ಶ್ರೀ ಶಂಕರ ಬೇಲೂರು ರಾಮಮೂರ್ತಿ ಬಾಟಂ

Contributed byShridevi Ambekallu|Vijaya Karnataka

ಶ್ರೀ ಶಂಕರಾಚಾರ್ಯರು ಅಮರುಕ ರಾಜನ ದೇಹದಲ್ಲಿ ಪ್ರವೇಶಿಸಿ ನಂತರ ತಮ್ಮ ದೇಹಕ್ಕೆ ಮರಳಿದ ಕಥೆ ಇದು. ಉಭಯಭಾರತಿಯ ಪ್ರಶ್ನೆಗಳಿಗೆ ಉತ್ತರಿಸಲು ಪರಕಾಯ ಪ್ರವೇಶ ಮಾಡಬೇಕಾಯಿತು. ತಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಶಿಷ್ಯರಿಗೆ ಆದೇಶ ನೀಡಿದರು. ಅಂತಿಮವಾಗಿ, ತಮ್ಮ ದೇಹವನ್ನು ಪಡೆದು ಉಭಯಭಾರತಿಯನ್ನು ಎದುರಿಸಿದರು. ಉಭಯಭಾರತಿ ತನ್ನ ಅವತಾರ ಮುಗಿಸಿ ಹೊರಟಳು.

shri shankaracharyas parakaya pravesha the story of amuraka raja

ಶಂಕರಾಚಾರ್ಯರ ಪರಕಾಯ ಪ್ರವೇಶ ಪ್ರಸಂಗ

-----

ಬೇಲೂರು ರಾಮಮೂರ್ತಿ

---

ಶ್ರೀ ಶಂಕರಾಚಾರ್ಯರ ಸೂಕ್ಷ ್ಮಶರೀರ ಅಮರುಕ ರಾಜನ ಶರೀರದಲ್ಲಿಪ್ರವೇಶಿಸಿದ್ದು ಏಕೆ? ನಂತರ ನಡೆದದ್ದು ಏನು? ಕುತೂಹಲ ಕಥನ ಇಲ್ಲಿದೆ.

---

ಪರಶಿವ ಶಂಕರಾಚಾರ್ಯರಾಗಿ, ಬ್ರಹ್ಮ ಮಂಡನಮಿಶ್ರರಾಗಿ ಸರಸ್ವತಿ ಉಭಯಭಾರತಿ (ಸರಸವಾಣಿ) ಯಾಗಿ ಸನಾತನ ಧರ್ಮದ ಪುನರುತ್ಥಾನಕ್ಕಾಗಿ ಅವತರಿಸಿದವರು. ಶಂಕರಾಚಾರ್ಯರು ವ್ಯಾಸರು ರಚಿಸಿದ್ದ ಬ್ರಹ್ಮಸೂತ್ರಗಳಿಗೆ ಅದ್ವೈತ ಸಿದ್ಧಾಂತ ಪ್ರಕಾರ ಭಾಷ್ಯಗಳನ್ನು ಬರೆದಿದ್ದರು. ಭಾಷ್ಯಗಳನ್ನು ವ್ಯಾಸರು ಮೆಚ್ಚಿದ್ದರಿಂದ ಶಂಕರಾಚಾರ್ಯರಿಗಿದ್ದ 16 ವರ್ಷ ಆಯಸ್ಸನ್ನು ದ್ವಿಗುಣವಾಯಿತು. ತಮ್ಮ ಭಾಷ್ಯಗಳಿಗೆ ವಾರ್ತಿಕಗಳನ್ನು ಬರೆಯಬಲ್ಲಸಮರ್ಥ ಪಂಡಿತರನ್ನು ಹುಡುಕುತ್ತಿದ್ದ ಶಂಕರಾಚಾರ್ಯರಿಗೆ ಕುಮಾರಸ್ವಾಮಿ ಅವತಾರದ ಭಟ್ಟಪಾದರ ವಿಚಾರ ತಿಳಿಯಿತು. ಶಂಕರಾಚಾರ್ಯರು ಅಲ್ಲಿಗೆ ಹೋದಾಗ ವೇದಗಳನ್ನೇ ಪರೀಕ್ಷೆಗೆ ಒಡ್ಡಿದ್ದರಿಂದ ಪ್ರಾಯಶ್ಚಿತ್ತ ಪೂರ್ವಕವಾಗಿ ಭಟ್ಟಪಾದರು ತುಷಾನಲ (ಕುತ್ತಿಗೆಯವರೆಗೂ ಭತ್ತದ ಹೊಟ್ಟಿನಲ್ಲಿಕೂತು ಬೆಂಕಿ ಹಚ್ಚಿಕೊಂಡಿರವುದು) ಪ್ರವೇಶಿಸಿದ್ದರು.

