ವಿಕ ಸುದ್ದಿಲೋಕ ವಿಟ್ಲ
ವಿದ್ಯಾರ್ಥಿಗಳು ಬೇಸಗೆ ಶಿಬಿರದಲ್ಲಿಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆ ಹೇಳಿದರು.
ಅವರು ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ಬಳಿ ವಿಜಯಶ್ರೀರಾಮ ಸಭಾಂಗಣದಲ್ಲಿಏರ್ಪಡಿಸಲಾದ ಕನ್ನಡ ಕಲಿಯೋಣ ಬನ್ನಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬಿರವನ್ನು ಉದ್ಘಾಟಿಸಿದ ಎಸ್ ವಿಎಸ್ ದೇವಳ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಜಯಾನಂದ ಪೆರಾಜೆ, ಕನ್ನಡ ಭಾಷೆಯನ್ನು ಶಾಲೆಗಳಲ್ಲಿ ನಿರ್ಲಕ್ಷಿ ಸಲಾಗುತ್ತಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಕನ್ನಡದಲ್ಲಿಬರೆಯುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಿದ್ದಾರೆ ಎಂದರು.
ಮುಖ್ಯ ಅತಿಥಿ, ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಲೋಹಿತ್ ಕುಮಾರ್ ವಿಷು ಹಬ್ಬದ ಬಗ್ಗೆ ಮಾತನಾಡಿ, ಪರಿಸರದ ಗಿಡಮರಗಳ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡಬೇಕಾಗಿರುವುದು ಇಂದು ಅಗತ್ಯ ಎಂದರು.
ಬಿ.ಸಿ.ರೋಡ್ ನ ಭಾರತಿ ಸೇವಾಕೇಂದ್ರದ ಮುಖ್ಯಸ್ಥೆ ಭಾರತಿ, ಪೆರಾಜೆ ವರಲಕ್ಷ್ಮೀ ಸೇವಾ ಸಮಿತಿಯ ಸದಸ್ಯೆ ಶಶಿಕಲಾ ಶುಭಹಾರೈಸಿದರು. ಕನ್ನಡ ಭಾಷಾ ಕಲಿಕೆಯ ಶಿಬಿರವು ಲಯನ್ಸ್ ಕ್ಲಬ್ ಮತ್ತು ಶಿಕ್ಷಕರ ಸಹಕಾರದೊಂದಿಗೆ ನಡೆಯಲಿದೆ. ಭೂಮಿ, ನಿಧಿ ನಾಡಗೀತೆ ಹಾಡಿದರು. ಕಲ್ಲಡ್ಕ ಶ್ರೀರಾಮ ಆಂಗ್ಲಮಾಧ್ಯಮ ಶಾಲೆಯ ಮಾತಾಜಿ ಅಮಿತಾ ಅನಿಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಪೊಟೋ..1904ವಿಟಿಎಲ್ ಪೆರಾಜೆ
1.1 .ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ದನ ಮಾತನಾಡಿದರು.

