ಸಾಂಸ್ಕೃತಿಕ ನಾಯಕ ಜಯಂತಿಗೆ ನಗರ ಸಜ್ಜು

Contributed byvenkatesh.narasappa@timesgroup.com|Vijaya Karnataka

ಕಲಬುರಗಿ ನಗರವು ಬಸವಣ್ಣನವರ 893ನೇ ಜಯಂತಿಯ ಸಂಭ್ರಮದಲ್ಲಿದೆ. ನಗರವು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದೆ. ಜಗತ್ ವೃತ್ತದಲ್ಲಿ ನೂತನ ಅನುಭವ ಮಂಟಪದ ಮಾದರಿಯಲ್ಲಿ ಅಲಂಕಾರ ಮಾಡಲಾಗಿದೆ. ನೂರಾರು ಬಸವ ಧ್ವಜಗಳನ್ನು ಅಳವಡಿಸಲಾಗಿದೆ. ಸೋಮವಾರ ಸಂಜೆ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

grand basava jayanti celebration in the city

ಚಿತ್ರ: ಬಸವಣ್ಣ ಚಿತ್ರ ಬಳಸಿ

ಚಿತ್ರ: ಇನ್ನೂ ಚಿತ್ರ ಬರಲಿವೆ

**

ಇಡೀ ನಗರ ಬಸವಮಯ | ನೂರಾರು ಬಸವ ಧ್ವಜಗಳ ಅನಾವರಣ | ಜಗತ್ ವೃತ್ತಕ್ಕೆ ನೂತನ ಅನುಭವ ಮಂಟಪದ ಅಲಂಕಾರ(ಕಿಕ್ಕರ್ )

ಸಾಂಸ್ಕೃತಿಕ ನಾಯಕ ಜಯಂತಿಗೆ ನಗರ ಸಜ್ಜು

ವಿಕ ಸುದ್ದಿಲೋಕ ಕಲಬುರಗಿ

ಸಾಂಸ್ಕೃತಿಕ ನಾಯಕ ಬಸವಣ್ಣನವರ 893ನೇ ಜಯಂತಿ ಪ್ರಯುಕ್ತ ಬಸವ ಜಯಂತ್ಯುತ್ಸವ ಸಮಿತಿಯಿಂದ ಅದ್ಧೂರಿಯಾಗಿ ಸೋಮವಾರ ನಡೆಯಲಿದ್ದು, ಈಗಾಗಲೇ ಕಲಬುರಗಿ ನಗರ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿದೆ.

ಜಗತ್ ವೃತ್ತದಲ್ಲಿರುವ ಬಸವೇಶ್ವರ ಮೂರ್ತಿಗೆ ಅರಮನೆಯ ಮಾದರಿಯ ಕಲಾಕೃತಿ, ಕಾಯಕ ಶರಣರ ಭಾವಚಿತ್ರಗಳು ಪ್ರದರ್ಶನ, ಇಡೀ ಬಸವೇಶ್ವರ ಮೂರ್ತಿ ಆವರಣದಲ್ಲಿನೂರಾರು ಬಸವ ಧ್ವಜ ಅನಾವರಣ ಮಾಡಿದ್ದು, ಸಂಪೂರ್ಣ ಜಗತ್ ವೃತ್ತಕ್ಕೆ ಬಸವಕಲ್ಯಾಣದಲ್ಲಿನಿರ್ಮಿಸುತ್ತಿರುವ ನೂತನ ಅನುಭವ ಮಂಟಪದ ಅಲಂಕಾರ ಮಾಡಿದ್ದು ನೋಡುಗರಿಗೆ ಆಕರ್ಷಣೀಯ ಎನ್ನಿಸುವಂತಾಗಿದೆ. ಅಷ್ಟೇ ಅಲ್ಲಕೆಲ ವಚನಗಳ ಸಾಲುಗಳು ಹಾಕಲಾಗಿದೆ. ಕೆಲವರು ಅಲ್ಲಲ್ಲಿಜಯಂತ್ಯುತ್ಸವ ಶುಭಾಶಯ ಬ್ಯಾನರ್ ಗಳು ಕಂಗೊಳಿಸುತ್ತಿವೆ. ಜಗತ್ ವೃತ್ತದಿಂದ ಎಸ್ ವಿಪಿ ವೃತ್ತದವರೆಗೆ ಬಸವ ಧ್ವಜಗಳು ರಾರಾಜಿಸುತ್ತಿವೆ. ಸೇಡಂ ರಸ್ತೆ, ಜೇವರ್ಗಿ ರಸ್ತೆ, ಹುಮನಾಬಾದ್ , ಆಳಂದ ರಸ್ತೆಗಳಲ್ಲಿಬೃಹತ್ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಇಡೀ ನಗರದಲ್ಲಿಸುಮಾರು 6000ಕ್ಕೂ ಅಧಿಕ ಬಸವ ಧ್ವಜಗಳನ್ನು ಅಳವಡಿಸಲಾಗಿದೆ.