ಶಂಕರರಿಂದ ವಿಷಯ ತಿಳಿದುಕೊಂಡ ಭಟ್ಟಪಾದರು, ‘ಮಾಹೀಷ್ಪತಿ ನಗರದಲ್ಲಿರುವ ನನ್ನ ಶಿಷ್ಯ ಮಂಡನಮಿಶ್ರ ಕರ್ಮಕಾಂಡ ಪಂಡಿತ. ನೀನು ಅವನಲ್ಲಿಗೆ ಹೋಗು. ಅವನನ್ನು ವಾದದಲ್ಲಿಗೆದ್ದು, ನಂತರ ಅವನಿಂದಲೇ ನಿನ್ನ ಭಾಷ್ಯಗಳಿಗೆ ವಾರ್ತಿಕಗಳನ್ನು ಬರೆಸು’ ಎಂದು ಆಶೀರ್ವದಿಸಿ ಕಳಿಸುತ್ತಾರೆ.

ಭಟ್ಟಪಾದರ ಸಲಹೆಯಂತೆ ಶಂಕರಾಚಾರ್ಯರು ಮಂಡನಮಿಶ್ರರ ಮನೆಗೆ ಬಂದಾಗ ಮುಂಬಾಗಿಲು ಹಾಕಿರುತ್ತದೆ. ಒಳಗೆ ಮಂಡನಮಿಶ್ರರು ಅವರ ತಂದೆಯ ಶ್ರಾದ್ಧ ಕರ್ಮಗಳಲ್ಲಿತೊಡಗಿರುತ್ತಾರೆ. ಶಂಕರಾಚಾರ್ಯರು ನಭೋಮಂಡಲದಿಂದ ಮನೆಯ ಒಳಗಿಳಿದಾಗ ಅಪರಿಚಿತ ಯತಿಯನ್ನು ಕಂಡು ಕೋಪಗೊಂಡ ಮಂಡನಮಿಶ್ರರು ‘ಮನೆಯಲ್ಲಿಹಿರಿಯರ ಶ್ರಾದ್ಧ ನಡೆಯುತ್ತಿರುವಾಗ ನಿನ್ನಂತಹ ಯತಿ ಹೀಗೆ ನುಗ್ಗಬಹುದೇ’ ಎಂದು ಕೇಳುತ್ತಾರೆ. ಶಂಕರಾಚಾರ್ಯರು ‘ಹಿರಿಯರ ಶ್ರಾದ್ಧದ ದಿವಸ ಮನೆಯ ಮುಂಬಾಗಿಲು ತೆರೆದಿರಬೇಕು ಎನ್ನುವುದು ನಿಮಗೆ ತಿಳಿದಿಲ್ಲವೇ’ ಎನ್ನುತ್ತಾರೆ. ನಂತರ ಶಂಕರಾಚಾರ್ಯರು ತಾವು ಬಂದಿರುವ ಉದ್ದೇಶ ತಿಳಿಸಿದ ಮೇಲೆ ಅವರಿಬ್ಬರ ನಡುವೆ ಕರ್ಮಕಾಂಡ ಮತ್ತು ಜ್ಞಾನಕಾಂಡಗಳ ಬಗೆಗಿನ ಚರ್ಚೆಗೆ ವೇದಿಕೆ ಸಿದ್ಧವಾಗುತ್ತದೆ. ಚರ್ಚೆಯಲ್ಲಿಶಂಕರಾಚಾರ್ಯರು ಸೋತರೆ ಸಂಸಾರಿಯಾಗಬೇಕು, ಮಂಡನಮಿಶ್ರರು ಸೋತರೆ ಸನ್ಯಾಸಿಯಾಗಬೇಕು ಎನ್ನುವ ನಿಯಮ ನಿಶ್ಚಯವಾಗುತ್ತದೆ. ಮಂಡನಮಿಶ್ರರ ಪತ್ನಿ ಉಭಯಭಾರತಿಯೇ ನಿರ್ಣಾಯಕಳು.

