ಪ್ರತಿಯೊಬ್ಬರಲ್ಲಿಯೂ ಅಡಗಿದೆ ವಿಶೇಷ ಜ್ಞಾನ

Contributed byphanumanthu14@gmail.com|Vijaya Karnataka

ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಚೇತನರು ತಮ್ಮ ಜ್ಞಾನದ ಶಕ್ತಿಯಿಂದ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಬೇಕೆಂದು ಸಮಾಜ ಸೇವಕ ಹಣಮೆಗೌಡ ಬಿರನಕಲ್‌ ಹೇಳಿದರು. ಸರಕಾರದ ಸೌಲಭ್ಯ ಪಡೆಯಲು ಸಂಘಟಿತರಾಗಿ ಹೋರಾಡಬೇಕು ಎಂದರು. ವಿಶೇಷ ಚೇತನರು ಉನ್ನತ ಹುದ್ದೆಗಳನ್ನು ಪಡೆಯಲು ಜ್ಞಾನವನ್ನು ಬಳಸಿಕೊಳ್ಳಬೇಕು. ಪತ್ರಿಭೆಯನ್ನು ಗುರುತಿಸಿ ಗೌರವಯುತ ವಾತಾವರಣ ನಿರ್ಮಾಣ ಮಾಡಬೇಕು. ಅವರಿಗೆ ಟಾಕಿಂಗ್‌ ವಾಚ್‌ ಮತ್ತು ವಾಕಿಂಗ್‌ ಸ್ಟಿಕ್‌ ವಿತರಿಸಲಾಯಿತು.

the wealth of special knowledge within everyone

ವಿಕ ಸುದ್ದಿಲೋಕ ಯಾದಗಿರಿ ವಿಶೇಚ ಚೇತನರು ತಮ್ಮಲ್ಲಿರುವ ವಿಶೇಚ ಜ್ಞಾನದ ಮೂಲಕ ತಮ್ಮ ಅಂಧತ್ವವನ್ನು ಹಿಮ್ಮೆಟ್ಟಿಸಿ ಸಮಾಜದಲ್ಲಿಗೌರವಯುತ ಬದುಕು ಕಟ್ಟಿಕೊಳ್ಳಬೇಕೆಂದು ಸಮಾಜ ಸೇವಕ ಹಣಮೆಗೌಡ ಬಿರನಕಲ್ ಎಂದು ಹೇಳಿದರು. ನಗರದ ಕನ್ನಡ ಸಾಹಿತ್ಯ ಪರಿಚತ್ತು ಸಭಾಂಗಣದಲ್ಲಿನವ ಕಲ್ಯಾಣ ಜ್ಯೋತಿ ಜನಪರ ವೇದಿಕೆ ಜಿಲ್ಲೆಯ ನೂತನ ಪದಾಧಿಕಾರಿಗಳ ಪದಗ್ರಹಣ, ಡಾ.ಬಿ.ಆರ್ .ಅಂಬೇಡ್ಕರ್ ಮತ್ತು ವಿಶ್ವಗುರು ಬಸವಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭೂಮಿ ಮೇಲೆ ಜನಿಸಿದ ಪ್ರತಿಯೊಬ್ಬ ವ್ಯಕ್ತಿಗೂ ಭಗವಂತ ಶಕ್ತಿ ಕೊಟ್ಟಿರುತ್ತಾನೆ. ಜ್ಞಾನಪಕ ಶಕ್ತಿಯನ್ನು ಜೀವನ ರೂಪಿಸಿಕೊಳ್ಳಲು ಬಳಸಿಕೊಳ್ಳಬೇಕು. ಜೊತೆಗೆ ಸರಕಾರ ನೀಡುವ ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಿ ಹೋರಾಡಬೇಕು ಎಂದರು. ಜಿಲ್ಲಾವಿಶೇಷ ಚೇತನರ ಅಧಿಕಾರಿ ಶರಣಪ್ಪ ಪಾಟೀಲ್ ಮಾತನಾಡಿ, ವಿಶೇಚ ಚೇತನರು ದೇಶದ ಉನ್ನತ ಹುದ್ದೆಗಳಾದ ಐಎಎಸ್ , ಐಪಿಎಸ್ ಮತ್ತು ಐಎಸ್ ಎಫ್ ಹುದ್ದೆಗಳನ್ನು ತಮ್ಮ ಜ್ಞಾನಪಕ ಶಕ್ತಿಯ ಮೂಲಕ ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಡಿ.ಎಸ್ .ಎಸ್ . ಜಿಲ್ಲಾಧ್ಯಕ್ಷ ಮಾರೆಪ್ಪ ಮಾತನಾಡಿ, ವಿಶೇಚ ಚೇತನರಲ್ಲಿರುವ ಪತ್ರಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು. ಸಮಾಜದಲ್ಲಿಗೌರವಯುತವಾಗಿ ಬದುಕು ವಾತಾವರಣ ನಿರ್ಮಾಣ ಮಾಡಬೇಕು ಎಂದರು. ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ವಿಶೇಚಚೇತನರಿಗೆ ಟಾಕಿಂಗ್ ವಾಚ್ ಮತ್ತು ವಾಕಿಂಗ್ ಸ್ಟಿಕ್ ವಿತರಿಸಲಾಯಿತು. ನವ ಕಲ್ಯಾಣಜ್ಯೋತಿ ಜನಪರ ವೇದಿಕೆ ರಾಜ್ಯಾಧ್ಯಕ್ಷ ಸಿದ್ಧರಾಯ ಸೀತನೂರ, ಜಿಲ್ಲಾಧ್ಯಕ್ಷ ಮಾನಪ್ಪ ದೊಡ್ಡಮನಿ, ಡಾನ್ ಬಾಸ್ಕೋ ಸಮಾಜ ಸಂಸ್ಥೆಯ ಮುಖ್ಯಸ್ಥ ಫಾ.ಶಾಬು ಪ್ರಾನ್ಸಿಸ್ , ರಾಜ್ಯ ಅಂಧ ನೌಕರರ ಸಂಘದ ಅಧ್ಯಕ್ಷ ಶರಣಪ್ಪ ಉಪಸ್ಥಿತರಿದ್ದರು. ಭೀಮಾಶಂಕರ ಕಾರ್ಯಕ್ರಮ ನಿರೂಪಿಸಿದರು. ಹಣಮಂತರಾಯ ಬಡದಾಳ ವಂದಿಸಿದರು.