ಇಂಟ್ರೊ:
ನಟನೆಯ ಮೂಲಕ ಕನ್ನಡಿಗರ ಮನ ಗೆದ್ದಿರುವ ಪೃಥ್ವಿ ಅಂಬಾರ್ , ಇದೇ ಮೊದಲ ಬಾರಿಗೆ ‘ಬುಲ್ ಡಾಗ್ ’ ಸಿನಿಮಾ ಮೂಲಕ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಅನುಭವವನ್ನು ಅವರು ಲವಲವಿಕೆಯಿಂದ ಹಂಚಿಕೊಂಡಿದ್ದಾರೆ.
ಕಿರಣ್ ಚಂದ್ರ
ದಿಯಾ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿ, ತುಳು ಹಾಗೂ ಕನ್ನಡದ 25ಕ್ಕೂ ಹೆಚ್ಚು ಚಿತ್ರಗಳಲ್ಲಿನಟಿಸಿ ಸೈ ಎನಿಸಿಕೊಂಡಿರುವ ನಟ ಪೃಥ್ವಿ ಅಂಬಾರ್ . ಅವರು ಈಗ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿಹಲವು ಹಂತದ ಚಿತ್ರೀಕರಣ ಮುಗಿಸಿರುವ ಅವರು, ಸದ್ಯ ಮಂಗಳೂರಿನ ಸುಡುಬಿಸಿಲಿನಲ್ಲಿ‘ಬುಲ್ ಡಾಗ್ ’ನ ಅಂತಿಮ ಹಂತದ ಶೂಟಿಂಗ್ ಪೂರೈಸಿ ಪೋಸ್ವ್ ಪ್ರೊಡಕ್ಷನ್ ಕೆಲಸಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ಸಿನಿಮಾದ ವಿಶೇಷತೆ
‘ಬುಲ್ ಡಾಗ್ ’ ಸಿನಿಮಾದ ಫಸ್ವ್ ಲುಕ್ ಗೂ ಮತ್ತು ಕಥೆಗೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವ ಪೃಥ್ವಿ, ‘ಇದು ಒಂದು ಊರಿನ ನಾಲ್ವರು ಹುಡುಗರ ಕಥೆ. ಈ ನಾಲ್ವರು ಯಾವುದೋ ಕಾರಣಕ್ಕೆ ಬೆಂಗಳೂರಿಗೆ ಬರುತ್ತಾರೆ. ಎರಡು ತಿಂಗಳ ಅಂತರದಲ್ಲಿನಡೆಯುವ ಈ ಕಥೆಯಲ್ಲಿ, ಬೆಂಗಳೂರಿಗೆ ಬಂದವರು ಮಾಡುವ ಎಡವಟ್ಟುಗಳು ಮತ್ತು ವಾಪಸ್ ಊರಿಗೆ ಹೋಗುವವರೆಗಿನ ಪಯಣ ಇಲ್ಲಿದೆ’ ಎಂದಿದ್ದಾರೆ.
ಎರಡು ಭಾಷೆಯಲ್ಲಿಚಿತ್ರ
ಚಿತ್ರದಲ್ಲಿಪೃಥ್ವಿ ‘ಬುಲ್ ಡಾಗ್ ’ ಎಂಬ ಪಾತ್ರವನ್ನೇ ಮಾಡುತ್ತಿದ್ದಾರೆ. ವಿಶೇಷವೆಂದರೆ ಇದು ಎರಡು ಭಾಷೆಯಲ್ಲಿತಯಾರಾಗುತ್ತಿರುವ ಸಿನಿಮಾವಲ್ಲ; ಬದಲಾಗಿ ಸಿನಿಮಾದಲ್ಲೇ ಕನ್ನಡ ಮತ್ತು ತುಳು ಎರಡೂ ಭಾಷೆಗಳನ್ನು ಬಳಸಲಾಗಿದೆ. ಪಾತ್ರಗಳು ಬೆಂಗಳೂರಿನಲ್ಲಿದ್ದಾಗ ಕನ್ನಡದಲ್ಲಿಮತ್ತು ಊರಿನಲ್ಲಿದ್ದಾಗ ತುಳುವಿನಲ್ಲಿಮಾತನಾಡುತ್ತವೆ. ಹಾಗಾಗಿ ಇದನ್ನು ಕೇವಲ ತುಳು ಅಥವಾ ಕನ್ನಡ ಸಿನಿಮಾ ಎಂದು ಪ್ರತ್ಯೇಕಿಸಲು ಸಾಧ್ಯವಿಲ್ಲ. ಚಿತ್ರಕ್ಕೆ ಡಬ್ಬಿಂಗ್ ಮಾಡಿಸದೆ, ಎರಡೂ ಭಾಷೆಗಳಿಗೆ ಇಂಗ್ಲಿಷ್ ಸಬ್ ಟೈಟಲ್ ಬಳಸುವ ವಿಭಿನ್ನ ಪ್ರಯೋಗವನ್ನು ಅವರು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ‘ಸು ಫ್ರಮ್ ಸೋ’ ಚಿತ್ರದ ಕಲಾವಿದರು ಸೇರಿದಂತೆ ಕನ್ನಡ, ತುಳು ಹಾಗೂ ಮಲಯಾಳಂ ಕಲಾವಿದರು ನಟಿಸಿದ್ದಾರೆ.
