ಕಾಂಗ್ರೆಸ್ ನಿಂದ ನಾರಿಶಕ್ತಿಗೆ ಅಪಮಾನ: ಎಂಪಿಆರ್
ಹೊನ್ನಾಳಿ: ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲುಂಟಾದ ಕೂಡಲೆ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷದ ಮುಖಂಡರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದು ಬಿಜೆಪಿಗೆ ಮಾಡಿದ ಅವಮಾನ ಅಲ್ಲಈ ದೇಶದ ನಾರಿಶಕ್ತಿಗೆ ಮಾಡಿದ ಅಪಮಾನ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್ ನಡೆಯನ್ನು ಖಂಡಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಮಹಿಳೆಯರ ಹಕ್ಕುಗಳನ್ನು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಕಸಿದುಕೊಂಡಂತಾಗಿದೆ. ಕೂಡಲೆ ಕಾಂಗ್ರೆಸ್ ಹಾಗೂ ಇತರ ಮಿತ್ರಪಕ್ಷಗಳು ಮಹೀಳೆಯರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಮಸೂದೆ ಪರ ಎಲ್ಲರೂ ಮತ ಹಾಕಿದ್ದರೆ ಮಹಿಳೆಯರಿಗೂ ಸಮಾನ ಅವಕಾಶ ಸಿಗುತ್ತಿತ್ತು. ಕ್ಷೇತ್ರ ಮರು ವಿಂಗಡಣೆಯಾಗಿ ಲೋಕಸಭೆಗೆ 543ರ ಬದಲು 850 ಸ್ಥಾನಗಳಿಗೇರುತ್ತಿತ್ತು, ಆಗ ಲೋಕಸಭೆಯಲ್ಲಿಮಹಿಳೆಯರ ಧ್ವನಿ ಹೆಚ್ಚಾಗುತ್ತಿತ್ತು. ಲೋಕಸಭೆಯಲ್ಲಿಮಹಿಳೆಯರ ಧ್ವನಿ ಅಡಗಿಸಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್ , ನಿಕಟಪೂರ್ವ ಅಧ್ಯಕ್ಷ ಸುರೇಶ್ ಜೆ.ಕೆ., ಮುಖಂಡರಾದ ಶಿವಾನಂದ್ , ಮಂಜುನಾಥ್ ನೆಲಹೊನ್ನೆ, ಬೀರಪ್ಪ, ಮಾರುತಿ ನಾಯ್ ್ಕ, ಕರಿಬಸವಯ್ಯ ರೆಡ್ಡಿ, ಮಹೇಶ್ ಹುಡೇದ್ , ಕೋಟೆಹಾಳ್ ಮಲ್ಲೇಶ, ಪಲ್ಲವಿ ರಾಜು ಇತರರಿದ್ದರು.
-----