ಬಸವೇಶ್ವರ ಮೂರ್ತಿ ಜಾಗದಲ್ಲಿಸಂಪೂರ್ಣ ವಿದ್ಯುತ್ ದೀಪಗಳಿಂದ ವಿಜೃಂಭಿಸುತ್ತಿದೆ. ಜಿಲ್ಲಾಡಳಿತ ಮತ್ತು ಮತ್ತು ಬಸವ ಜಯಂತ್ಯುತ್ಸವ ಸಮಿತಿಯಿಂದ ನಡೆಯುವ ನಾನಾ ಕಾರ್ಯಕ್ರಮಗಳ ತಯಾರಿ ನಡೆದಿವೆ. ಎಲ್ಲಸರಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿಬಸವ ಜಯಂತಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

**ಇಂದು ಅದ್ಧೂರಿ ಮೆರವಣಿಗೆ : ಬಸವ ಜಯಂತಿ ಉತ್ಸವ ಸಮಿತಿಯಿಂದ ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಸೋಮವಾರ ಸಂಜೆ 5ಗಂಟೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಕಾಯಕ ಶರಣರ ಭಾವಚಿತ್ರಗಳ ಭವ್ಯ ಮೆರವಣಿಗೆ ನಡೆಯಲಿದೆ. ವಿವಿಧ ಕಲಾ ತಂಡಗಳು, ಮಹಿಳೆಯಿಂದ ಪೂರ್ಣಕುಂಭ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಅಧ್ಯಕ್ಷ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅಧ್ಯಕ್ಷತೆಯಲ್ಲಿಎಂಎಲ್ಸಿ ಶಶೀಲ ನಮೋಶಿ, ಎಚ್ ಕೆಇ ಮಾಜಿ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಉದ್ಘಾಟಿಸಲಿದ್ದಾರೆ.

ಬಾಕ್ಸ್ ...

ಚಿತ್ರ: 19ಜಿಎಲ್ ಬಿ40 ಮತ್ತು 43

ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ (ಶಿವಯೋಗ) ಮತ್ತು ಲಿಂಗದೀಕ್ಷೆಯಲ್ಲಿಸಚಿವ ಡಾ.ಶರಣಪ್ರಕಾಶ್ ಪಾಟೀಲ…, ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಬಿ.ಆರ್ .ಪಾಟೀಲ…, ಕಾರ್ಯಾಧ್ಯಕ್ಷ ಬಿ.ಜಿ. ಪಾಟೀಲ…, ಶಾಸಕ ಅಲ್ಲಮಪ್ರಭು ಪಾಟೀಲ…, ಬಸವರಾಜ ದೇಶಮುಖ ಇತರರಿದ್ದರು.

(ಕಿಕ್ಕರ್ ) ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ (ಶಿವಯೋಗ) ಮತ್ತು ಲಿಂಗದೀಕ್ಷೆ ಕಾರ್ಯಕ್ರಮ ನಡೆಯಿತು.

ಸಾಮೂಹಿಕ ಇಷ್ಟಲಿಂಗ ಪೂಜೆ

ಬಸವ ಜಯಂತಿ ಪ್ರಯುಕ್ತ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ (ಶಿವಯೋಗ) ಮತ್ತು ಲಿಂಗದೀಕ್ಷೆ ಕಾರ್ಯಕ್ರಮ ನಡೆಯಿತು.