ಡಾರ್ಕ್ ಹ್ಯೂಮರ್ ಪ್ರಯೋಗ
‘ನಿರ್ದೇಶನದ ಅನುಭವ ಅದ್ಭುತವಾಗಿದೆ. ಮೊದಲಿನಿಂದಲೂ ಕಾಮಿಡಿ ಸಿನಿಮಾ ಮಾಡುವ ಆಸೆ ಇತ್ತು. ಹಾಗಾಗಿ ನಾನೇ ಒಂದು ತಂಡ ಕಟ್ಟಿಕೊಂಡು ಕೆಲಸ ಆರಂಭಿಸಿದೆ. ಕಾಮಿಡಿ ನನ್ನ ಫೇವರಿಟ್ ಸಬ್ಜೆಕ್ಟ್. ಇದರಲ್ಲಿಹಾಸ್ಯದ ಜೊತೆಗೆ ಸ್ವಲ್ಪ ಡಾರ್ಕ್ ಹ್ಯೂಮರ್ ಪ್ರಯೋಗ ಮಾಡಿದ್ದೇನೆ. ನೈಜ ಘಟನೆಗಳು ಹಾಗೂ ನಾನು ಹುಟ್ಟಿ ಬೆಳೆದ ಪರಿಸರದ ವ್ಯಕ್ತಿಗಳೇ ಈ ಕಥೆ ಮತ್ತು ಪಾತ್ರಗಳಿಗೆ ಸ್ಫೂರ್ತಿ’ ಎಂದು ಪೃಥ್ವಿ ವಿವರಿಸಿದ್ದಾರೆ.
ಕೋಟ್
‘ಬುಲ್ ಡಾಗ್ ’ ಸಿನಿಮಾದಲ್ಲಿಹಾಸ್ಯಮಯ ಪಯಣ ಇದೆ. ಜೆನ್ -ಜೀ ತಲೆಮಾರು ಹೇಗೆ ದಾರಿ ತಪ್ಪುತ್ತದೆ ಮತ್ತು ಅದರಿಂದ ಎದುರಾಗುವ ಸಮಸ್ಯೆಗಳ ಕುರಿತು ಸಂದೇಶವೂ ಚಿತ್ರದಲ್ಲಿದೆ.
ಪೃಥ್ವಿ ಅಂಬಾರ್ | ನಟ
ಬಾಕ್ಸ್
ಪೃಥ್ವಿಯ ಕಾಮಿಡಿ ‘ದರ್ಶನ’
ನಿರ್ದೇಶನದ ಜೊತೆಗೆ ಪೃಥ್ವಿ ‘ದರ್ಶನ’ ಎಂಬ ಸಿನಿಮಾದಲ್ಲಿನಟಿಸುತ್ತಿದ್ದಾರೆ. ಇದೊಂದು ಮಲ್ಟಿಸ್ಟಾರರ್ ಚಿತ್ರವಾಗಿದ್ದು, ಪೃಥ್ವಿ ಜೊತೆಗೆ ಆದಿತ್ಯ ಆಶ್ರಿ, ಗೌರವ್ ಶೆಟ್ಟಿ, ತುಕಾಲಿ ಸಂತು ಸೇರಿದಂತೆ ಅನೇಕ ಯುವ ಕಲಾವಿದರಿದ್ದಾರೆ. ನಿರ್ದೇಶಕ ಸ್ವಸ್ಥಿಕ್ ಉತ್ತಮ ಕಾಮಿಡಿ ಸೆಸ್ಸ್ ಹೊಂದಿದ್ದಾರೆ. ‘ಶುಗರ್ ಲೆಸ್ ’ ಸಿನಿಮಾ ಬಿಟ್ಟರೆ ಇಷ್ಟು ದೊಡ್ಡ ಮಟ್ಟದ ಕಾಮಿಡಿ ಇರುವ ಸಿನಿಮಾದಲ್ಲಿನಾನು ನಟಿಸಿಲ್ಲ. ಈವರೆಗೆ ಎಮೋಷನಲ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನನಗೆ, ಈ ಕಾಮಿಡಿ ಸಿನಿಮಾ ಜನರಿಗೆ ದೊಡ್ಡ ಸರ್ ಪ್ರೈಸ್ ನೀಡಲಿದೆ’ ಎಂದಿದ್ದಾರೆ.

