯಂತಿಯ ಬಹಿರಂಗ ಸಭೆಯಲ್ಲಿಪಾಲ್ಗೊಂಡ ಬಸವಾಭಿಮಾನಿಗಳು.
**
ಬಸವ ಜಯಂತಿ ಉತ್ಸವ ಸಮಿತಿಯಿಂದ ಬಹಿರಂಗ ಸಭೆಯಲ್ಲಿಸಚಿವ ಈಶ್ವರ ಖಂಡ್ರೆ ಅಭಿಮತ(ಕಿಕ್ಕರ್ )
ಕವಲುದಾರಿಯ ಸಮಾಜ ಸಂಘಟಿಸೋಣ
ವಿಕ ಸುದ್ದಿಲೋಕ ಕಲಬುರಗಿ
ಕವಲು ದಾರಿಯಲ್ಲಿಇರುವ ವೀರಶೈವ-ಲಿಂಗಾಯತ ಸಮಾಜ ಕಟ್ಟುವ ಕೆಲಸಕ್ಕೆ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಶರಣಬಸವೇಶ್ವರರ ಜಾತ್ರಾ ಮೈದಾನದ ಪೂಜ್ಯ ಲಿಂ.ಡಾ.ಶರಣಬಸವಪ್ಪ ಅಪ್ಪಾ ವೇದಿಕೆಯಲ್ಲಿಬಸವ ಜಯಂತಿ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ 893ನೇ ಬಸವ ಜಯಂತಿಯ ಬಹಿರಂಗ ಸಭೆಯಲ್ಲಿವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬಸವಣ್ಣನವರ ತತ್ವ ಹಾಗೂ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಎಲ್ಲರನ್ನೂ ಒಗ್ಗೂಡಿಸಿ ಸಮಾಜವನ್ನು ಸಂಘಟಿಸುವ, ಮಹಿಳೆಯರಿಗೆ ಪ್ರಾತಿನಿಧ್ಯ ಕೊಡುವ ಕೆಲಸ ಮಾಡುವ ಮೂಲಕ ನಾವೆಲ್ಲರೂ ಬಸವಣ್ಣನವರ ಆಶಯದಂತೆ ನಡೆಯೋಣ ಎಂದರು.
ನಾಡಿನ ವೀರಶೈವ-ಲಿಂಗಾಯತ ಮಠಗಳು ಕಾಯಕ, ದಾಸೋಹ ಮಾಡಿದ್ದು, ನಮ್ಮ ಒಗ್ಗಟ್ಟಿನಲ್ಲಿಬಲವಿದೆ. ಒಡಕಿನಲ್ಲಿದುರ್ಬಲತೆ ಅಡಗಿದೆ. ಸಂಘಟಿತರಾಗದಿದ್ದರೆ ಇತರರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ನಮ್ಮ ಗುರು ವಿರಕ್ತರು ಹೇಳಿದ್ದು ಮಾನವ ಜನ್ಮಕ್ಕೆ ಜಯವಾಗಲಿ ಎಂಬುದು, ಅದೇ ಬಸವ ತತ್ವ. ಜಾತಿ, ಲಿಂಗಭೇದ, ಮೌಢ್ಯವಿದ್ದ ಕಾಲದಲ್ಲಿಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ್ದರು. ಸಮಾಜ ಹಲವು ಗೊಂದಲಗಳ ಮಧ್ಯೆ ಹರಿದು ಹಂಚಿ ಹೋಗಿದ್ದು, ಒಗ್ಗಟ್ಟಾಗಬೇಕಿದೆ ಎಂದರು.
**ಮುಂದಿನ ಏ.20 ಒಳಗೆ ಅನುಭವ ಮಂಟಪ ನಿರ್ಮಾಣ: ಬಸವಕಲ್ಯಾಣದಲ್ಲಿಅನುಭವ ಮಂಟಪ ನಿರ್ಮಾಣದ ಕಾರ್ಯ ನಡೆಯುತ್ತಿದೆ. 740 ಕೋಟಿ ರೂ. ವೆಚ್ಚದಲ್ಲಿಅನುಭವ ಮಂಟಪ ಸಿದ್ಧಗೊಳ್ಳುತ್ತಿದ್ದು, ಮುಂಬರುವ 2027 ಏ.20ರ ಒಳಗಾಗಿ ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರವಾಗಿ ಅನುಭವ ಮಂಟಪ ಲೋಕಾರ್ಪಣೆ ಮಾಡಲಾಗುವುದು ಎಂದರು.
ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಸಮಾಜದಲ್ಲಿಬಸವ ಧರ್ಮದ ಜಾಗೃತಿ ಅಗತ್ಯವಾಗಿದೆ.ಅಷ್ಟಾವರಣ ಹಾಗೂ ಪಂಚಾಚಾರ್ಯ ಹಾಗೂ ಷಟಸ್ಥಲ ಕುರಿತು ನಮ್ಮ ಪೀಳಿಗೆಗೆ ಹೇಳಬೇಕಾಗಿದೆ. ಲಿಂಗ ಪೂಜೆಗೆ ವೈಜ್ಞಾನಿಕ ಹಿನ್ನೆಲೆಯಿದ್ದು, ವಚನ ಸಾಹಿತ್ಯ ಮಕ್ಕಳಿಗೆ ಪರಿಚಯಿಸುವ ಕೆಲಸ ನಾವು ಮಾಡಬೇಕಿದೆ. ಲಿಂಗ ಪೂಜೆ, ವಚನ ಸಾಹಿತ್ಯ ಪರಿಚಯಿಸುವ ಮೂಲಕ ಮಕ್ಕಳಿಗೆ ಮುಂದಿನ ಹಾದಿ ಸುಗಮ ಮಾಡಬೇಕಿದೆ. ಬಸವ ಧರ್ಮದಿಂದ ನೆಮ್ಮದಿ ಸಾಧ್ಯ. ಕೆಳಗೆ ಬಿದ್ದವರನ್ನು ಮೇಲಕ್ಕೆ ಎತ್ತುವುದೇ ಲಿಂಗಾಯತ ಸಮಾಜದ ಮೂಲ ಕೆಲಸ ಈ ನಿಟ್ಟಿನಲ್ಲಿಪ್ರಾಮಾಣಿಕ ಪ್ರಯತ್ನ ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದರು.
ಬೆಳಗಾವಿ ಶಿವಾನಂದ ಶ್ರೀಗಳು, ಸಚಿವ ಶರಣಬಸಪ್ಪಾ ದರ್ಶನಾಪುರ, ತಿಪ್ಪಣ್ಣಪ್ಪ ಕಮಕನೂರ್ , ಶರಣಕುಮಾರ ಮೋದಿ, ಆರ್ .ಜಿ. ಶೆಟಗಾರ, ಶಾಸಕರಾದ ಎಂ.ವೈ.ಪಾಟೀಲ…, ಬಸವರಾಜ ಮತ್ತಿಮೂಡ್ , ಅಜಯ್ ಸಿಂಗ್ , ಅಲ್ಲಮಪ್ರಭು ಪಾಟೀಲ…, ಡಾ.ಅವಿನಾಶ ಜಾಧವ್ , ಶಶೀಲ್ ನಮೋಶಿ, ತಿಪ್ಪಣಪ್ಪ ಕಮಕನೂರ, ಜಗದೇವ ಗುತ್ತೇದಾರ್ , ದೊಡ್ಡಪ್ಪಗೌಡ ಪಾಟೀಲ… ನರಿಬೋಳ, ದತ್ತಾತ್ರೇಯ ಪಾಟೀಲ… ರೇವೂರ, ಚಂದು ಪಾಟೀಲ್ , ರಾಜಕುಮಾರ್ ಪಾಟೀಲ್ ತೇಲ್ಕೂರ್ , ಪ್ರವೀಣ್ ಪಾಟೀಲ್ ಹರವಾಳ, ಬಸವರಾಜ ದೇಶಮುಖ, ಶರಣು ಪಪ್ಪಾ, ನೀಲಕಂಠರಾವ ಮೂಲಗೆ, ಅರುಣಾದೇವಿ ಚಂದ್ರಶೇಖರ ಪಾಟೀಲ್ , ರವೀಂದ್ರ ಶಾಬಾದಿ, ಪ್ರಭುಲಿಂಗ ಮಹಾಗಾಂವಕರ್ , ಸುರೇಶ ಸಜ್ಜನ್ , ಸೋಮಶೇಖರ ಹಿರೇಮಠ, ಸುಭಾಷ ಗುತ್ತೇದಾರ್ , ಅರುಣಕುಮಾರ ಪಾಟೀಲ್ , ಗೌರಿ ಚಿಚಕೋಟಿ ನಳಿನಿ ಮಹಾಗಾಂವಕರ್ , ಶ್ರೀದೇವಿ ಸಾಸಣಗೇರ, ಜಯಶ್ರೀ ಚಟ್ನಳ್ಳಿ, ಡಾ.ಭೀಮಾಶಂಕರ ಬಿಲಗುಂದಿ, ರಾಜಾ ಭೀಮಳ್ಳಿ, ಸಂಗಮೇಶ ನಾಗನಳ್ಳಿ, ಸೋಮಶೇಖರ ಗೋನಾಯಕ, ಶರಣಬಸಪ್ಪ ಕಾಮರೆಡ್ಡಿ, ಸಂತೋಷ ಲಂಗರ, ಡಾ.ಸುಧಾ ಹಾಲಕಾಯಿ, ಸಾವಿತ್ರಿ ಕುಳಗೇರಿ, ಅಶೋಕ್ ಪಾಟೀಲ್ , ಚೇತನ್ ಗೋನಾಯಕ, ಅಶೋಕ್ ಬಗಲಿ, ಶಿವರಾಜ್ ಪಾಟೀಲ್ ರದ್ದೇವಾಡಗಿ ಇತರರಿದ್ದರು. ಅಮರನಾಥ ಪಾಟೀಲ್ ನಿರೂಪಿಸಿದರು.