ಇಳಕಲ್ ನ ಮಹಾಂತೇಶ್ವರ ಮಠದ ಶ್ರೀಗುರು ಮಹಾಂತ ಮಹಾಶಿವಯೋಗಿಗಳು, ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ಮಾತಾಜಿ, ಅತ್ತಿವೇರಿಯ ಶ್ರೀ ಬಸವೇಶ್ವರಿ ಮಾತಾಜಿ ಮಾರ್ಗದರ್ಶನದಲ್ಲಿಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಡಾ.ದಾಕ್ಷಾಯಿಣಿ ಎಸ್ ಅಪ್ಪ, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಸಮ್ಮುಖದಲ್ಲಿಸಾಮೂಹಿಕ ಇಷ್ಟಲಿಂಗ ಪೂಜೆ (ಶಿವಯೋಗ) ಮತ್ತು ಲಿಂಗದೀಕ್ಷೆ ಕಾರ್ಯಕ್ರಮ ನೆರವೇರಿದವು. ಇಷ್ಟಲಿಂಗ ಪೂಜೆಯಲ್ಲಿಭಾಗವಹಿಸಿದ್ದ 1000ಕ್ಕೂ ಹೆಚ್ಚು ಬಸವ ಭಕ್ತರಿಗೆ ಇಷ್ಟಲಿಂಗ, ಒಂದು ಪ್ಲೇಚ್ , ವಿಭೂತಿ, ಹೂವು, ಬಿಲ್ವಪತ್ರಿ ಸೇರಿ ಪೂಜಾ ಸಾಮಗ್ರಿಗಳನ್ನು ಸಮಿತಿ ವತಿಯಿಂದಲೇ ವಿತರಿಸಲಾಗಿಯಿತು.

ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ…, ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಬಿ.ಆರ್ . ಪಾಟೀಲ…, ಕಾರ್ಯಾಧ್ಯಕ್ಷ ಬಿ.ಜಿ. ಪಾಟೀಲ…, ಶಾಸಕ ಅಲ್ಲಮಪ್ರಭು ಪಾಟೀಲ…, ಬಸವರಾಜ ದೇಶಮುಖ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರವೀಂದ್ರ ಶಾಬಾದಿ, ಆರ್ .ಜಿ.ಶೆಟಗಾರ, ಡಾ.ಭಾಗ್ಯಶ್ರೀ ಪಾಟೀಲ್ ಇತರರಿದ್ದರು.

ಬಾಕ್ಸ್ ....

ಚಿತ್ರ: 19ಜಿಎಲ್ ಬಿ31 ಮತ್ತು 32

ಬಸವ ಜಯಂತಿ ನಿಮಿತ್ತ ಬಸವ ಮಿತ್ರ ಮಂಡಳದಿಂದ 12ನೇ ವರ್ಷದ ಬೃಹತ್ ಕಾರ್ ರಾರ ಯಲಿ ಭಾನುವಾರ ಅದ್ದೂರಿಯಾಗಿ ನಡೆಯಿತು.

ಅದ್ಧೂರಿ ಕಾರ್ ರಾರ ಯಲಿ

ಬಸವ ಜಯಂತಿ ನಿಮಿತ್ತ ಬಸವ ಮಿತ್ರ ಮಂಡಳದಿಂದ 12ನೇ ವರ್ಷದ ಬೃಹತ್ ಕಾರ್ ರಾರ ಯಲಿ ಭಾನುವಾರ ಅದ್ದೂರಿಯಾಗಿ, ಸಡಗರ ಸಂಭ್ರಮದಿಂದ ನಡೆಯಿತು. ನಗರದ ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಡಾ.ದೊಡ್ಡಪ್ಪ ಅಪ್ಪ ಚಾಲನೆ ನೀಡಿದರು. 800ಕ್ಕೂ ಹೆಚ್ಚು ಕಾರ್ ಗಳು ಭಾಗವಹಿಸಿದ್ದವು. ಶರಣಬಸವೇಶ್ವರ ದೇವಸ್ಥಾನದಿಂದ ಆರಂಭವಾದ ರಾರ ಯಲಿಯು ಆನಂದ ಹೋಟೆಲ್ , ಸರ್ದಾರ್ ವಲ್ಲಭಭಾಯಿ ಪಟೇಲ್ , ಅನ್ನಪೂರ್ಣ ವೃತ್ತ ಮಾರ್ಗವಾಗಿ ಜಗತ್ ವೃತ್ತ ತಲುಪಿತು. ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಾರ ಯಲಿ ಸಂಪನ್ನಗೊಂಡಿತು. ಕಾರ್ ನಲ್ಲಿಕುಳಿತ ಯುವಕರು ಬಸವಣ್ಣನವರ ಭಾವಚಿತ್ರ ಇರುವ ಧ್ವಜಗಳನ್ನು, ಪೋಸ್ಟರ್ ಗಳನ್ನು ಹಿಡಿದು ಬಸವೇಶ್ವರರಿಗೆ ಜೈಕಾರ ಕೂಗಿದರು.