ನಾಳೆ ಕಲ್ಲೂರು ಮೇಘರಾಜ್ ಗೆ ಸನ್ಮಾನ
ಶಿವಮೊಗ್ಗ : ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಸಂಸ್ಥೆಯ ಟ್ರಸ್ಟಿ ಕಲ್ಲೂರು ಮೇಘರಾಜ್ ಅವರನ್ನು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿಏ.21ರಂದು ಬಿ. ಬಸವಲಿಂಗಪ್ಪ ಅವರ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಮತ್ತು ಬೆಂಗಳೂರು ವಿವಿಯ ಬಿ. ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆಯಿಂದ ಸನ್ಮಾನಿಸಲಾಗುತ್ತಿದೆ.
ಭೂಸಾ ಚಳವಳಿಯಲ್ಲಿಅಂದಿನ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಅವರ ಕ್ರಾಂತಿಕಾರಕ ನಿಲುವುಗಳನ್ನು ಬೆಂಬಲಿಸಿ ಹೋರಾಟ ನಡೆಸಿದ್ದ ಬೆಂಗಳೂರು ವಿವಿಯ ಸರಕಾರಿ ಕಲಾ ಕಾಲೇಜಿನ ಬಿ.ಎ.ಆನರ್ಸ್ ವಿದ್ಯಾರ್ಥಿಯಾಗಿ ಕಲ್ಲೂರು ಮೇಘರಾಜ್ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಟ್ರಸ್ಟ್ ಮುಖಂಡ ಎಚ್ .ಎಂ. ಸಂಗಯ್ಯ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಫೋಟೊ: ಕಲ್ಲೂರು ಮೇಘರಾಜ್
===

