ಉಪನಗರ ರೈಲು; ಮೂರು ಪ್ಯಾಕೇಜ್ ಪೈಕಿ ಎರಡು ಫೈನಲ್

Contributed bymahyurgh@gmail.com|Vijaya Karnataka

ಬೆಂಗಳೂರು ಉಪನಗರ ರೈಲು ಯೋಜನೆಯ 'ಮಲ್ಲಿಗೆ' ಕಾರಿಡಾರ್‌ಗೆ ಸಂಬಂಧಿಸಿದಂತೆ ಎರಡು ಪ್ಯಾಕೇಜ್‌ಗಳ ಗುತ್ತಿಗೆ ಅಂತಿಮಗೊಂಡಿದೆ. ಆದರೆ, ಬೆನ್ನಿಗಾನಹಳ್ಳಿ ಮತ್ತು ಶೆಟ್ಟಿಹಳ್ಳಿ ನಡುವಿನ ಪ್ರಮುಖ ಕಾಮಗಾರಿಗೆ ಮರು ಟೆಂಡರ್‌ ಕರೆಯಲು ಬಿಎಸ್‌ಆರ್‌ಪಿ ನಿರ್ಧರಿಸಿದೆ. ಎನ್‌ಸಿಸಿ ಕಂಪನಿ ಮಾತ್ರ ಮೊದಲ ಪ್ಯಾಕೇಜ್‌ಗೆ ಬಿಡ್‌ ಸಲ್ಲಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕನಕ ಮಾರ್ಗದ ಕಾಮಗಾರಿ ನಾಲ್ಕು ಪ್ಯಾಕೇಜ್‌ಗಳಲ್ಲಿ ನಡೆಯಲಿದೆ.

major development in bengaluru suburban railway project two of three packages finalized

* ಬಿಎಸ್ ಆರ್ ಪಿ ಯೋಜನೆಯ ಮೊದಲ ಕಾರಿಡಾರ್ * ರಿಟೆಂಡರ್ ನಲ್ಲಿ1ನೇ ಪ್ಯಾಕೇಜ್ ಗೆ ಒಂದೇ ಕಂಪನಿ ಭಾಗಿ

ಮಯೂರ್ ಹೆಗಡೆ ಬೆಂಗಳೂರು

ಘ್ಕಿಞay್ಠ್ಟ.hಛಿಜdಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್ ಆರ್ ಪಿ) ‘ಮಲ್ಲಿಗೆ’ ಕಾರಿಡಾರ್ ಮರು ಟೆಂಡರ್ ನಲ್ಲಿಎರಡು ಪ್ಯಾಕೇಜ್ ಗಳ ಗುತ್ತಿಗೆ ನೀಡಲಾಗಿದೆ. ಆದರೆ, ಪ್ರಮುಖವಾದ ಬೆನ್ನಿಗಾನಹಳ್ಳಿ - ಶೆಟ್ಟಿಹಳ್ಳಿ ನಡುವಿನ ಕಾಮಗಾರಿಗೆ ಪುನಃ ಟೆಂಡರ್ ಕರೆಯಲು ಬಿಎಸ್ ಆರ್ ಪಿ ಯೋಜಿಸಿದೆ.

ಬಿಎಸ್ ಆರ್ ಪಿ ಯೋಜನೆಯಿಂದ ಎಲ್ ಆ್ಯಂಡ್ ಟಿ ಕಂಪನಿ 2025ರ ಮಾರ್ಚ್ನಲ್ಲಿಹಿಂದೆ ಸರಿದ ಬಳಿಕ ಮಲ್ಲಿಗೆ ಮಾರ್ಗವನ್ನು ಮೂರು ಪ್ಯಾಕೇಜ್ ಗಳಾಗಿ ವಿಂಗಡಿಸಿ ಮರುಟೆಂಡರ್ ಕರೆಯಲಾಗಿತ್ತು. ಆದರೆ, 1,085 ಕೋಟಿ ರೂ. ಮೊತ್ತದ ಮೊದಲ ಪ್ಯಾಕೇಜ್ ನ ಈ ಕಾಮಗಾರಿಗೆ ಎನ್ ಸಿಸಿ ಕಂಪನಿ ಹೊರತುಪಡಿಸಿ ಬೇರೆ ಯಾವುದೇ ಕಂಪನಿಗಳು ಬಿಡ್ ಸಲ್ಲಿಸಿಲ್ಲ. ಹೀಗಾಗಿ, ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ( ಕೆ-ರೈಡ್ ) ಪುನಃ ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ ಎನ್ನಲಾಗಿದೆ.

