ರಸ್ತೆ ಉಬ್ಬುಗಳಿಗೆ ಬಣ್ಣ ಬಳಿದ ಸಮತಾ ಟ್ರಸ್ಟ್
ವಿಕ ಸುದ್ದಿಲೋಕ ಎಚ್ .ಡಿ.ಕೋಟೆ
ಡಾ.ಬಿ.ಆರ್ .ಅಂಬೇಡ್ಕರ್ ಅವರ 135ನೇ ಹುಟ್ಟುಹಬ್ಬದ ಪ್ರಯುಕ್ತ ಎಚ್ .ಡಿ.ಕೋಟೆಯ ಆದಿಚುಂಚನಗಿರಿ ಶಾಲೆ ಮುಂಭಾಗ ಹಾಗೂ ಸೇಂಟ್ ಮೇರಿಸ್ ಶಾಲೆಯ ಮುಂಭಾಗದ ರಸ್ತೆಯ ಉಬ್ಬುಗಳಿಗೆ ಸಮತಾ ಟ್ರಸ್ಟ್ ಹಾಗೂ ನಂಬಿಕೆ ಸಿರಿಧಾನ್ಯ ಪೌಡರ್ ಕಂಪನಿ ವತಿಯಿಂದ ಬಣ್ಣ ಬಳಿದು, ರಿಪ್ಲೆಕ್ಟ್ ಲೈಟ್ ಅಳವಡಿಸಲಾಯಿತು.
ಈ ರಸ್ತೆಯಲ್ಲಿನಿತ್ಯ ಸಾವಿರಾರು ಸಾರ್ವಜನಿಕರು, ವಿದ್ಯಾರ್ಥಿಗಳು ಸಂಚರಿಸುವುದರಿಂದ ಅವರ ಹಿತ ದೃಷ್ಟಿಯಿಂದ ಆದಿಚುಂಚನಗಿರಿ ಹಾಗೂ ಸೇಂಟ್ ಮೇರಿಸ್ ಶಾಲೆ ಮುಂಭಾಗ ರಸ್ತೆ ಉಬ್ಬುಗಳಿಗೆ ಬಣ್ಣ ಬಳಿಯಲಾಗಿದೆ.
ನಂಬಿಕೆ ಸಿರಿಧಾನ್ಯ ಕಂಪನಿಯ ಮಾಲೀಕರಾದ ಮಿಲ್ ನಾಗರಾಜು, ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಹೈರಿಗೆ ಶಿವರಾಜು, ಸಮತಾ ಟ್ರಸ್ಟ್ ನ ಅಧ್ಯಕ್ಷ ರವೀಂದ್ರ, ಗೌರವಾಧ್ಯಕ್ಷ ಭೀಮನಹಳ್ಳಿ ಸೋಮೇಶ್ , ಕಾರ್ಯದರ್ಶಿ ಮಹೇಶ್ , ಖಜಾಂಚಿ ರಾಘವೇಂದ್ರ, ನಿರ್ದೇಶಕರಾದ ನಾಗೇಶ್ , ಮಹದೇವ, ಕುಮಾರ್ , ಮರಲಿಂಗಯ್ಯ ಹಾಜರಿದ್ದರು.

