ಮಹಿಳಾ ವಿರೋಧಿ ಮಾನಸಿಕತೆ ಅನಾವರಣ

Contributed byshashidhar.nandikal@timesgroup.com|Vijaya Karnataka

ಬಿಜೆಪಿ ಸಂಸದ ಅನುರಾಗ್‌ ಸಿಂಗ್‌ ಠಾಕೂರ್‌ ಅವರು ಇಂಡಿಯಾ ಮೈತ್ರಿಕೂಟದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಮೀಸಲು ವಿಧೇಯಕವನ್ನು ವಿರೋಧಿಸಿ ಪ್ರತಿಪಕ್ಷಗಳು ಮಹಿಳೆಯರಿಗೆ ದ್ರೋಹ ಎಸಗಿವೆ ಎಂದು ಆರೋಪಿಸಿದ್ದಾರೆ. ಕುಟುಂಬ ಆಧಾರಿತ ಪಕ್ಷಗಳು ಮಹಿಳೆಯರ ಹಕ್ಕನ್ನು ಹತ್ತಿಕ್ಕುತ್ತಿವೆ ಎಂದು ಹೇಳಿದ್ದಾರೆ. 2011ರ ಜನಗಣತಿಯ ಆಧಾರದ ಮೇಲೆ ಸ್ಥಾನಗಳ ಹೆಚ್ಚಳದಿಂದ ದಕ್ಷಿಣ ಭಾರತಕ್ಕೆ ಯಾವುದೇ ನಷ್ಟ ಆಗುವುದಿಲ್ಲ ಎಂದು ವಿವರಿಸಿದ್ದಾರೆ.