25.01ಕಿ.ಮೀ. ಉದ್ದದ ಬೆನ್ನಿಗಾನಹಳ್ಳಿ - ಚಿಕ್ಕಬಾಣಾವರ ‘ಮಲ್ಲಿಗೆ’ ಮಾರ್ಗದ ಮೊದಲ ಕಾರಿಡಾರ್ ನ ಭಾಗವಾಗಿರುವ ಈ ಕಾಮಗಾರಿ (7.79 ಕಿ.ಮೀ.) ಎತ್ತರಿಸಿದ ಮಾರ್ಗದ ವಿನ್ಯಾಸ ಮತ್ತು ನಿರ್ಮಾಣವನ್ನು ಒಳಗೊಂಡಿದೆ. ಬೆನ್ನಿಗಾನಹಳ್ಳಿ - ಶೆಟ್ಟಿಹಳ್ಳಿ ನಡುವೆ ವಯಾಡಕ್ಟ್ , ರಾರ ಯಂಪ್ ಗಳನ್ನು ನಿರ್ಮಿಸಬೇಕಿದೆ. ಮುಖ್ಯವಾಗಿ ಯಶವಂತಪುರ ಹಾಗೂ ಲೊಟ್ಟೆಗೊಲ್ಲಹಳ್ಳಿ ನಡುವೆ ಲೆವೆಲ್ - 1ರಲ್ಲಿಜಿಧಿಬಿಎ ರಸ್ತೆ ಮೇಲ್ಸೇತುವೆ, ಲೆವೆಲ್ 2ರಲ್ಲಿಬಿಎಸ್ ಆರ್ ಪಿ ಮಾರ್ಗ ಹೊಂದಿದ ಡಬಲ್ ಡೆಕ್ಕರ್ ಇದಾಗಲಿದೆ. ಮತ್ತಿಕೆರೆ ಮತ್ತು ಬೆನ್ನಿಗಾಗನಹಳ್ಳಿ ನಿಲ್ದಾಣವು ಇದರಲ್ಲಿಸೇರಿದೆ.

ಇದೇ ‘ಮಲ್ಲಿಗೆ’ ಮಾರ್ಗದ ಮರುಟೆಂಡರ್ ನ ಎರಡನೆ ಪ್ಯಾಕೇಜ್ ಬೆನ್ನಿಗಾನಹಳ್ಳಿ-ಹೆಬ್ಬಾಳ 11.59 ಕಿ.ಮೀ. ಹಾಗೂ ಯಶವಂತಪುರ -ಚಿಕ್ಕಬಾಣಾವರದ 5.80 ಕಿಮೀ ಮೂರನೇ ಪ್ಯಾಕೇಜ್ ಅನ್ನು ಪಿಜೆಬಿ ಎಂಜಿನಿಯರ್ಸ್ ಕಂಪನಿ ಪಡೆದುಕೊಂಡಿದೆ. ಇವು ಕ್ರಮವಾಗಿ 263 ಕೋಟಿ ರೂ. ಹಾಗೂ 103 ಕೋಟಿ ರೂ. ಮೊತ್ತದ ಕಾಮಗಾರಿಗಳಾಗಿವೆ. ಆದರೆ, ಇವುಗಳ ಕಾಮಗಾರಿ ಶುರುಮಾಡಲು ಇನ್ನಷ್ಟೇ ಕಾರ್ಯಾದೇಶ ನೀಧಿಡಧಿಬೇಧಿಕಿದೆ. ಅಲ್ಲದೆ, ಮೊದಲ ಪ್ಯಾಕೇಜ್ ಇವೆರಡಕ್ಕಿಂತ ಮುಖ್ಯವಾಗಿದೆ.

ಎಲ್ ಆ್ಯಂಡ್ ಟಿ ಕಂಪನಿಯು ಈ ಹಂತದ ಕೆಲಸವನ್ನು 859 ಕೋಟಿ ರೂ. ಮೊತ್ತಕ್ಕೆ ಗುತ್ತಿಗೆ ಪಡೆದಿತ್ತು. ಸುಮಾರು ಎರಡೂವರೆ ವರ್ಷ ಕೆಲಸ ಮಾಡಿದ ಈ ಕಂಪನಿ ಭೂಸ್ವಾಧೀನ ಸಮಸ್ಯೆ ಎದುರಿಸಿ ಟೆಂಡರ್ ನಿಂದ ಹಿಂದೆ ಸರಿಯಿತು. ಬಳಿಕ 2025ರ ನವೆಂಬರ್ ನಲ್ಲಿಕೆ-ರೈಡ್ ಮಲ್ಲಿಗೆ ಹಾಗೂ 46 ಕಿಮೀ ಉದ್ದದ ಹೀಲಲಿಗೆ- ರಾಜಾನುಕುಂಟೆ ಸಂಪರ್ಕಿಸುವ ಕನಕ ಮಾರ್ಗಕ್ಕೆ ಮರುಟೆಂಡರ್ ಕರೆದಿದೆ.

