ದಿನಭವಿಷ್ಯ 20 ಏಪ್ರಿಲ್ 2026
ಶ್ರೀಪತಿ ಭಟ್ | ಬೆಂಗಳೂರು
-----
(ಮಿಥುನ, ಸಿಂಹ, ಕನ್ಯಾ, ಮಕರ-ಈ ನಾಲ್ಕು ರಾಶಿಯವರಿಗೆ ರಾಜ ಯೋಗ)
-------------------
ಮೇಷ : ಕುಟುಂಬ ಸದಸ್ಯರಲ್ಲಿಮೂಡಿರುವ ಮನಸ್ತಾಪವನ್ನು ಮುಕ್ತ ಮನಸ್ಸಿನ ಮಾತುಕತೆಗಳಿಂದ ಸರಿಪಡಿಸಿಕೊಳ್ಳಬಹುದು. ಅಕ್ಕಪಕ್ಕದಲ್ಲಿನ ಭಿನ್ನಾಭಿಪ್ರಾಯಗಳಿಗೆ ಪ್ರತಿಕ್ರಿಯಿಸುವುದು ಸಮಂಜಸವಲ್ಲ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಗುಲಾಬಿ)
--------------
ವೃಷಭ : ಒಡಹುಟ್ಟಿದವರ ಮಾತುಗಳು ಮನಸ್ಸನ್ನು ಹಾಳು ಮಾಡಬಹುದು. ಆತ್ಮೀಯರೊಂದಿಗೆ ಮನೆಯಲ್ಲಿನಡೆಯಬೇಕಾಗಿರುವ ಶುಭ ಕಾರ್ಯದ ಬಗ್ಗೆ ಮಾತುಕತೆ ನಡೆಸಿ.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಕಪ್ಪು)
-----------
ಮಿಥುನ: ಹೊಸ ರೀತಿಯ ಚಿಂತನೆಗಳು ಫಲಕಾರಿಯಾಗಲು ಸಮಯ ಹಿಡಿದರೂ ಫಲ ನಿಶ್ಚಿತ ಎಂಬುದು ಮನದಟ್ಟಾಗಿದೆ. ಹಿರಿಯರನ್ನು ತೀರ್ಥಯಾತ್ರೆಗೆ ಕಳುಹಿಸುವ ಬಗ್ಗೆ ವರ್ತಮಾನವನ್ನು ವಿಶ್ಲೇಷಿಸಿ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಪಚ್ಚೆ)
----------
ಕರ್ಕ: ಗುರು ಹಿರಿಯರ ನಂಬಿಕೆ ಉಳಿಸಿಕೊಂಡು ಹೋಗುವ ಬಗ್ಗೆ ಗಮನವಿರಲಿ. ಯಾವುದೇ ಬದಲಾವಣೆಗೂ ಸೂಕ್ತ ಕಾಲ. ಹಂತ ಹಂತವಾಗಿ ಕುಟುಂಬದಲ್ಲಿನೆಮ್ಮದಿ ಕಾಣುವಿರಿ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕಂದು)
------------
ಸಿಂಹ : ವಾಹನಗಳ ಅಥವಾ ಯಂತ್ರೋಪಕರಣಗಳ ಬಿಡಿ ಭಾಗಗಳ ಮಾರಾಟಗಳಿಂದ ಲಾಭವಿದೆ. ಜೀವನದಲ್ಲಿಅತಿಯಾಗಿ ನಂಬುವ ವ್ಯಕ್ತಿಗಳ ಜೊತೆ ಸಮಯ ಕಳೆಯುವಿರಿ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಕಿತ್ತಳೆ)
---------------
ಕನ್ಯಾ: ಕೈಗೊಂಡ ಸಂಸ್ಥೆಯ ಅಥವಾ ವೈಯಕ್ತಿಕ ಅಭಿವೃದ್ಧಿ ಕಾರ್ಯಗಳೆಲ್ಲಾಉತ್ತಮ ರೀತಿಯಲ್ಲಿನಡೆದು ಹೋಗುವುದು. ಶ್ರಮವು ಮುಂದಿನ ದಿನಗಳಿಗೆ ಅಡಿಪಾಯವಾಗಿ ಪರಿಣಮಿಸಲಿದೆ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಹಳದಿ)
-------------
ತುಲಾ : ತೈಲ ವ್ಯಾಪಾರ ವ್ಯವಹಾರಗಳಲ್ಲಿಪೈಪೋಟಿಗಳು ಹೆಚ್ಚಿದ್ದರೂ ನಿಮ್ಮ ಯೋಚನೆಗೆ ಸರಿಯಾದ ತೃಪ್ತಿಕರ ಆದಾಯವಿರುವುದು. ಆಯ್ಕೆ ಸರಿಯಾಗಿದ್ದು ಕೆಲಸಗಳನ್ನು ನಿರ್ಭಯವಾಗಿ ಮುಗಿಸುವಲ್ಲಿಯಶಸ್ವಿಯಾಗುವಿರಿ.
