* ಜುಲೈನಲ್ಲಿವಾಣಿಜ್ಯ ಸಂಚಾರ ಸಾಧ್ಯತೆ
ವಿಕ ಸುದ್ದಿಲೋಕ ಬೆಂಗಳೂರು
ಅಂತೂ ರೈಲ್ವೆ ಮಂಡಳಿಯು ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಕಾಳೇನ ಅಗ್ರಹಾರ- ತಾವರೆಕೆರೆ ನಡುವಿನ ಎಲಿವೇಟೆಡ್ ಕಾರಿಡಾರ್ ಸಂಶೋಧನೆ ವಿನ್ಯಾಸ ಮತ್ತು ಗುಣಮಟ್ಟ ವಿನ್ಯಾಸ ಸಂಸ್ಥೆ (ಆರ್ ಡಿಎಸ್ ಒ)ಯ ತಪಾಸಣೆಗೆ ಒಪ್ಪಿಗೆ ನೀಡಿದ್ದು, ಶೀಘ್ರ ಪ್ರಾರಂಭವಾಗಲಿದೆ.
ಮಾರ್ಗದ ವಿನ್ಯಾಸ ವಿಭಾಗದಲ್ಲಿತಾಂತ್ರಿಕ ಕಾರಣದಿಂದ ರೈಲ್ವೆ ಮಂಡಳಿ ಆರ್ ಡಿಎಸ್ ಒ ತಪಾಸಣೆಗೆ ಅನುಮೋದಿಸಿರಲಿಲ್ಲ. ಹೀಗಾಗಿ, ಬಿಇಎಂಎಲ್ ನಿಂದ ನಾಲ್ಕು ರೈಲು ಪೂರೈಕೆಯಾಗಿದ್ದರೂ ತಪಾಸಣೆ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಮೇ ತಿಂಗಳಿಂದ ಎಲೆವೇಟೆಡ್ ಮಾರ್ಗದಲ್ಲಿವಾಣಿಜ್ಯ ಸಂಚಾರ ಆರಂಭಿಸುವ ಬಿಎಂಆರ್ ಸಿಎಲ್ ಉದ್ದೇಶಕ್ಕೆ ಹಿನ್ನಡೆಯಾಗಿತ್ತು.
‘‘ಆರ್ ಡಿಎಸ್ ಒ 10 ದಿನಗಳ ತಪಾಸಣೆ ನಡೆಸಲಿದೆ. ಆರ್ ಡಿಎಸ್ ಒ ನೀಡುವ ವರದಿಯನ್ನು ಮೆಟ್ರೊ ರೈಲು ಸುರಕ್ಷತಾ ಆಯುಕ್ತರಿಗೆ ನೀಡಿ ಅವರಿಂದ ಪರಿಶೀಲನೆ ನಡೆಸಲಿದ್ದೇವೆ. ಬಳಿಕ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ ನಡೆಯಬೇಕು. ಇವೆಲ್ಲಪ್ರಕ್ರಿಯೆಗೆ ಸುಮಾರು 2 ತಿಂಗಳು ಬೇಕಿದೆ. ಜುಲೈನಲ್ಲಿಮಾರ್ಗವು ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಬಹುದು,’’ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