---ಬಾಕ್ಸ --

ನಾಲ್ಕು ಪ್ಯಾಕೇಜ್ ಗಳಲ್ಲಿಕನಕ ಮಾರ್ಗದ ಕಾಮಗಾರಿ

‘‘ಕನಕ ಮಾರ್ಗದ ಕಾಮಗಾರಿಗೆ ಈವರೆಗೆ ಮರುಟೆಂಡರ್ ಕರೆದಿಲ್ಲ. ಇದನ್ನು ನಾಲ್ಕು ಪ್ಯಾಕೇಜ್ ಗಳಾಗಿ ವಿಂಗಡಿಸಲಾಗಿದೆ. ಬೆನ್ನಿಗಾನಹಳ್ಳಿ- ಜಕ್ಕೂರು, ಹೀಲಲಿಗೆ ಬೆಳ್ಳಂದೂರು, ಬೆಳ್ಳಂದೂರು - ಬೆನ್ನಿಗಾನಹಳ್ಳಿ ಮತ್ತು ಜಕ್ಕೂರು ಹಾಗೂ ರಾಜಾನುಕುಂಟೆ ನಡುವೆ ಕೆಲಸ ನಡೆಸಲು ಯೋಜಿಸಲಾಗಿದೆ. ಇದರ ಡಿಪೋ ಸೋಲದೇವನಹಳ್ಳಿಯಲ್ಲಿನಿರ್ಮಾಣವಾಗಲಿದೆ,’’ ಎಂದು ಕೆ-ರೈಡ್ ಅಧಿಕಾರಿಯೊಬ್ಬರು ತಿಳಿಸಿದರು.

‘‘ ಪ್ರಸ್ತುತ ಯಶವಂತಪುರದಲ್ಲಿಇಂಟರ್ ಚೇಂಜ್ ನಿಲ್ದಾಣ ನಿರ್ಮಾಣ ಕೆಧಿಲಧಿಸಧಿವಧಿನ್ನು ಎನ್ ಸಿಸಿ ಕೈಗೊಂಡಿದೆ. ಈ ನಿಲ್ದಾಣ ಬೆನ್ನಿಗಾನಹಳ್ಳಿ - ಚಿಕ್ಕಬಾಣಾವರ ಮಾರ್ಗ ಹಾಗೂ ಮೊದಲ ಕಾರಿಡಾರ್ ಕೆಎಸ್ ಆರ್ - ದೇವನಹಳ್ಳಿ ಮಾರ್ಗವನ್ನು ಸಂಧಿಸಲಿದೆ. ಅದೇ ರೀತಿ ಭೂಸ್ವಾಧೀನ ಮುಂದುವರಿದ ಬಳಿಕ ಯಲಹಂಕ ಕನಕ ಕಾರಿಡಾರ್ ಸಂಧಿಸುವ ಇಂಟರ್ ಚೇಂಜ್ ನಿಲ್ದಾಣದ ಕೆಲಸ ಕೈಗೆತ್ತಿಕೊಳ್ಳಲಾಗುವುದು,’’ ಎಂದು ಅವರು ವಿವರಿಸಿದರು.

ಇದರ ಜತೆಗೆ, ಮಾರ್ಗದ ಸಿಗ್ನಲಿಂಗ್ ಕೆಲಸ ಹಾಗೂ ಮುಖ್ಯವಾಗಿ ಚೆನ್ನೈನ ಐಸಿಎಫ್ ರೋಲಿಂಗ್ ಸ್ಟಾಕ್ ಪಡೆಯಲು ಸರಧಿಕಾರದ ಜತೆ ಈಗಾಗಲೇ ಚರ್ಚಿಸಲಾಗಿದೆ. ಶೀಘ್ರ ಈ ಬಗ್ಗೆ ತೀರ್ಮಾನವಾಗುವ ವಿಶ್ವಾಸವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

----