**(ಜಾಹೀರಾತು ಇದೆಯೇ ಕೇಳಿ ಬಳಿಕ ಪ್ರಕಟಿಸಿ) ಜಿಲ್ಲೆಯ ಅಗ್ರಮಾನ್ಯ ಶಿಕ್ಷಣ ಸಂಸ್ಥೆ ಹೆಮ್ಮಾಡಿ ಜನತಾ ಪಪೂ ಕಾಲೇಜು

Contributed byjohn.dsouza@timesofindia.com|Vijaya Karnataka

ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜು ಜಿಲ್ಲೆಯ ಅಗ್ರಮಾನ್ಯ ವಿದ್ಯಾಲಯವಾಗಿ ಹೊರಹೊಮ್ಮಿದೆ. ಈ ಸಂಸ್ಥೆಯು ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲೂ ಕಾಲೇಜು ಗಮನ ಸೆಳೆದಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಈಡೇರಿದೆ.

hemmadhi janata papu college states name honored in education sector

ವಿಕ ಸುದ್ದಿಲೋಕ ಕುಂದಾಪುರ

ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜು ಜಿಲ್ಲೆಯ ಅಗ್ರಮಾನ್ಯ ವಿದ್ಯಾಲಯವಾಗಿ ಹೊರಹೊಮ್ಮಿದೆ.

ಬೋಧನೆಯಲ್ಲಿಅನುಭವವಿರುವ, ಶಿಕ್ಷಣ ಕ್ಷೇತ್ರದಲ್ಲಿಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕೃತ ಗಣೇಶ ಮೊಗವೀರ ಅವರು ಶಿಕ್ಷಣ ತಜ್ಞೆ ಚಿತ್ರಾ ಕಾರಂತ್ ಮಾರ್ಗದರ್ಶನದಡಿ ಕಾಲೇಜು ಆರಂಭಿಸಿದ್ದರು. ಸಂಸ್ಥೆಯ ಕಾರ್ಯದರ್ಶಿಯಾಗಿ ಶ್ಯಾಮಲಾ ಗಣೇಶ್ ಕಾರ್ಯನಿರ್ವಹಿಸುತ್ತಿದ್ದಾರೆ.

2022-23ನೇ ಶೈಕ್ಷಣಿಕ ವರ್ಷದಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಶಿಕ್ಷಣ ನೀಡುತ್ತಾ ರಾಜ್ಯದ ಗಮನ ಸೆಳೆದಿದೆ. ವಿಜ್ಞಾನ ವಿಭಾಗದಲ್ಲಿಪಿಸಿಎಂಬಿ, ಪಿಸಿಎಂಸಿ ಹಾಗೂ ವಾಣಿಜ್ಯ ವಿಭಾಗದಲ್ಲಿಸಿಇಬಿಎ, ಎಸ್ ಇಬಿಎ, ಎಬಿಸಿಎಸ್ ಪಠ್ಯಕ್ರಮ ಒಳಗೊಂಡಿದೆ. ಕ್ರೀಡೆ, ಸಾಂಸ್ಕೃತಿಕ, ನೈತಿಕ ಮೌಲ್ಯ, ಸಾಹಿತ್ಯ ಸಹಿತ ಇತರೆ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿಕ್ರೀಡೆ ಹಾಗೂ ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿರಾಜ್ಯ, ರಾಷ್ಟ್ರ ಮಟ್ಟದಲ್ಲಿಹತ್ತಾರು ಪ್ರಶಸ್ತಿ ಪಡೆದಿದೆ. ಸಿಇಟಿ, ನೀಟ್ , ಜೆಇಇ, ನಾಟಾ, ಸಿಎ, ಸಿಎಸ್ ಪರೀಕ್ಷೆ ತರಬೇತಿಯಲ್ಲಿಸಂಸ್ಥೆ ಅಗ್ರಸ್ಥಾನ ಪಡೆದಿದೆ.