*ಕೋಟ್ *
ಸಕಲ ಜೀವಾತ್ಮರಿಗೆ ಲೇಸು ಬಯಸಲು ಹುಟ್ಟಿ ಬಂದ ಬಸವಣ್ಣ. ವಚನ ಚಳವಳಿಯಿಂದ ಸಮಾನತೆ ತಂದರು. ಶರಣರು ವೈಜ್ಞಾನಿಕವಾಗಿ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ತಮನ್ನು ತಾವು ಅರಿಯಲು ಆಧ್ಯಾತ್ಮ ಅಗತ್ಯ. ಹೀಗಾಗಿ ಶರಣರ ದಾರಿಯಲ್ಲಿನಾವೆಲ್ಲರೂ ನಡೆಯೋಣ.
-ಬಿ.ಆರ್ .ಪಾಟೀಲ್ ,ಅಧ್ಯಕ್ಷರು, ಬಸವ ಜಯಂತ್ಯುತ್ಸವ ಸಮಿತಿ
**ಕೋಟ್ *
ನಾವೆಲ್ಲರೂ ಬಸವಣ್ಣನವರ ತತ್ವಗಳು ಮೈಗೂಡಿಸಿಕೊಂಡು ರಾಷ್ಟ್ರಕಟ್ಟಿ ಧರ್ಮ ಬೆಳೆಸೋಣ. ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವ ಜೀವನದಲ್ಲಿಅಳವಡಿಸಿಕೊಂಡು ಉನ್ನತಿ ಸಾಧಿಸೋಣ. ಈ ಒಂದು ವರ್ಷದಲ್ಲಿ ಮೂರು ರತ್ನ ಕಳೆದುಕೊಂಡಿದ್ದೇವೆ. ಅವರು ಅಗಲಿದ್ದರೂ,ಅವರ ಆತ್ಮ ನಮ್ಮೊಂದಿಗಿವೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿನಾವೆಲ್ಲರೂ ನಡೆಯೋಣ.
-ಡಾ.ದಾಕ್ಷಾಯಿಣಿ ಎಸ್ .ಅಪ್ಪ, ಅಧ್ಯಕ್ಷೆ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ
**
*ಕೋಟ್ *
ಸಮಾಜಕ್ಕೆ ಶಾಂತಿ, ನೆಮ್ಮದಿ ನೀಡುವ ವಚನಗಳ ಸಂದೇಶ ನೀಡುವ ಕೆಲಸ ಜಿಲ್ಲಾಬಸವ ಜಯಂತ್ಯುತ್ಸವ ಸಮಿತಿಯಿಂದ ಮಾಡಲಾಗಿದೆ. ಸಮಾಜದ ಸಂಘಟನೆಗೆ ಬಲ ತುಂಬಲು ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಇಂತಹ ಆಚರಣೆಗಳು ವೀರಶೈವ-ಲಿಂಗಾಯತರ ಒಗ್ಗಟ್ಟಿಗೆ ಬಲ ತರುತ್ತವೆ. ಎಲ್ಲರೂ ಬಸವ ಮಾರ್ಗದಲ್ಲಿನಡೆದು, ಶಕ್ತಿವಂತರಾಗೋಣ.
