ದಿನ ಭವಿಷ್ಯ 21 ಏಪ್ರಿಲ್ 2026
ಶ್ರೀಪತಿ ಭಟ್ | ಬೆಂಗಳೂರು
--------------
(ಮೇಷ, ತುಲಾ, ಕುಂಭ-ಈ ರಾಶಿಯವರಿಗೆ ಗಣ್ಯ ವ್ಯಕ್ತಿಗಳ ಜೊತೆ ಸಮಾಲೋಚನೆ)
------
ಮೇಷ : ಅತಿ ಬುದ್ಧಿವಂತ ಜನರಲ್ಲಿವ್ಯವಹಾರ ನಡೆಸಬೇಕಾಗಿರುವುದರಿಂದ ಜಾಗ್ರತೆ ಇರಲಿ. ಗುರಿಯನ್ನು ಸಾಧಿಸುವ ಬಗ್ಗೆ ಮಾತ್ರ ಗಮನವಿರಲಿ. ಮನಸ್ಸಿಗೆ ನೆಮ್ಮದಿ ಉಂಟಾಗುವುದು.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಕೆಂಪು)
-----------
ವೃಷಭ : ಅಕ್ಕಪಕ್ಕದಲ್ಲಾಗುವ ಸನ್ನಿವೇಶಗಳು ಪ್ರಾಮಾಣಿಕತೆಗೆ ಅಥವಾ ಸ್ವಾಮಿ ನಿಷ್ಠೆಗೆ ಬೆಲೆ ಇಲ್ಲವೆಂದು ಕಾಣಿಸುವುದು. ಅದರ ಫಲವಾಗಿ ಸ್ವಭಾವವನ್ನು ಬದಲಿಸಿಕೊಳ್ಳಬೇಡಿ. ಸಾಂಸಾರಿಕ ಸುಖದಲ್ಲಿಅಭಿವೃದ್ಧಿ ಅಪೇಕ್ಷಿಸಬಹುದು.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ನೀಲಿ)
----------
ಮಿಥುನ : ಅಜಾಗರೂಕತೆಯಿಂದ ಹಣ ಕಳೆದುಕೊಳ್ಳುವಂತಾಗಬಹುದು, ಎಚ್ಚರವಿರಲಿ. ಸತ್ಕಾರ್ಯದ ಯತ್ನಗಳು ಕೈಗೂಡಲು ತಾಳ್ಮೆ ವಹಿಸಿ. ಮಗನ ತಾಂತ್ರಿಕ ವಿದ್ಯಾಭ್ಯಾಸದಲ್ಲಿಪ್ರಗತಿ ಕಂಡು ಅತೀವ ಸಂತೋಷವಾಗುವುದು.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಹಸಿರು)
-------------
ಕರ್ಕ : ತಂದೆಯ ಆರೋಗ್ಯ ಬದಲಾವಣೆಗೆ ಕಾರಣವಾಗುವುದು. ಉದಾರ ಮನೋಭಾವ ಅನುಕೂಲ ಒದಗಿಸಲಿದೆ. ವ್ಯವಹಾರದಲ್ಲಿನುರಿತರಾದವರ ಸಲಹೆ-ಸೂಚನೆಗಳನ್ನು ಅಳವಡಿಸಿಕೊಳ್ಳಿ.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಹಳದಿ)
----------
ಸಿಂಹ : ಕಾರ್ಯನಿಮಿತ್ತ ಅತ್ತೆ-ಸೊಸೆಯಲ್ಲಿಭಿನ್ನಾಭಿಪ್ರಾಯಗಳು ತೋರಿಬಂದರೂ ತಾಳ್ಮೆಯನ್ನು ಇಬ್ಬರೂ ಪರಸ್ಪರ ಕಾಪಾಡಿಕೊಳ್ಳಿ. ಯಾರಿಗೂ ಸಾಲದ ರೂಪದಲ್ಲಿಹಣ ನೀಡಬೇಡಿ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಗುಲಾಬಿ)
-----------
ಕನ್ಯಾ : ದಿನಚರಿಯಲ್ಲಿತಪ್ಪುಗಳ ಬಗ್ಗೆ ಮನವರಿಕೆ ಆಗುವುದು. ಮನೆಯಲ್ಲಿಆನಂದದ ವಾತಾವರಣ ಇರಲಿದೆ. ಉದ್ಯೋಗದಲ್ಲಿಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ಆಘಾತವಾಗಲಿದೆ.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಕೇಸರಿ)
