ವಿಕ ಸುದ್ದಿಲೋಕ ತುಮ್ಮಿನಕಟ್ಟಿ
ರಾಣೇಬೆನ್ನೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿಬಸವೇಶ್ವರ ಜಯಂತ್ಯುತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು.
ಬಸವೇಶ್ವರ ದೇವಸ್ಥಾನಗಳಲ್ಲಿವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಬಸವಣ್ಣ ದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಭಸ್ಮಾಭಿಷೇಕ ಸೇರಿದಂತೆ ವಿವಿಧ ಅಭಿಷೇಕ ಪೂಜೆಗಳು ನಡೆದವು. ಬಸವಣ್ಣನ ಮೂರ್ತಿಗೆ ತರಹೇವಾರಿ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.
ತುಮ್ಮಿನಕಟ್ಟಿ ಗ್ರಾಮದಲ್ಲಿವಿಶ್ವಗುರು ಬಸವ ಜಯಂತಿ ಅಂಗವಾಗಿ ಶ್ರೀ ಈಶ್ವರ ದೇವರ ರಥೋತ್ಸವ ಹಾಗೂ ಶ್ರೀ ವೀರಭದ್ರ ದೇವರ ಗುಗ್ಗಳ ಮಹೋತ್ಸವ ಜರುಗಿತು. ಶ್ರೀ ವೀರೇಶಚಾರ ರುದ್ರಾಚಾರ ಮನ್ವಾಚಾರ ಸ್ವಾಮಿಯವರು ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಸಕಲ ವಾದ್ಯ ವೈಭವಗಳೊಂದಿಗೆ ಪುರವಂತಿಕೆ, ಸಮಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿರಥೋತ್ಸವ ಸಾಗಿತು. ಭಕ್ತರು ರಥದ ಕಳಸಕ್ಕೆ ಉತ್ತುತ್ತಿ, ಬಾಳೆಹಣ್ಣು ಎಸೆದು ತೇರಿನ ಗಾಲಿಗೆ ತೆಂಗಿನಕಾಯಿ ಹೊಡೆದು ಭಕ್ತಿ ನಮನ ಸಮರ್ಪಿಸಿದರು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.
ಮಾಜಿ ಜಿಪಂ ಸದಸ್ಯ ಸಂತೋಷಕುಮಾರ ಪಾಟೀಲ, ರುದ್ರೇಶ ಶಿವಯೋಗಿಮಠ, ಸಮಾಜದ ಅಧ್ಯಕ್ಷ ಪ್ರಶಾಂತ ಹೊಸಮನಿ, ಲಿಂಗರಾಜ ಉಳಸಾಂದ್ರ, ಹಲೇಶ ನಂಜಪ್ಪನವರ, ವೀರೇಶ ಶಿಡ್ಲಳ್ಳಿ, ಚಂದ್ರಶೇಖರ ಉಪ್ಪಿನ, ಮೃತ್ಯುಂಜಯ ಕರ್ಜಗಿ, ನಾಗಪ್ಪ ಮೆಣಸಿನಹಾಳ, ವೀರಭದ್ರಪ್ಪ ಗೌಡನಕಟ್ಟಿ, ವಿರುಪಾಕ್ಷಪ್ಪ ಗಂಗಪ್ಪನವರ, ವಿನಾಯಕ ಗೌಡನಕಟ್ಟಿ, ವೀರೇಶ ಉಳಸಾಂದ್ರ, ಗಣೇಶ ಬ್ಯಾಡಗಿ, ವೀರಭದ್ರಗೌಡ ಲಿಂಗದಹಳ್ಳಿ, ಚಿನ್ನಮ್ಮ ನಂಜಪ್ಪನವರ, ರಾಜಪ್ಪ ಜವಳಿ, ಅನುಸೂಯ ಗಂಗಪ್ಪನವರ ಮತ್ತಿತರರು ಇದ್ದರು.
20 ಟಿಎಂಕೆ 01
ತುಮ್ಮಿನಕಟ್ಟಿ ಗ್ರಾಮದಲ್ಲಿಶ್ರೀ ಬಸವೇಶ್ವರ ಜಯಂತ್ಯುತ್ಸವ ಅಂಗವಾಗಿ ಶ್ರೀ ಈಶ್ವರ ದೇವರ ರಥೋತ್ಸವ ಹಾಗೂ ಶ್ರೀ ವೀರಭದ್ರದೇವರ ಗುಗ್ಗಳ ಮಹೋತ್ಸವ ಜರುಗಿತು.