ಸೌಲಭ್ಯಗಳು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಭವಿ ಉಪನ್ಯಾಸಕರಿಂದ ತರಬೇತಿ, ವಿಜ್ಞಾನ ವಿಭಾಗ ಆರಿಸಿಕೊಂಡು ಸಂಶೋಧನಾ ಕ್ಷೇತ್ರಕ್ಕೆ ಹೋಗ ಬಯಸುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಹಮ್ಮಿಕೊಂಡಿರುವ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ ಫೆಲೋಶಿಪ್ ಅವಾರ್ಡ್ ಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತರಗತಿ ಕಲಿಕೆಯ ಜತೆಗೆ ಪ್ರಾಯೋಗಿಕ ಜ್ಞಾನಕ್ಕಾಗಿ ಬಿಸಿನೆಸ್ ಡೇ, ಇಂಡಸ್ಟ್ರಿಯಲ್ ವಿಸಿಟ್ ಮೊದಲಾದ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಲಿಕೆಯಲ್ಲಿಹಿಂದುಳಿದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಸಂಜೆ ಉಚಿತ ವಿಶೇಷ ತರಗತಿಗಳು, ಮಧ್ಯಾಹ್ನ ಭೋಜನ ವ್ಯವಸ್ಥೆ. ದೂರದೂರುಗಳಿಂದ ಬರುವ ವಿದ್ಯಾರ್ಥಿಗಳಿಗಾಗಿ ಸುರಕ್ಷಿತ ಬಸ್ ವ್ಯವಸ್ಥೆ, ಸುಸಜ್ಜಿತ ಗ್ರಂಥಾಲಯ, ವಿಶಾಲ ಆಟದ ಮೈದಾನ, ಅತ್ಯಾಧುನಿಕ ಪ್ರಯೋಗಾಲಯಗಳು, ವಿಶಾಲ ಹಾಗೂ ಅತ್ಯಾಧುನಿಕ ಗಣಕಯಂತ್ರ ಕೊಠಡಿ, ಬಾಲಕ, ಬಾಲಕಿಯರಿಗಾಗಿ ಪ್ರತ್ಯೇಕ, ಸುಸಜ್ಜಿತ ಹವಾ ನಿಯಂತ್ರಿತ ಹಾಸ್ಟೆಲ್ ವ್ಯವಸ್ಥೆ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಸಮರ್ಪಣಾ ಎಜುಕೇಶನ್ ಟ್ರಸ್ಟ್ ಮೂಲಕ ಪ್ರೋತ್ಸಾಹಧನ, ವಿದ್ಯಾರ್ಥಿವೇತನ, ಕಾಲೇಜು ಆವರಣದಲ್ಲಿಯೇ ಸುಸಜ್ಜಿತ ಕ್ಯಾಂಟೀನ್ ವ್ಯವಸ್ಥೆ ಹೊಂದಿದೆ.

