ಅಕ್ಷಯ ತೃತೀಯ: ಕರಾವಳಿಯಲ್ಲಿಖರೀದಿ ಸಡಗರ

Contributed bystevan.rego@timesgroup.com|Vijaya Karnataka

ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಅಕ್ಷಯ ತೃತೀಯದಂದು ಚಿನ್ನಾಭರಣ ಮತ್ತು ಗ್ಯಾಜೆಟ್‌ಗಳ ಖರೀದಿಯ ಸಡಗರ ಮನೆ ಮಾಡಿದೆ. ಬಿಸಿಲು, ಸೆಕೆಯ ನಡುವೆಯೂ ಗ್ರಾಹಕರು ಚಿನ್ನ, ವಜ್ರಾಭರಣ, ಬೆಳ್ಳಿ ಸಾಮಗ್ರಿಗಳ ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಚಿನ್ನದ ದರ ಏರಿಕೆಯಾದರೂ ಸಾಧಾರಣ ವ್ಯಾಪಾರ ವಹಿವಾಟು ನಡೆದಿದೆ. ಮೊಬೈಲ್, ಟಿವಿ, ಫ್ರಿಡ್ಜ್‌ಗಳ ಖರೀದಿಯೂ ಉತ್ತಮವಾಗಿದೆ.

akshay tritiya buying frenzy in coastal karnataka with rising prices

ನಗರದ ಚಿನ್ನಾಭರಣ ಮಳಿಗೆಗಳಿಗೆ ಉತ್ತಮ ಗ್ರಾಹಕರು * ಎರಡು ದಿನಗಳ ಕಾಲ ಹಬ್ಬದ ವಾತಾವರಣ

ವಿಕ ಸುದ್ದಿಲೋಕ ಮಂಗಳೂರು

ಒಂದೆಡೆ ಬಿಸಿಲು, ಸೆಕೆಯ ನಡುವೆಯೂ ಕೂಡ ಅಕ್ಷಯ ತೃತೀಯ ಖರೀದಿಯ ಸಡಗರ ಮಂಗಳೂರು ಸೇರಿದಂತೆ ಜಿಲ್ಲೆಯ ನಾನಾ ಭಾಗದಲ್ಲಿಮುಂದುವರಿದೆ. ಚಿನ್ನ, ಗ್ಯಾಜೆಟ್ ಖರೀದಿಯಲ್ಲಿಗ್ರಾಹಕರು ಹೆಚ್ಚಿನ ಆಸಕ್ತಿ ವಹಿಸಿದಂತೆ ಕಂಡುಬರುತ್ತಿದೆ.

ಅಕ್ಷಯ ತೃತೀಯ ಸಮಯದಲ್ಲಿಚಿನ್ನದ ಖರೀದಿಯ ವಿಚಾರದಲ್ಲಿಗ್ರಾಹಕರು ಹೆಚ್ಚಿನ ಆಸಕ್ತಿಯನ್ನು ವಹಿಸಿದರೂ ದರ ಹೆಚ್ಚಳ ಖರೀದಿಯ ಪ್ರಮಾಣವನ್ನು ಕಡಿಮೆ ಮಾಡಿದೆ ಎನ್ನುವುದು ಉದ್ಯಮ ನಿರತರ ಗಟ್ಟಿ ಅಭಿಪ್ರಾಯ. ಅದರೂ ಸಾಧಾರಣ ವ್ಯಾಪಾರ- ವಹಿವಾಟು ಎಲ್ಲೆಡೆಯಲ್ಲೂನಡೆದ ಪರಿಣಾಮ ಉದ್ಯಮಿಗಳು ಒಂಚೂರು ಖುಷಿಯಲ್ಲಿಇರುವಂತೆ ಮಾಡಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸಾಧಾರಣ ರೀತಿಯ ವ್ಯಾಪಾರ ನಡೆದಿದೆ ಎನ್ನುವುದು ಸ್ವರ್ಣೋದ್ಯಮಗಳು ಹೇಳುತ್ತಾರೆ.

