ಅದ್ಧೂರಿ ಬಸವ ಜಯಂತ್ಯುತ್ಸವ ಇಂದು

Contributed byamareshhiremath72@gmail.com|Vijaya Karnataka

ಶಹಾಪುರದಲ್ಲಿ ಬಸವ ಜಯಂತಿಯ ಸಂಭ್ರಮ ಮನೆ ಮಾಡಿದೆ. ನಗರದ ರಸ್ತೆಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿವೆ. ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ಅನ್ನ ದಾಸೋಹ ಕಾರ್ಯಕ್ರಮವೂ ನಡೆಯಲಿದೆ. ಬಸವಣ್ಣನವರ ಭಾವಚಿತ್ರ ಮೆರವಣಿಗೆ ಹಾಗೂ ಸಚಿವರು, ಗಣ್ಯರ ಉಪಸ್ಥಿತಿಯಲ್ಲಿ ವಿಶೇಷ ಸಭೆ ಆಯೋಜಿಸಲಾಗಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಯಂತಿಯನ್ನು ಯಶಸ್ವಿಗೊಳಿಸಬೇಕು.

basava jayantyutsav a celebration of philanthropic activities

ವಿಕ ಸುದ್ದಿಲೋಕ ಶಹಾಪುರ ನಗರದಲ್ಲಿಬಸವ ಜಯಂತ್ಯುತ್ಸವಕ್ಕೆ ಅದ್ಧೂರಿ ಸಿದ್ದತೆ ನಡೆದಿದ್ದು,ನಗರದ ಪ್ರಮುಖ ರಸ್ತೆಗಳೆಲ್ಲತಳಿರು ತೋರಣಗಳಿಂದ ಸಿಂಗರಿಸಲಾಗುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಹಾಗೂ ಯುವ ಘಟಕದ ಪದಾಧಿಕಾರಿಗಳು ಹಾಗೂ ನಗರದ ಪ್ರಮುಖರು ಸೇರಿ ಹಗಲಿರುಳು ಶ್ರಮವಹಿಸುತ್ತಿದ್ದು, ಜಯಂತ್ಯುತ್ಸವ ನಿಮಿತ್ತ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿರುವುದಾಗಿ ಮಹಾಸಭಾ ಅಧ್ಯಕ್ಷ ಸಿದ್ದಣ್ಣ ಸಾಹು ಆರಬೋಳ ತಿಳಿಸಿದ್ದಾರೆ. ಜಯಂತ್ಯುತ್ಸವ ನಿಮಿತ್ತ ನಗರದ ಫಕೀರೇಶ್ವರ ಮಠದ ಸಭಾಂಗಣದಲ್ಲಿಎರಡೂ ಘಟಕಗಳ ಪದಾಧಿಕಾರಿಗಳು ಭಾನುವಾರ ರಕ್ತದಾನ ಶಿಬಿರ ಆಯೋಜಿಸಿದ್ದರು. ನೂರಾರು ಯುವಕರು, ಹಿರಿಯರು ಸ್ವಯಂಪ್ರೇರಿತರಾಗಿ ಶಿಬಿರದಲ್ಲಿಭಾಗವಹಿಸಿ ರಕ್ತದಾನ ಮಾಡಿದರು. ಫಕೀರೇಶ್ವರ ಮಠದ ಶ್ರೀ ಗುರುಪಾದ ಮಹಾಸ್ವಾಮೀಜಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ, ಪ್ರಕೃತಿಯಲ್ಲಿಏನನ್ನಾದರೂ ಕೃತಕವಾಗಿ ಸಿದ್ದಪಡಿಸಲು ಸಾಧ್ಯವಿದ್ದರೂ ರಕ್ತವನ್ನು ಮಾತ್ರ ಇನ್ನೂ ಯಾವ ವಿಜ್ಞಾನಿಗಳಿಂದಲೂ ಕೃತಕವಾಗಿ ಸಿದ್ದಪಡಿಸಲು ಸಾಧ್ಯವಾಗಿಲ್ಲ, ರಕ್ತ ದೇಹದ ಜೀವನಾಡಿಯಾಗಿದೆ ಎಂದರು. ಪ್ರತಿಯೊಬ್ಬ ಮನುಷ್ಯನಿಗೆ ಒಂದಿಲ್ಲಒಂದು ದಿನದ ರಕ್ತದ ಅವಶ್ಯಕತೆ ಬೀಳುತ್ತದೆ. ಇಂತಹ ವಿಶಿಷ್ಟ ಸಂದರ್ಭದಲ್ಲಿರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವಿಯ ಉಳಿವಿಗೆ ಕಾರಣವಾದಲ್ಲಿಅದಕ್ಕಿಂತ ದೊಡ್ಡ ಪುಣ್ಯ ಬೇರೊಂದಿಲ್ಲ. ಬಸವ ಜಯಂತಿಯನ್ನು ಸಮಾಜಮುಖಿಯಾಗಿ ಆಚರಿಸಲು ನಗರದ ತಾಲೂಕು ಮಹಾಸಭಾದ ಎರಡೂ ಘಟಕಗಳ ಪದಾಧಿಕಾರಿಗಳು ರಕ್ತದಾನ ಶಿಬಿರವನ್ನು ಆಯೋಜಿಸಿ ನೂರಾರು ಜೀವಗಳ ಉಳಿವಿಗೆ ಕಾರಣರಾಗಿದ್ದು ಶ್ಲಾಘನೀಯವಾದುದ್ದಲ್ಲದೇ ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಸಿದ್ದಣ್ಣ ಸಾಹು ಆರಬೋಳ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ನಗರದ ನೇತ್ರ ತಜ್ಞ ಡಾ.ಜಗದೀಶ ಉಪ್ಪಿನ ಸೇರಿ ಜಿಲ್ಲಾಸರಕಾರಿ ಆಸ್ಪತ್ರೆ ಸಿಬ್ಬಂದಿ ರಕ್ತದಾನ ಶಿಬಿರದಲ್ಲಿಸಕಲ ರೀತಿಯ ವ್ಯವಸ್ಥೆಯನ್ನು ಕೈಗೊಂಡರು. ಜಯಂತ್ಯುತ್ಸವ ನಿಮಿತ್ತ ನಗರದ ಕಿರಾಣಿ ವರ್ತಕರು ಸೇರಿ ನಗರದ ಬಸವೇಶ್ವರ ವೃತ್ತದಲ್ಲಿಬೃಹತ್ ಪ್ರಮಾಣದಲ್ಲಿಸೋಮವಾರ ಅನ್ನ ದಾಸೋಹ ನಡೆಸುವುದಾಗಿ ತಾಲೂಕು ವರ್ತಕರ ಸಂಘದ ಅಧ್ಯಕ್ಷ ರಾಜು ಆನೇಗುಂದಿ ತಿಳಿಸಿದ್ದಾರೆ. ಬೆಳಗ್ಗೆ 10ಗಂಟೆಗೆ ತಾಲೂಕಾಡಳಿತದಿಂದ ಬಸವಣ್ಣನವರ ಭಾವಚಿತ್ರದ ಮೆರವಣಿಗೆಯನ್ನು ಸಿ.ಬಿ.ಕಮಾನ್ ದಿಂದ ಪ್ರಾರಂಭಿಸಿ ಮುಖ್ಯ ರಸ್ತೆಯ ಮೂಲಕ ನಗರಸಭೆ ಆವರಣದವರೆಗೆ ನಡೆಯಲಿದೆ. ತಾಲೂಕಾಡಳಿತದಿಂದ ಸಭೆ ಆಯೋಜಿಸಲಾಗಿದ್ದು, ಸಣ್ಣ ಕೈಗಾರಿಕೆ ಮತ್ತು ಜಿಲ್ಲಾಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಲಿದ್ದಾರೆ. ಕಲಬುರಗಿ ವಿ.ಜಿ.ಮಹಿಳಾ ವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಹೇಶಕುಮಾರ ಗಂವ್ಹಾರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಿತಿ ಅಧ್ಯಕ್ಷ,ತಹಸೀಲ್ದಾರ್ ಸಿದ್ದಾರೂಢ ಬನ್ನಿಕೊಪ್ಪ ಕೋರಿದ್ದಾರೆ.