ಅತ್ಯಾಚಾರಕ್ಕೆ ಯತ್ನ: ದೂರು ದಾಖಲು ತಾಲೂಕಿನ ಗ್ರಾಮ ಒಂದರಲ್ಲಿಇಬ್ಬರು ಯುವಕರು ಕೂಡಿಕೊಂಡು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಕ್ಕೆ ಯತ್ನಿಸಿದ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶನಿವಾರ ಬೆಳಗಿನ ಜಾವ ಅಪ್ರಾಪ್ತೆ ಬಾಲಕಿ ಬರ್ಹಿದೇಸೆಗೆ ಬಂದಾಗ ಇಬ್ಬರು ಯುವಕರು ಅಪ್ರಾಪ್ತೆಯ ಕೈಕಾಲು ಕಟ್ಟಿ ಹಾಗೂ ಬಾಯಿಯಲ್ಲಿಬಟ್ಟೆ ತುರುಕಿ ಅತ್ಯಾಚಾರ ್ಯಕ್ಕೆ ಯತ್ನಿಸಿದಾಗ ವಾಹನ ಒಂದು ಆಗಮಿಸಿದಾಗ ಬಿಟ್ಟು ಓಡಿ ಹೋಗಿದ್ದಾರೆ. ಸ್ಥಳದಲ್ಲಿಮೊಬೈಲ್ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಒಬ್ಬರು ಮಾಹಿತಿ ನೀಡಿದರು. ಸುದ್ದಿ ತಿಳಿದ ಬಳಿಕ ಘಟನಾ ಸ್ಥಳಕ್ಕೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ ಹಾಗೂ ಸುರಪುರ ಡಿವೈಎಸ್ಪಿ ಜಾವೇದ ಇನಾಂದಾರ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.ಶಹಾಪುರ ಠಾಣೆಯಲ್ಲಿದೂರು ದಾಖಲಾಗಿದೆ. ಚಿತ್ರ ಸುದ್ದಿ19ಎಸ್ ಎಚ್ ಪಿ9- ಶಹಾಪುರ ನಗರದ ಹತ್ತಿರದ ದಿಗ್ಗಿ ಸಂಗಮೇಶ್ವರ ಬೆಟ್ಟದ ಮೇಲಿನ ಮರಗಳಿಗೆ ಬೆಂಕಿ ಹತ್ತಿರುವುದು. ದಿಗ್ಗಿ ಸಂಗಮೇಶ್ವರ ಬೆಟ್ಟದ ಬಳಿ ಬೆಂಕಿ ವಿಕ ಸುದ್ದಿಲೋಕ ಶಹಾಪುರ ನಗರಕ್ಕೆ ಹೊಂದಿಕೊಂಡಿರುವ ದಿಗ್ಗಿ ಸಂಗಮೇಶ್ವರ ಬೆಟ್ಟದ ಮೇಲೆ ಯಾರೊ ಕಿಡಿಗೇಡಿಗಳು ಬೆಟ್ಟದ ಮೇಲಿನ ಮರಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಬೇಸಿಗೆಯಲ್ಲಿಹುಲ್ಲುಒಣಗಿದ್ದರಿಂದ ಬೆಟ್ಟದ ತುಂಬೆಲ್ಲವ್ಯಾಪಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕೆಲಸ ನಡೆದಿದೆ ಎಂದು ಅಗ್ನಿಶಾಮಕ ದಳ ಅಧಿಕಾರಿ ಮಚೇಂದ್ರ ಅವರು ಮಾಹಿತಿ ನೀಡಿದರು.