-------------
ತುಲಾ : ಪೂರ್ವ ನಿಯೋಜಿತ ಕೆಲಸ ನೆರವೇರುವುದರಿಂದ ನೆಮ್ಮದಿ ಇರುವುದು. ವಿನಾಕಾರಣ ಪರಿಶ್ರಮದಿಂದ ಫಲ ಸಿಗಲಿಲ್ಲವೆಂದು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಪ್ರಯಾಣದಲ್ಲಿಎಚ್ಚರಿಂದ ಇರಿ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಕಿತ್ತಳೆ)
---------
ವೃಶ್ಚಿಕ : ಕ್ರೀಡಾಪಟುಗಳು ಮತ್ತು ಕಲಾವಿದರಿಗೆ ಪ್ರತಿಭಾ ಪ್ರದರ್ಶನಕ್ಕೆ ಪೂರ್ವ ತಯಾರಿ ಅನಿವಾರ್ಯ. ಎಲ್ಲವನ್ನೂ ಸ್ವತಂತ್ರವಾಗಿಯೇ ಮಾಡಬಲ್ಲೆನೆಂಬ ಹುಮ್ಮಸ್ಸು ನಷ್ಟಕ್ಕೆ ಕಾರಣವಾಗುತ್ತದೆ.
(ಶುಭ ಸಂಖ್ಯೆ :9, ಅದೃಷ್ಟ ಬಣ್ಣ : ಬಿಳಿ)
------
ಧನು : ಪಾಲುದಾರಿಕೆ ವ್ಯವಹಾರದಲ್ಲಿಬುದ್ಧಿಶಕ್ತಿಯಿಂದ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಇದ್ದಲ್ಲಿ, ಲಾಭದಾಯಕವಾಗಬಹುದು. ಗಂಟಲು ಬೇನೆ ಕಾಣಿಸಿಕೊಂಡಲ್ಲಿಗಿಡಮೂಲಿಕೆಗಳ ಬಳಕೆಯಿಂದ ಶಮನವಾಗುವುದು.
(ಶುಭ ಸಂಖ್ಯೆ :7, ಅದೃಷ್ಟ ಬಣ್ಣ : ಕಪ್ಪು)
-------
ಮಕರ : ಮನೆಯಲ್ಲಿನಡೆಯಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ಒಡಹುಟ್ಟಿದವರೊಂದಿಗೆ ಮಾತುಕತೆ ನಡೆಯಲಿದೆ. ಪ್ರೀತಿಯ ವಿಚಾರದಲ್ಲಿಗುಣಾತ್ಮಕ ಬೆಳವಣಿಗೆ ಅನುಭವಕ್ಕೆ ಬಂದೀತು. ವಿದೇಶಿ ವಸ್ತುಗಳ ಮೇಲೆ ಹಣ ವ್ಯಯ.
(ಶುಭ ಸಂಖ್ಯೆ :5, ಅದೃಷ್ಟ ಬಣ್ಣ : ಕಂದು)
---------
ಕುಂಭ :ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು, ರಾಜಕೀಯವಾಗಿ ಲಾಭ ಪಡೆದುಕೊಳ್ಳುವಿರಿ. ಸಂಶೋಧನಾ ಕ್ಷೇತ್ರದಲ್ಲಿನ ಕಾರ್ಯಗಳಲ್ಲಿಪ್ರಗತಿ ಸಾಧಿಸುವಿರಿ. ಹಣದ ವಿಚಾರದಲ್ಲಿವಿತವ್ಯಯಿಗಳಾಗುವಿರಿ.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಬೂದು)
--------
ಮೀನ : ಧಾನ್ಯ ಮತ್ತು ಮಸಾಲೆ ಪದಾರ್ಥಗಳ ಸಗಟು ಮತ್ತು ರಫ್ತು ವ್ಯಾಪಾರಿಗಳಿಗೆ ಅಧಿಕ ವ್ಯಾಪಾರ ಇರಲಿದೆ. ಕಚೇರಿಯ ಖರ್ಚು-ವೆಚ್ಚಗಳ ವಿಷಯದಲ್ಲಿಜಾಗ್ರತೆ ಇರಲಿ.
(ಶುಭ ಸಂಖ್ಯೆ 1, ಅದೃಷ್ಟ ಬಣ್ಣ :ಕೇಸರಿ)