‘ನಾನು ತೀರ್ಪುಗಾರಳಾಗಿ ಇಲ್ಲಿದ್ದರೆ ನಿಮ್ಮ ಆತಿಥ್ಯಕ್ಕೆ ತೊಂದರೆಯಾಗುತ್ತದೆ. ಅದಕ್ಕೆ ಪ್ರತಿದಿನ ಚರ್ಚೆ ಪ್ರಾರಂಭವಾಗುವಾಗ ನಿಮ್ಮಿಬ್ಬರ ಕೊರಳಿಗೂ ಹೂವಿನ ಹಾರ ಹಾಕಿರುತ್ತೇನೆ. ಕೊರಳಿನ ಹಾರ ಒಣಗಿದವರು ಚರ್ಚೆಯಲ್ಲಿಸೋತಂತೆ’ ಎನ್ನುತ್ತಾಳೆ. ಶಂಕರಾಚಾರ್ಯರಿಗೂ, ಮಂಡನಮಿಶ್ರರಿಗೂ ಇದು ಸಮ್ಮತವಾಗುತ್ತದೆ. ಸುಮಾರು ದಿನಗಳ ಚರ್ಚೆಯ ಬಳಿಕ ಒಂದು ದಿನ ಮಂಡನಮಿಶ್ರರ ಕೊರಳಿನ ಹಾರ ಒಣಗುತ್ತದೆ. ಮಂಡನಮಿಶ್ರರು ಸೋಲೊಪ್ಪಿಕೊಂಡು ಸುರೇಶ್ವರಾಚಾರ್ಯ ಎನ್ನುವ ಅಭಿದಾನದಿಂದ ಶಂಕರಾಚಾರ್ಯರ ಎರಡನೇ ಶಿಷ್ಯರಾಗುತ್ತಾರೆ. ಪತಿ ಸೋತು ಸನ್ಯಾಸಿಯಾಗಲೇಬೇಕಾದ ಸಂಗತಿಯನ್ನು ಉಭಯಭಾರತಿ ಕೈ ಮುಗಿದು ‘ಇಬ್ಬರೂ ಯತಿಗಳು ಫಲಾಹಾರಕ್ಕೆ ದಯಮಾಡಿಸಬೇಕು’ ಎಂದು ಮಾರ್ಮಿಕವಾಗಿ ಹೇಳುತ್ತಾಳೆ. ಗೆಲುವಿನ ಸಂತಸದಲ್ಲಿದ್ದ ಶಂಕರಾಚಾರ್ಯರಿಗೆ ಉಭಯಭಾರತಿ ‘ನೀವು ಚರ್ಚೆಯಲ್ಲಿಅರ್ಧ ಮಾತ್ರ ಗೆದ್ದಿದ್ದೀರ. ನಾನು ಮಂಡನಮಿಶ್ರರ ಅರ್ಧಾಂಗಿ. ನನ್ನನ್ನೂ ಗೆದ್ದರೆ ಮಾತ್ರ ಪೂರ್ತಿ ಗೆದ್ದಂತೆ’ ಎನ್ನುತ್ತಾಳೆ.

ಶಂಕರಾಚಾರ್ಯರು, ‘ಯತಿಗಳಿಗೆ ಸ್ತ್ರೀಯರೊಂದಿಗೆ ಚರ್ಚೆ ನಿಶಿದ್ಧ’ ಎನ್ನುತ್ತಾರೆ. ‘ಹಾಗಾದರೆ ಸೋಲೊಪ್ಪಿಕೊಳ್ಳಿ’ ಎನ್ನುತ್ತಾಳೆ ಉಭಯಭಾರತಿ. ವಿಧಿಯಿಲ್ಲದೇ ಶಂಕರಾಚಾರ್ಯರು ಚರ್ಚೆಗೆ ಒಪ್ಪುತ್ತಾರೆ. ಶಂಕರಾಚಾರ್ಯರೊಂದಿಗೆ ಚರ್ಚೆಯಲ್ಲಿಸೋಲುವುದು ಪುಣ್ಯವೆಂದುಕೊಂಡ ಉಭಯಭಾರತಿ ‘ಯತಿವರ್ಯರೇ ಕಾಮಕಲೆಗಳು ಒಟ್ಟು ಎಷ್ಟು ? ಅವು ಪುರುಷರು ಮತ್ತು ಸ್ತ್ರೀಯರಲ್ಲಿಗೋಚರಿಸುವುದು ಹೇಗೆ, ಶುಕ್ಲಪಕ್ಷ ಮತ್ತು ಕೃಷ್ಣ ಪಕ್ಷಗಳಲ್ಲಿಅವುಗಳ ಸ್ವರೂಪ ಏನು?’ ಎಂದು ಕೇಳುತ್ತಾಳೆ.

