ವಿಕ ಸುದ್ದಿಲೋಕ ನಾಗರಮುನ್ನೋಳಿ
ಬಸವಣ್ಣವರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿನಡೆದರೆ ಜೀವನ ಪಾವನವಾಗುತ್ತದೆ ಎಂದು ಚಿಂಚಣಿ ಸಿದ್ಧ ಸಂಸ್ಥಾನ ಮಠದ ಉತ್ತರಾಧಿಧಿಕಾರಿ ಅಲ್ಲಮ ಪ್ರಭು ಶಿವಪ್ರಸಾದ ದೇವರು ಹೇಳಿದರು.
ಅವರು, ಬಸವೇಶ್ವರ ಜಯಂತಿ ಅಂಗವಾಗಿ ಗ್ರಾಮದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ‘ಮಹಾತ್ಮರ ಬದುಕು- ಬೆಳಕು’ ಪ್ರವಚನÜ ಕಾರ್ಯಕ್ರಮದಲ್ಲಿಮಾತನಾಡಿದರು. ‘‘ಬದುಕಿನ ಅಜ್ಞಾನದ ಅಂಧಕಾರ ಕಳೆಯಲು ಗುರುವಿನಿಂದ ಮಾತ್ರ ಸಾಧ್ಯ. ಅಂತಹ ಗುರುವನ್ನು ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು,’’ ಎಂದು ಅವರು ಹೇಳಿದರು.
ಕಬ್ಬೂರಿನ ಗೌರಿ ಶಂಕರ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘‘ಪರಿಶುದ್ಧ ಭಾವನೆಯಿಂದ ಭಕ್ತಿ ಮತ್ತು ಸೇವೆಗೆ ಬದುಕನ್ನು ಮುಡುಪಾಗಿಟ್ಟು ಮುಕ್ತಿ ಮಾರ್ಗ ಕಂಡುಕೊಳ್ಳಬೇಕು,’’ ಎಂದರು.
ಎಂ.ಎಸ್ . ಈಟಿ ಮಾತನಾಡಿದರು. ವೇದ ಮೂರ್ತಿ ಸಂತೋಷ ಶಾಸ್ತ್ರಿ, ಶಿವಪುತ್ರ ಮನಗೂಳಿ, ರಾಜು ಕುಂಬಾರ, ಡಾ. ಎಂ.ಬಿ.ಕುಂಬಾರ, ಎಂ.ಬಿ.ಆಲೂರೆ, ಮಹಾದೇವ ಚೌಗಲಾ, ಬಾಬು ಕಾಳನ್ನವರ, ಮನೋಜ ಮನಗೂಳಿ,ಗುಲಾಬ ಜಮಾದರ, ಡಾ. ಶಿವಕುಮಾರ ಬೆಳಗಲಿ, ರಾಘವೇಂದ್ರ ಬಡಿಗೇರ, ಸಾಗರ ಕೊಟಬಾಗಿ, ಸುನೀಲ ಮನಗೂಳಿ, ಮಹಾಲಿಂಗ ಬಸ್ತವಾಡೆ, ಬಸವರಾಜ ಮನಗೂಳಿ, ಶಿವಯ್ಯಾ ಹಿರೆಮಠ, ಮಹಾಂತೇಶ ಬೆಳಗಲಿ, ರವಿ ಕರೋಶಿ, ಮಹಾಂತೇಶ ಪಾಟೀಲ, ಸಿದ್ದು ಪಾಟೀಲ, ಹನುಮಂತ ಈಟಿ, ಪ್ರಕಾಶ ಹುಲ್ಲೋಳಿ, ಉಮೇಶ ಮನಗೂಳಿ,ರಮೇಶ ಕಾಳನ್ನವರ ಇದ್ದರು. ಅಶೋಕ ಮನಗೂಳಿ ಸ್ವಾಗತಿಸಿದರು
- 19 ನಾಗರ01
ನಾಗರಮುನ್ನೋಳಿ ಗ್ರಾಮದಲ್ಲಿಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ‘ಮಹಾತ್ಮರ ಬದುಕು- ಬೆಳಕು’ ಪ್ರವಚನÜ ಕಾರ್ಯಕ್ರಮದಲ್ಲಿಕಬ್ಬೂರಿನ ಗೌರಿ ಶಂಕರ ಮಠ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