-ಡಾ.ಬಿ.ಜಿ.ಪಾಟೀಲ್ , ಕಾರ್ಯಾಧ್ಯಕ್ಷ, ಬಸವ ಜಯಂತಿ ಉತ್ಸವ ಸಮಿತಿ
**
*ಬಾಕ್ಸ್ *
ವಚನ ಪ್ರಸ್ತುತಪಡಿಸಿದ ದೊಡ್ಡಪ್ಪ ಅಪ್ಪ
ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಧಿಪತಿ ದೊಡ್ಡಪ್ಪ ಅಪ್ಪ ಬಸವಣ್ಣವರ ವಚನಗಳನ್ನು ಪ್ರಸ್ತುತಪಡಿಸಿದರು. ಶಾಂತಿಯಿಂದ ಕ್ರಾಂತಿ ಮೂಡಿಸಿದವರು ಬಸವಣ್ಣ, ಲಿಂಗದ ಮೂಲಕ ಸಮಾಜ ಸ್ಥಾಪನೆ ಮಾಡಿದವರು ಬಸವಣ್ಣನವರು, 8ನೇ ಪೀಠಾಧಿಧಿಪತಿ ಲಿಂ.ಶರಣಬಸವಪ್ಪ ಅಪ್ಪ ಸಂಸತ್ ಭವನದ ದ್ವಾರದಲ್ಲಿಬಸವಣ್ಣನವರ ಪ್ರತಿಮೆ ಸ್ಥಾಪಿಸಿ ಬಸವ ತತ್ವ ಜಗತ್ತಿಗೆ ಸಾರಿದ್ದರು. ಎಲ್ಲರು ಶಾಂತಿ ಸಮಭಾವದಿಂದ ನಾವೆಲ್ಲರೂ ಬದುಕೋಣ ಎಂದು ಹೇಳಿದರು.
**
ಮಳೆಯ ಸಿಂಚನದಲ್ಲಿಶರಣರ ಸಂದೇಶ
ಭಾನುವಾರ ಸಂಜೆ ನಡೆದ ಬಹಿರಂಗ ಸಭೆಯಲ್ಲಿಸಹಸ್ರಾರು ಬಸವಾಭಿಮಾನಿಗಳು ಗಾಂಧಿ ಟೋಪಿ ಧರಸಿ ಬಸವ ಜೈ ಘೋಷಣೆ ಕಂಡುಬಂತು. ಎಲ್ಲೆಡೆ ಷಟಸ್ಥಲ ಧ್ವಜಗಳು ರಾರಾಜಿಸಿದವು. ಮಳೆಯ ತುಂತುರು ಸಿಂಚನದ ಮಧ್ಯೆ ಬಸವಾದಿ ಶರಣರ ಜೀವನ ಸಂದೇಶ ಕುರಿತು ಬವವಾಭಿಮಾನಿಗಳು ಆಲಿಸಿದರು.
**
ಬಾಕ್ಸ್
*ಕೋಟ್ *
ಪ್ರಸ್ತುತ ಎಲ್ಲಸೌಲಭ್ಯ, ತಂತ್ರಜ್ಞಾನಗಳಿದ್ದರೂ ಮನಸ್ಸು ಜಡವಾಗಿದ್ದು, ಶಾಂತಿ, ನೆಮ್ಮದಿಗೆ ಬಸವ ಚಿಂತನೆಗಳ ದಾಸರಾಗಬೇಕಿದೆ. ಎಲ್ಲರನ್ನು ಒಳಗೊಂಡ ಸಂಸ್ಕೃತಿ ಬಸವಣ್ಣನವರದ್ದು, 12ನೇ ಶತಮಾನದಲ್ಲಿ. ನಮ್ಮ ಮಕ್ಕಳು ವಚನ ದೀಪ್ತಿಗಳ ಮಧ್ಯೆ ಬದುಕಬೇಕಿದೆ. ಬುದ್ಧ ಬೀಜ, ಬಸವಣ್ಣ ಮಾಮರ, ಅಂಬೇಡ್ಕರ್ ಫಲ. ನಾವೆಲ್ಲರೂ ಫಲಾನುಭವಿಗಳು. ಬಸವ ತತ್ವ ಪಾಲಿಸೋಣ.
-ಶಂಕರ ದೇವನೂರ, ಸಾಹಿತಿ