ಉಭಯಭಾರತಿಯ ಪ್ರಶ್ನೆಗಳಿಗೆ ಉತ್ತರಿಸಬೇಕು, ಇಲ್ಲವೇ ಸೋತೆನೆಂದು ಒಪ್ಪಿಕೊಳ್ಳಬೇಕು. ಎಂತಹ ಸಂದಿಗ್ಧ ಎಂದುಕೊಂಡು ಶಂಕರಾಚಾರ್ಯರು ಪ್ರಶ್ನೆಗಳಿಗೆ ಉತ್ತರಿಸಲು ಉಭಯಭಾರತಿಯಿಂದ ಸಮಯಾವಕಾಶ ಪಡೆಯುತ್ತಾರೆ. ಸಮಸ್ಯೆಯಿಂದ ಹೊರಬರಲು ಪರಕಾಯ ಪ್ರವೇಶವೊಂದೇ ಮಾರ್ಗವೆಂದರಿತು ಶಿಷ್ಯರಿಗೆ ತಮ್ಮ ಸ್ಥೂಲ ಶರೀರವನ್ನು ರಕ್ಷಿಸಿಕೊಂಡಿರಲು ಆದೇಶಿಸಿ ಸೂಕ್ಷ್ಮ ಶರೀರದಿಂದ ಸಂಚಾರ ಮಾಡುತ್ತಿರುವಾಗ ಕೆಲ ಕ್ಷಣಗಳ ಹಿಂದೆ ಸಾವನ್ನಪ್ಪಿರುವ ಅಮರುಕ ರಾಜ ನ ಶರೀರ ಕಾಣಿಸುತ್ತದೆ. ಶಂಕರಾಚಾರ್ಯರ ಸೂಕ್ಷ ್ಮಶರೀರ ಅಮರುಕ ರಾಜನ ಶರೀರದಲ್ಲಿಪ್ರವೇಶಿಸಿದಾಗ ಅಮರುಕ ರಾಜ ನಿದ್ದೆಯಿಂದ ಎಚ್ಚರಗೊಂಡವನಂತೆ ಎದ್ದು ಕೂರುತ್ತಾನೆ. ‘ಮಹಾರಾಜರು ಸತ್ತಿಲ್ಲ, ಬದುಕಿದ್ದಾರೆ’ ಎನ್ನುವ ವಾರ್ತೆ ಅರಮನೆಯವರೆಲ್ಲರಿಗೂ ಸಂತಸ ತರುತ್ತದೆ. ಅಮರುಕ ರಾಜನ ಶರೀರದಲ್ಲಿದ್ದ ಶಂಕರಾಚಾರ್ಯರ ಸೂಕ್ಷತ್ರ್ಮಶರೀರ ಸಂಸಾರ, ಪತಿ, ಪತ್ನಿಯರ ಅನುಬಂಧ, ಹೆಣ್ಣುಗಳ ಸ್ವಭಾವ, ಹಾವಭಾವ, ಇವುಗಳ ಅಧ್ಯಯನದಲ್ಲಿದ್ದರೂ ರಾಣಿಯರುಗಳಿಂದ ದೈಹಿಕವಾಗಿ ಅಂತರ ಕಾಪಾಡಿಕೊಂಡಿರುತ್ತಾರೆ. ‘ಈಚೆಗೆ ನÜಮ್ಮ ರಾಜರು ನಮ್ಮಿಂದ ದೂರವಿರುತ್ತಾರೆ, ಅವರು ಮೊದಲಿನ ಹಾಗಿಲ್ಲ’ ಎಂದು ಅನುಮಾನಿಸಿದ ರಾಣಿಯರು ಮಂತ್ರಿಗೆ ತಿಳಿಸುತ್ತಾರೆ. ಸ್ವತಃ ಮಂತ್ರಿಯೂ ರಾಜರ ಸ್ವಭಾವಗಳಲ್ಲಿಆದ ಬದಲಾವಣೆಗಳನ್ನು ಗಮನಿಸಿರುತ್ತಾರೆ. ಯಾವುದೋ ಆತ್ಮ ನಮ್ಮ ರಾಜರ ದೇಹದಲ್ಲಿಸೇರಿಕೊಂಡಿರಬಹುದು ಎನಿಸಿದಾಗ ಮಂತ್ರಿ ಸೈನಿಕರಿಗೆ ‘ನಮ್ಮ ರಾಜ್ಯದಲ್ಲೆಲ್ಲಾಸುತ್ತಾಡಿ, ಅನಾಥ ಶವ ಕಾಣಿಸಿದರೆ ಸುಟ್ಟುಬಿಡಿ’ ಎಂದು ಆದೇಶಿಸುತ್ತಾನೆ.