bitter beliefs that wreck womens rights

ವಿಕ ಸುದ್ದಿಲೋಕ ಬೆಂಗಳೂರು ನಾರಿ ಶಕ್ತಿ ವಂದನಾ ಅಧಿನಿಯಮಕ್ಕೆ ಸೋಲಾದಾಗ ಇಂಡಿಯಾ ಮೈತ್ರಿಕೂಟ ಸಂಭ್ರಮಪಟ್ಟಿದ್ದು, ಇದು ಮಹಿಳಾ ವಿರೋಧಿ ಮಾನಸಿಕತೆ ಎಂದು ಬಿಜೆಪಿ ಸಂಸದ ಅನುರಾಗ್ ಸಿಂಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಭಾನು ವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ‘‘ಕಾಂಗ್ರೆಸ್ , ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷಗಳು 5ನೇ ಬಾರಿಗೆ ಮಹಿಳಾ ಮೀಸಲು ವಿಧೇಯಕವನ್ನು ತಡೆದಿವೆ. 2023ರಲ್ಲಿ ಪ್ರತಿಪಕ್ಷಗಳು 2024ರ ಚುನಾವಣೆ ಕಾರಣಕ್ಕಾಗಿ ಬೆಂಬಲಿಸಿದ್ದವು. ಈ ಪಕ್ಷಗಳ ಮಹಿಳಾ ವಿರೋಧಿ ನಿಲುವು ಮೊನ್ನೆ ಸಂಸತ್ತಿನಲ್ಲಿಜನರ ಮುಂದೆ ಬಯಲಾಗಿದೆ. ಪ್ರತಿಪಕ್ಷಗಳು ದೇಶದ ಶೇ.50ರಷ್ಟಿರುವ ಮಹಿಳೆಯರಿಗೆ ದ್ರೋಹವೆಸಗಿದ್ದಾರೆ,’’ ಎಂದು ಆರೋಪಿಸಿದರು. ‘‘ಕುಟುಂಬ ಆಧಾರಿತ, ಕೌಟುಂಬಿಕ ನಿರ್ವಹಣೆಯ ಪಕ್ಷಗಳು ದಿಲ್ಲಿಯ ಮಹಿಳೆಗೆ ಕೇರಳದ ವಯನಾಡ್ ನಿಂದ ಸ್ಪರ್ಧಿಸಲು ಅವಕಾಶ ಕೊಡುತ್ತವೆ. ಇತರ ಮಹಿಳೆಯರ ಸ್ಥಿತಿ ಹೀಗಿಲ್ಲ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯವು ಸಹಜ ಹಕ್ಕಾಗಿದೆ. ಈ ಹಕ್ಕು ನೀಡುವುದಕ್ಕೆ ವಿಳಂಬವಾಗಲು ಕಾಂಗ್ರೆಸ್ ಮತ್ತಿತರ ಪಕ್ಷಗಳೇ ಕಾರಣ,’’ ಎಂದು ಆಕ್ಷೇಪಿಸಿದರು. ‘‘2011ರ ಜನಗಣತಿಯನ್ನು ಪರಿಗಣಿಸಿದರೆ ತಮಿಳುನಾಡಿನಲ್ಲಿಕೇವಲ 10 ಸೀಟು ಹೆಚ್ಚಾಗಬೇಕಿತ್ತು. ಆದರೆ, ಅದು 59 ಆಗಲಿದೆ. ಕರ್ನಾಟಕದಲ್ಲೂ28 ಇದ್ದುದು 42 ಆಗಲಿದೆ. ಮಹಿಳೆಯರು, ಎಸ್ಸಿ, ಎಸ್ಟಿಗಳ ಪ್ರಾತಿನಿಧ್ಯ ಹೆಚ್ಚಾಗಲಿದೆ. ರಾಜ್ಯಗಳ ಪ್ರಾತಿನಿಧ್ಯವೂ ಹೆಚ್ಚಾಗುತ್ತದೆ. ಈಗ ಕೆಲವು ಕ್ಷೇತ್ರಗಳು 39 ಲಕ್ಷದಷ್ಟು ಮತದಾರರನ್ನು ಹೊಂದಿವೆ. ಇನ್ನೂ ಕೆಲವು ಸುಮಾರು 2 ಲಕ್ಷ ಮತದಾರರನ್ನು ಹೊಂದಿವೆ. ಸೀಟು ಏರಿಕೆ ಪ್ರಕ್ರಿಯೆಯಲ್ಲಿದಕ್ಷಿಣ ಭಾರತಕ್ಕೆ ಯಾವುದೇ ನಷ್ಟ ಆಗುವುದಿಲ್ಲ,’’ ಎಂದು ವಿವರಿಸಿದರು. ‘‘ದೇಶದ ಒಳಿತಿಗಾಗಿ ನಮ್ಮ ಸರಕಾರ ಜಿಎಸ್ಟಿ ತಿದ್ದುಪಡಿ ತಂದಿದೆ. ನಾವು 370ನೇ ವಿಧಿ ರದ್ದು ಮಾಡುವ ಸುಧಾರಣೆ ತಂದೆವು. ಭ್ರಷ್ಟ ರಾಜಕಾರಣಿಗಳಿಗೆ ಶಿಕ್ಷೆ ಕೊಡಲು ಮುಂದಾದೆವು. ಚುನಾವಣೆಗೆ ಆಗುವ ವೆಚ್ಚ ಕಡಿಮೆ ಮಾಡಲು ಒಂದು ದೇಶ, ಒಂದು ಚುನಾವಣೆಯನ್ನು ತರುವ ಉದ್ದೇಶವನ್ನು ತಿಳಿಸಿದೆವು. ನಾರಿ ಶಕ್ತಿಗೆ ಇನ್ನೂ 10

ವರ್ಷ ಕಾಯದಂತೆ ನೋಡಿಕೊಳ್ಳುವ ಉದ್ದೇಶ ನಮ್ಮದಾಗಿತ್ತು,’’ ಎಂದು ಠಾಕೂರ್ ತಿಳಿಸಿದರು. ಮಹಿಳಾ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪ್ತಿ ರಾವತ್ ಭಾರದ್ವಾಜ್ ಮಾತನಾಡಿ, ‘‘ನೀತಿ ನಿರೂಪಣೆಯಲ್ಲಿಮಹಿಳೆಯರಿಗೆ ಅವಕಾಶ ನೀಡುವ ಪ್ರಧಾನಿ ಆಶಯವು ಯಶಸ್ವಿಯಾಗಲು ಪ್ರತಿಪಕ್ಷಗಳು ಅವಕಾಶ ನೀಡದೆ ಮಹಿಳೆಯರಿಗೆ ನಿರಂತರವಾಗಿ ದ್ರೋಹವೆಸಗಿವೆ,’’ ಎಂದು ತಿಳಿಸಿದರು.