ಚಿರಡೋಣಿಯಲ್ಲಿವೀರಭದ್ರೇಶ್ವರ ಶಿಲಾಮಂದಿರ ಉದ್ಘಾಟನೆ
ಬಸವಾಪಟ್ಟಣ : ಚನ್ನಗಿರಿ ತಾಲೂಕು ಚಿರಡೋಣಿ ಗ್ರಾಮದಲ್ಲಿನೂತನವಾಗಿ ನಿರ್ಮಿಸಲಾದ ಶ್ರೀ ವೀರಭದ್ರೇಶ್ವರ ಸ್ವಾಮಿ ಶಿಲಾಮಂದಿರವನ್ನು ಭಾನುವಾರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಡಾ. ಪ್ರಸನ್ನಾನಂದ ಸ್ವಾಮೀಜಿ ಉದ್ಘಾಟಿಸಿದರು.
ಧರ್ಮಸಭೆಯಲ್ಲಿಮಡಿವಾಳ ಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ‘ಮಂದಿರಗಳು ನೆಮ್ಮದಿ ನೀಡುವ ಪವಿತ್ರ ತಾಣಗಳಾಗಿವೆ. ದೇವಾಲಯಗಳು ಜಾತಿ-ಮತ ಭೇದವಿಲ್ಲದೆ ಸಮಾನತೆ ಸಾರುವ ಕೇಂದ್ರಗಳಾಗಿದ್ದು, ಮನುಷ್ಯ ಎಷ್ಟೇ ಸಂಪತ್ತು ಗಳಿಸಿದರೂ ನಿಜವಾದ ನೆಮ್ಮದಿ ಸಿಗುವುದಿಲ್ಲ. ಆದರೆ, ದೇವಾಲಯದಲ್ಲಿಕೇವಲ ಹತ್ತು ನಿಮಿಷ ಧ್ಯಾನ ಅಥವಾ ಪೂಜೆ ಮಾಡಿದರೂ ಮನಸ್ಸಿಗೆ ಶಾಂತಿ ದೊರೆಯುತ್ತದೆ’ ಎಂದು ಹೇಳಿದರು.
ಹೊಸದರ್ಗ ಕನಕ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ‘ಸಮಾಜದಲ್ಲಿವಿಭಿನ್ನ ಮನೋಭಾವದ ಜನರು ಇರುತ್ತಾರೆ. ಕೆಲವರು ತಮ್ಮ ಬದುಕನ್ನು ಶುದ್ಧವಾಗಿರಿಸದೇ ಇತರರನ್ನೂ ಅದೇ ದಾರಿಗೆಳೆದುಕೊಳ್ಳುತ್ತಾರೆ. ಆದರೆ ಚಿರಡೋಣಿ ಗ್ರಾಮದಲ್ಲಿಸುಮಾರು 4 ಕೋಟಿ ರೂ.ವೆಚ್ಚದಲ್ಲಿನಿರ್ಮಿಸಿರುವ ಈ ಭವ್ಯ ಮಂದಿರವು ಗ್ರಾಮದ ಭಾವೈಕ್ಯತೆ ಮತ್ತು ಸಾಮರಸ್ಯದ ಸಂಕೇತವಾಗಿದೆ’ ಎಂದರು.
ಶಹಾಪುರದ ಏಕದಂಡಿಗೆ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಹಾಗೂ ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಮಾತನಾಡಿದರು. ಈ ವೇಳೆ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಎಸ್ . ರಾಜು, ಕಾರ್ಯದರ್ಶಿ ಕೆ.ಜಿ. ಚಂದ್ರಣ್ಣ, ಸದಸ್ಯರಾದ ದುರ್ಗೋಜಿರಾವ್ , ಹನುಮಂತಪ್ಪ, ತಾಯಪ್ಪ ಇತರರು ಇದ್ದರು.
----
20ಬಿಪಿಟಿ1
ಬಸವಾಪಟ್ಟಣ ಸಮೀಪದ ಚಿರಡೋಣಿ ಭಾನುವಾರ ಗ್ರಾಮದಲ್ಲಿನೂತನವಾಗಿ ನಿರ್ಮಿಸಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಶಿಲಾಮಂದಿರವನ್ನು ರಾಜನಹಳ್ಳಿ ವಾಲ್ಮೀಕಿ ಪೀಠದ ಡಾ. ಪ್ರಸನ್ನಾನಂದ ಸ್ವಾಮೀಜಿ ಉದ್ಘಾಟಿಸಿದರು.