ಗುರುಗಳ ದೇಹವನ್ನು ಸಂರಕ್ಷಿಸಿಕೊಂಡಿದ್ದ ಶಿಷ್ಯರಿಗೆ ತುಂಬಾ ದಿವಸಗಳಾದರೂ ಗುರುಗಳು ಹಿಂದಿರುಗಲಿಲ್ಲವೆಂದು ಆತಂಕವಾಗಿ ಇಬ್ಬರು ಶಿಷ್ಯರು ಶರೀರವನ್ನು ಕಾಯುತ್ತಿದ್ದು ಇನ್ನಿಬ್ಬರು ಶಿಷ್ಯರು ಗುರುಗಳನ್ನು ಹುಡುಕಿಕೊಂಡು ಹೊರಟಾಗ ಶಂಕರಾಚಾರ್ಯರ ಮೊದಲ ಶಿಷ್ಯರು ಸನಂದನಾಚಾರ್ಯರು ಜೊತೆಯಾಗುತ್ತಾರೆ. ಕೆಲ ದಿನಗಳಲ್ಲಿಅಮರುಕ ರಾಜ ಸತ್ತು ಬದುಕಿದ ವಿಚಾರ ತಿಳಿದು ಅರಮನೆಗೆ ಹೋದಾಗ ರಾಜನಲ್ಲಿರುವ ಆತ್ಮ ನಮ್ಮ ಗುರುಗಳದೇ ಎಂದು ಗೊತ್ತಾಗುತ್ತದೆ. ಗುರುಗಳ ಗಮನ ಸೆಳೆಯಲು ಉಪಾಯವೊಂದನ್ನು ಕಂಡುಕೊಂಡ ಸನಂದನಾಚಾರ್ಯರು ರಾಜರ ರೂಪದಲ್ಲಿದ್ದ ಗುರುಗಳನ್ನೇ ನೋಡುತ್ತಾ ‘ಮಹತ್ಕಾರ್ಯ ಸಾಧನೆಗಾಗಿ ನಿನ್ನ ಗೂಡು ಬಿಟ್ಟು ಬಂದಿರುವ ಹಕ್ಕಿ ನೀನು. ನಿನ್ನ ಸಮಯವಿಲ್ಲಿಮುಗಿದಿದೆ. ಅಲ್ಲಿನಿನ್ನ ಕೆಲಸಗಳು ಬಾಕಿಯಿದೆ’ ಎನ್ನುವ ಅರ್ಥ ಬರುವಂತೆ ಹಾಡುತ್ತಾರೆ. ಹಾಡು ಕೇಳಿ ತಮ್ಮ ಶಿಷ್ಯ ಸನಂದನಾಚಾರ್ಯರನ್ನು ಗುರುತಿಸಿದ ಅಮರುಕನ ದೇಹದಲ್ಲಿದ್ದ ಶಂಕರಾಚಾರ್ಯರ ಸೂಕ್ಷತ್ರ್ಮಶರೀರ ತಕ್ಷಣವೇ ಅಮರುಕ ರಾಜನ ದೇಹ ಬಿಡುತ್ತದೆ. ಇದ್ದಕ್ಕಿದ್ದಂತೆ ಮತ್ತೆ ಅಮರುಕ ರಾಜ ಸಾಯುತ್ತಾನೆ. ಶಂಕರಾಚಾರ್ಯರ ಸೂಕ್ಷತ್ರ್ಮಶರೀರ ನಭೋಮಾರ್ಗದಿಂದ ತಮ್ಮ ಸ್ಥೂಲಶರೀರವಿರುವ ಕಡೆ ಬರುವಷ್ಟರಲ್ಲಿಸೈನಿಕರು ಶಂಕರಾಚಾರ್ಯರ ದೇಹವನ್ನು ನೋಡಿ ಶಿಷ್ಯರು ಪ್ರತಿಭಟಿಸುತ್ತಿದ್ದರೂ ದೇಹಕ್ಕೆ ಬೆಂಕಿ ಹಾಕಿಬಿಡುತ್ತಾರೆ. ಅಷ್ಟರಲ್ಲಿಶಂಕರಚಾರ್ಯರ ಸೂಕ್ಷತ್ರ್ಮಶರೀರ ಸ್ಥೂಲಶರೀರವನ್ನು ಪ್ರವೇಶಿಸಿರುತ್ತದೆ. ಅಗ್ನಿಯ ಕಾವು ಶರೀರದ ಅನುಭವಕ್ಕೆ ಬರುತ್ತಿದ್ದಂತೆ ಶಂಕರಾಚಾರ್ಯರು ಗಂಗೆಯನ್ನು ಸ್ತುತಿಸಿದಾಗ ಮಳೆ ಬಂದು ಅಗ್ನಿ ನಂದುತ್ತದೆ.