ಚಿನ್ನ ಖರೀದಿಯ ಚೆನ್ನ: ಅಕ್ಷಯ ತೃತೀಯದಂದು ವಿಶೇಷವಾಗಿ ಜಿಲ್ಲೆಯ ಪ್ರಮುಖ ಜುವೆಲ್ಲರಿಗಳು ನಿಗದಿತ ಅವಧಿಗಿಂತ ಬೇಗನೆ ಎಂದರೆ ಬೆಳಗ್ಗೆ 8ಕ್ಕೆ ಆರಂಭವಾಗಿ ರಾತ್ರಿ 10 ರವರೆಗೂ ವ್ಯವಹಾರ ನಡೆಸಿದೆ. ಚಿನ್ನದ ನಾಣ್ಯ, ಚಿನ್ನಾಭರಣ, ವಜ್ರಾಭರಣ ಬೆಳ್ಳಿಯ ಸಾಮಗ್ರಿಗಳಿಗೂ ಸಾಕಷ್ಟು ಬೇಡಿಕೆ ಇತ್ತು. ಆದರೆ ಚಿನ್ನಾಭರಣಗಳ ಖರೀದಿ ಚಿನ್ನದ ನಾಣ್ಯಗಳ ಖರೀದಿಗಿಂತ ಹೆಚ್ಚಾಗಿತ್ತು ಎಂದು ಜುವೆಲ್ಲರಿ ಶಾಪ್ ನ ಮಾಲೀಕರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚಿನ್ನದ ದರದಲ್ಲಿಬಹಳಷ್ಟು ಹೆಚ್ಚಳ ಕಂಡುಕೊಂಡಿದೆ. 2024ರಲ್ಲಿಅಕ್ಷಯ ತೃತೀಯ ಸಮಯದಲ್ಲಿ10 ಗ್ರಾಂ ಚಿನ್ನದ ದರ 72 ಸಾವಿರ ರೂ. ಇದ್ದರೆ 2025ರಲ್ಲಿ 99 ಸಾವಿರ ರೂ. ಗಳಿಗೆ ಮುಟ್ಟಿತ್ತು. ಈ ಬಾರಿ ಏರಿಕೆಯ ಪ್ರಮಾಣ ಹೆಚ್ಚಿದ್ದು 1ಗ್ರಾಂ ಚಿನ್ನದ ದರ 15,578(24 ಕ್ಯಾರೆಟ್ ), 1ಗ್ರಾಂ 14,280(24 ಕ್ಯಾರೆಟ್ )ಗೆ ಬಂದು ತಲುಪಿದೆ.

‘‘ದರ ಏರಿಕೆಯಿಂದಾಗಿ ಖರೀದಿದಾರರು ಇದ್ದರೂ ಕೂಡ ಖರೀದಿಯ ಪ್ರಮಾಣ ಕಡಿಮೆಯಾಗಿದೆ. ಚಿನ್ನದ ನಾಣ್ಯಗಳಿಗಿಂತ ಹೆಚ್ಚಾಗಿ ಚಿನ್ನಾಭರಣದ ಖರೀದಿ ಇಂದು ಹೆಚ್ಚಿತ್ತು. ಒಟ್ಟಾರೆಯಾಗಿ ಅಕ್ಷಯ ತೃತೀಯ ಎಂದಿನಂತಹ ಖರೀದಿ ಇತ್ತು’’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾಜುವೆಲ್ಲರಿ ಮಾಲೀಕರ ಸಂಘದ ಕಾರ ್ಯದರ್ಶಿ ಪ್ರಶಾಂತ್ ಶೇಟ್ .

‘ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಉತ್ತಮ ವ್ಯವಹಾರ, ಗ್ರಾಹಕರು ಇದ್ದರು. ಸಂಜೆಯ ಬಳಿಕ ಮತ್ತೆ ಗ್ರಾಹಕರು ಬರ್ತಾ ಇದ್ರು. ನಾವು ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಮಳಿಗೆ ತೆರೆದಿದ್ದೇವು ಎನ್ನುತ್ತಾರೆ ನಗರದ ಕೆಎಸ್ ಆರ್ ರಾವ್ ರಸ್ತೆಯಲ್ಲಿರುವ ಎಸ್ .ಎಲ್ . ಶೇಟ್ ಜುವೆಲ್ಲರ್ಸ್ ಆ್ಯಂಡ್ ಡೈಮಂಡ್ ಹೌಸ್ ನ ಹೇಮಂತ್ ಶೇಟ್ .

ಅಕ್ಷಯ ತೃತೀಯ ಪರಿಕಲ್ಪನೆ ಬರೀ ಚಿನ್ನಕ್ಕೆ ಸೀಮಿತವಾಗಿಲ್ಲ. ಈ ಬಾರಿ ಗ್ಯಾಜೇಟ್ , ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ, ಮೋಟಾರ್ ವಾಹನಗಳ ಬುಕ್ಕಿಂಗ್ ವಿಚಾರದಲ್ಲೂಈ ಬಾರಿ ಹೆಚ್ಚಳ ಕಂಡಿದೆ. ವಿಶೇಷವಾಗಿ ನಾನಾ ಮೊಬೈಲ್ ಕಂಪನಿಗಳ ಮೊಬೈಲ್ ಖರೀದಿ, ಟಿವಿ, ಫ್ರಿಡ್ಜ್ ನಂತಹ ಐಟಂಗಳ ಖರೀದಿ ಉತ್ತಮವಾಗಿ ನಡೆದಿದೆ.

....

ಚಿತ್ರ: ಮಂಗಳೂರಿನ ಕೆ.ಎಸ್ .ರಾವ್ ರಸ್ತೆಯಲ್ಲಿರುವ ಎಸ್ .ಎಲ್ . ಶೇಟ್ ಜುವೆಲ್ಲರ್ಸ್ ಆ್ಯಂಡ್ ಡೈಮಂಡ್ ಹೌಸ್ ನಲ್ಲಿಅಕ್ಷಯ ತೃತೀಯದಂದು ಗ್ರಾಹಕರು ಖರೀದಿಯಲ್ಲಿತೊಡಗಿದರು.

ಚಿತ್ರ: 19ಎಂ- ಎಸ್ .ಎಲ್ . ಶೇಟ್ ಕೆಎಸ್ ರಾವ್