ಕೆಎಎಸ್ ಅಧಿಕಾರಿ ಮುಹಮ್ಮದ್ ಇಸಾಕ್ ನಿವೃತ್ತಿ

Contributed byvijaya.poojary@timesgroup.com|Vijaya Karnataka

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಮುಹಮ್ಮದ್‌ ಇಸಾಕ್‌ ಅವರು ಗುರುವಾರ ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ. ೧೯೮೮ರಲ್ಲಿ ಸೇವೆಗೆ ಸೇರಿದ್ದ ಅವರು ಕಂದಾಯ ಇಲಾಖೆಯಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ಹಾಸನ, ಮೂಡುಬಿದಿರೆ, ಕಾರ್ಕಳ, ಕಾಪು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅವರ ನಿವೃತ್ತಿಯ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ನಡೆಯಿತು.

muhammad ishaqs exemplary service celebrated retirement ceremony

ವಿಕ ಸುದ್ದಿಲೋಕ ಮಂಗಳೂರು

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಮುಹಮ್ಮದ್ ಇಸಾಕ್ ಗುರುವಾರ ಸರಕಾರಿ ಸೇವೆಯಿಂದ ನಿವೃತ್ತರಾದರು.

1988ರಲ್ಲಿಸರಕಾರಿ ಸೇವೆಗೆ ಸೇರ್ಪಡೆಗೊಂಡ ಅವರು ಕಂದಾಯ ಇಲಾಖೆಯಲ್ಲಿಪ್ರಥಮ ದರ್ಜೆ ಸಹಾಯಕ, ಕಂದಾಯ ನಿರೀಕ್ಷಕ, ಶಿರಸ್ತೇದಾರ್ ಮತ್ತು ಗ್ರೇಡ್ 2 ತಹಸೀಲ್ದಾರ್ ಹುದ್ದೆ ಸೇರಿದಂತೆ ಹಾಸನ ಜಿಲ್ಲೆಯಲ್ಲಿಸುಮಾರು 28 ವರ್ಷಗಳ ಕಾಲ ಸೇವೆಗೈದಿದ್ದರು. ಬಳಿಕ ಗ್ರೇಡ್ 1 ತಹಸೀಲ್ದಾರರಾಗಿ ಬಡ್ತಿ ಪಡೆದ ಅವರು, ಮೂಡುಬಿದಿರೆ, ಕಾರ್ಕಳ, ಕಾಪು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲೂಕುಗಳಲ್ಲಿಕಾರ್ಯನಿರ್ವಹಿಸಿದ್ದರು. ನಂತರ ಉಡುಪಿ ಜಿಲ್ಲೆಯಲ್ಲಿಆಹಾರ ಇಲಾಖೆ ಉಪನಿರ್ದೇಶಕರು ಹಾಗೂ ವಿಶೇಷ ಭೂನ್ಯಾಯ ಮಂಡಳಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದರು.

ಬೀಳ್ಕೊಡುಗೆ : ಮುಹಮ್ಮದ್ ಇಸಾಕ್ ಅವರ ನಿವೃತ್ತಿ ಪ್ರಯುಕ್ತ ಗುರುವಾರ ನಗರದ ಮಿನಿ ವಿಧಾನಸೌಧ ಆವರಣದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು. ಹಿರಿಯ ಅಧಿಕಾರಿಗಳು, ಕಚೇರಿ ಸಿಬ್ಬಂದಿಗಳು ಹಾಗೂ ನಿವೃತ್ತ ಅಧಿಕಾರಿಗಳು ಉಪಸ್ಥಿತರಿದ್ದು, ಶುಭ ಹಾರೈಸಿದರು.