ತಮ್ಮ ಸ್ಥೂಲಶರೀರದಿಂದ ಶಂಕರಾಚಾರ್ಯರು ಎಲ್ಲಶಿಷ್ಯರೊಂದಿಗೆ ಮತ್ತೆ ಉಭಯಭಾರತಿಯಲ್ಲಿಗೆ ಬಂದು ‘ನಿನ್ನ ಪ್ರಶ್ನೆಗಳಿಗೆ ಉತ್ತರಿಸಲು ನಾನು ಸಿದ್ಧನಾಗಿದ್ದೇನೆ’ ಎನ್ನುತ್ತಾರೆ. ಆಗ ಉಭಯಭಾರತಿ ‘ನಿನ್ನನ್ನು ಪರೀಕ್ಷಿಸಲೆಂದೇ ನಾನು ಅಂಥಾ ಪ್ರಶ್ನೆಗಳನ್ನು ಕೇಳಿದ್ದು. ನಿನಗೆ ಗೊತ್ತಿಲ್ಲದಿರುವುದು ಏನೂ ಇಲ್ಲವೆಂದು ನನಗೆ ಗೊತ್ತಿತ್ತು. ಸರಸ್ವತಿಯಾದ ನಾನು ಉಭಯಭಾರತಿಯಾದ ಅವತಾರದಲ್ಲಿಹೀಗೇ ನಡೆಯಬೇಕಿತ್ತು, ನಡೆದಿದೆ. ಚರ್ಚೆಯಲ್ಲಿನಿನ್ನೊಂದಿಗೆ ನಾನು ಸೋಲೊಪ್ಪಿ್ಪಕೊಳ್ಳುವುದರೊಂದಿಗೆ ನನ್ನ ಅವತಾರವೂ ಮುಗಿಯಿತು, ನಾನು ಹೊರಡುತ್ತೇನೆ’ ಎನ್ನುತ್ತಾಳೆ.

ಆಗ ಶಂಕರಾಚಾರ್ಯರು ‘ಮುಂದೆ ನಾನು ಸ್ಥಾಪನೆ ಮಾಡಲಿರುವ ಆಮ್ನಾಯ ಪೀಠಗಳಲ್ಲಿನೀನು ಶಾರದಾಭಿದಾನದಿಂದ ದೇವತೆಯಾಗಿ ನೆಲೆಸಿ ಭಕ್ತರನ್ನು ಅನುಗ್ರಹಿಸಬೇಕು’ ಎಂದು ಉಭಯಭಾರತಿಯನ್ನು ಪ್ರಾರ್ಥಿಸುತ್ತಾರೆ. ಅದಕ್ಕೆ ಸಮ್ಮತಿಸಿ ಅವಳು ಹೊರಡುತ್ತಾಳೆ.