ಸಾಧನೆ: ಕೇಂದ್ರ ಸರಕಾರದ ಎನ್ ಟಿಎ ಪ್ರಾಧಿಕಾರ ನಡೆಸುವ ರಾಷ್ಟ್ರಮಟ್ಟದ ಜೆಇಇ ಮೈನ್ಸ್ 2026ರ ಪ್ರಥಮ ಹಂತದ ಪರೀಕ್ಷೆಯಲ್ಲಿಕಾಲೇಜಿನ ವಿದ್ಯಾರ್ಥಿಗಳಾದ ಧೀರಜ್ ಜಿ.ಡಿ., ಮಾನ್ಯ ಪೂಜಾರಿ, ಶ್ರೇಯಸ್ ಪಿ.ಗಾಣಿಗ, ಶ್ರೀರಾಮ್ ಪಿ.ಭಟ್ , ಶ್ರೀಧಾನ್ ಎಂ.ಶೆಟ್ಟಿ, ನಹುಷ್ ಚಂದ್ರ ಬಿಲ್ಲವ, ಆಯುಷ್ ಯು.ಮೆಂಡನ್ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಐಐಟಿ ಬಾಂಬೆ ನಡೆಸುವ ಬ್ಯಾಚುಲರ್ ಆಫ್ ಡಿಸೈನ್ ಕೋರ್ಸ್ ಪ್ರವೇಶ ಪಡೆಯಲು ನಡೆಯುವ ಯುಸೀಡ್ -2026 ಪ್ರವೇಶ ಪರೀಕ್ಷೆಯಲ್ಲಿಸುಜಲ್ ತೋಳಾರ್ ಅಮೋಘ ಪ್ರಥಮ ಪ್ರಯತ್ನದಲ್ಲೇ ರಾಷ್ಟ್ರಮಟ್ಟದಲ್ಲಿಕೆಟಗರಿ ವಿಭಾಗದಲ್ಲಿ179ನೇ ರಾರ ಯಂಕ್ ಪಡೆದು ಮುಂದಿನ ಹಂತದ ಕೌನ್ಸೆಲಿಂಗ್ ಗೆ ಅರ್ಹತೆ ಪಡೆದಿದ್ದಾರೆ.

ಕಂಪನಿ ಸೆಕ್ರೆಟರಿ ಪ್ರವೇಶ ಪರೀಕ್ಷೆ(ಸಿಎಸ್ )ಯಲ್ಲಿಪರೀಕ್ಷೆ ಬರೆದ 44 ವಿದ್ಯಾರ್ಥಿಗಳಲ್ಲಿದಾಖಲೆಯ 42 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಸಂಸ್ಥೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಇನ್ ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ನಡೆಸಿದ ಸಿಎಸ್ ಇಇಟಿ ಪರೀಕ್ಷೆ ಬರೆದ 43 ವಿದ್ಯಾರ್ಥಿಗಳಲ್ಲಿ41 ವಿದ್ಯಾರ್ಥಿಗಳು ಅತ್ಯಧಿಕ ಅಂಕ ಪಡೆಯುವ ಮೂಲಕ ಸಿಎಸ್ ಎಕ್ಸಿಕ್ಯೂಟಿವ್ ಪ್ರೋಗ್ರಾಂಗೆ ಅರ್ಹತೆ ಪಡೆದಿದ್ದಾರೆ. ಕ್ರೀಡೆಯಲ್ಲಿಕಾಲೇಜಿನ 41 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಐವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕೋಟ್ :

ಕೃಷಿ, ಕೂಲಿ ಕಾರ್ಮಿಕರು, ಬಡ ಕುಟುಂಬದ ಮಕ್ಕಳು, ಆರ್ಥಿಕವಾಗಿ ಅಶಕ್ತವಾಗಿರುವ ಸಾಮಾನ್ಯ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಭಾಗವಹಿಸಿ ಉತ್ತಮ ರೀತಿಯಲ್ಲಿಜೀವನ ಕಟ್ಟಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ. ನಮ್ಮ ಉದ್ದೇಶ ಈಡೇರಿದೆ ಎನ್ನುವ ಖುಷಿ ಇದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿಸಾಧನೆ ಮಾಡುತ್ತಿರುವುದು ಜನತಾ ಸಂಸ್ಥೆಗೆ ಹೆಮ್ಮೆಯ ವಿಷÜಯ.

-ಗಣೇಶ್ ಮೊಗವೀರ, ಅಧ್ಯಕ್ಷರು/ಪ್ರಿನ್ಸಿಪಾಲ್ , ಜನತಾ ಪಪೂ ಕಾಲೇಜು, ಹೆಮ್ಮಾಡಿ

ಫೊಟೋ: 19ಕೆ-ಎಚ್ ಇಎಂ

ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜು.

ಫೊಟೋ: 19ಕೆ-ಜಿಎಎನ್

ಪ್ರಿನ್ಸಿಪಾಲ್ ಗಣೇಶ್ ಮೊಗವೀರ.