ವಿಕ ಸುದ್ದಿಲೋಕ ಪಡುಬಿದ್ರಿ
ತಿಂಗಳ ಹಿಂದೆ ಪಡುಬಿದ್ರಿ, ಹೆಜಮಾಡಿ, ಮೂಲ್ಕಿ ಪರಿಸರದಲ್ಲಿಹಗಲು-ರಾತ್ರಿ ಸಾರ್ವಜನಿಕರ ಮನೆಗಳಿಗೆ ನುಗ್ಗಿ ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ಸಾರ್ವಜನಿಕರ ನೆರವಿನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ರೋಗಿ ಸಹಜ ಸ್ಥಿತಿಗೆ ಬಂದು ತನ್ನ ಊರಾದ ಕೇರಳದ ಸಂಬಂಧಿಕರ ವಶ ಸೇರಿದ್ದಾರೆ.
ಕೇರಳ ಮೂಲದ ಜಯರಾಜ್ (55) ಮನೋರೋಗಿಯಾಗಿದ್ದು, ವಿಶುಶೆಟ್ಟಿ ಅಂಬಲಪಾಡಿಯವರು ಸಾರ್ವಜನಿಕರ ನೆರವಿನಿಂದ ರಕ್ಷಿಸಿ ಚಿಕಿತ್ಸೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸಿದ ರೋಗಿ ತನ್ನ ಊರಾದ ಕೇರಳದ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಸಹೋದರಿ ಹಾಗೂ ಸಂಬಂಧಿಕರು ಉಡುಪಿಗೆ ಬಂದು ಕರೆದುಕೊಂಡು ಹೋಗಿದ್ದಾರೆ.
ವ್ಯಕ್ತಿ ಜಯರಾಜ್ ಬಹಳ ವರ್ಷ ಹೊರದೇಶದಲ್ಲಿಕೆಲಸ ಮಾಡಿದ್ದು, ಊರಲ್ಲಿಯೂ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ಯಾವುದೋ ಕಾರಣಕ್ಕೆ ಮಾನಸಿಕ ಅಸ್ವಸ್ಥರಾಗಿ ಕೇರಳದಿಂದ ಉಡುಪಿಗೆ ಬಂದು ಇದೀಗ ಸಹಜ ಸ್ಥಿತಿಗೆ ಬಂದಿದ್ದಾರೆ.
ಡಾ.ವಾಸುದೇವ, ಡಾ.ಸುನಿಲ್ , ಇಸಿಆರ್ ಸಿ ಸುರೇಶ್ , ಸಿಬ್ಬಂದಿಗಳು ಸಹಕರಿಸಿದ್ದರು.
ಫೋಟೋ:19ಎಚ್ ಕೆ3
ಕ್ಯಾ: ಮನೋರೋಗಿ ಜಯರಾಜ್ ಹಾಗೂ ಅವರನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ ತಂಡ.