(ಶುಭ ಸಂಖ್ಯೆ : 4 ಅದೃಷ್ಟ ಬಣ್ಣ : ಆಕಾಶನೀಲಿ)
-----------------
ವೃಶ್ಚಿಕ : ವೃತ್ತಿಯ ಬದುಕಿನಲ್ಲಿಬೆಳಕಿಗೆ ಬರಲು ಅನುಕೂಲವಾಗಿರುವ ಮುಖ್ಯ ಸಲಹೆಯೊಂದರನ್ನು ಪಡೆಯಲಿದ್ದೀರಿ. ಔದಾರ್ಯ ತೋರಬೇಕೆನಿಸಿದ್ದಲ್ಲಿಹಣಕಾಸಿನ ಸ್ಥಿತಿ ಗಮನಿಸಿಕೊಳ್ಳಿ.
(ಶುಭ ಸಂಖ್ಯೆ :6, ಅದೃಷ್ಟ ಬಣ್ಣ : ನೀಲಿ)
-----------------
ಧನು : ಭವಿಷ್ಯದ ಯೋಜನೆಗಳಿಗೆ ಹೆಚ್ಚು ಗಮನ ಕೊಡುವುದರಿಂದ ಗುರಿ ತಲುಪಲು ಸಾಧ್ಯವಾಗುವುದು. ಭಾವನೆಗಳಿಗೆ ಬೆಲೆ ಕೊಡುವ ಸಹಚರರನ್ನು ಹೊಂದುವಿರಿ. ಸಾಧನೆಯಲ್ಲಿಮೇಲುಗೈ ನಿಮ್ಮದಾಗಿರುವುದು.
(ಶುಭ ಸಂಖ್ಯೆ :8, ಅದೃಷ್ಟ ಬಣ್ಣ : ಬೂದು)
-----------
ಮಕರ : ಜೀವನ ನಡೆಸಲು ಹಿರಿಯರ ಮಾರ್ಗದರ್ಶನ ಸಿಗಲಿದೆ. ಕುಟುಂಬದ ಗಣ್ಯರಿಂದ ಬದುಕಿನ ದಾರಿಯ ಬಗ್ಗೆ ಮಾರ್ಗದರ್ಶನ ಸಿಗುತ್ತದೆ. ಕುಶಲಕರ್ಮಿಗಳಿಗೆ ಪ್ರದರ್ಶನ-ಮಾರಾಟದಿಂದ ಅಧಿಕ ಆದಾಯ ಬರುವುದು.
(ಶುಭ ಸಂಖ್ಯೆ :9, ಅದೃಷ್ಟ ಬಣ್ಣ : ಬಿಳಿ)
--------------
ಕುಂಭ :ಅಗತ್ಯವಿಲ್ಲದ ವಿಚಾರಗಳ ಬಗ್ಗೆ ಮಾತನಾಡುವುದಾಗಲಿ ಅಥವಾ ಸಲಹೆ ನೀಡುವುದಾಗಲಿ ಸರಿಯಲ್ಲ. ರೈತರಿಗೆ ಮತ್ತು ವಿದ್ಯಾರ್ಥಿ ವರ್ಗಕ್ಕೆ ಪ್ರಯತ್ನ ಬಲಕ್ಕೆ ಉತ್ತಮ ಫಲ ದೊರೆಯುವುದು.
(ಶುಭ ಸಂಖ್ಯೆ :1, ಅದೃಷ್ಟ ಬಣ್ಣ : ಹಸಿರು)
-----------
ಮೀನ : ವಿಭಿನ್ನ ರೀತಿಯ ಕೆಲಸವೊಂದನ್ನು ವೃತ್ತಿ ಸ್ನೇಹಿತರೊಬ್ಬರು ನಿಮಗೊಪ್ಪಿಸಲಿದ್ದಾರೆ. ಎಣ್ಣೆ ಮತ್ತು ಬೇಳೆ ಕಾಳು ವ್ಯಾಪಾರದಲ್ಲಿಮಾರಾಟ ಉತ್ತಮವಾಗಿರುವುದು. ಚರ್ಮರೋಗಗಳು ಬರಬಹುದು.
(ಶುಭ ಸಂಖ್ಯೆ 2, ಅದೃಷ್ಟ ಬಣ್ಣ :ಕೆಂಪು)

