ವೇಳಾಪಟ್ಟಿ ಪ್ರಕಾರ ತ್ರೀ ಫೇಸ್ ವಿದ್ಯುತ್ ನೀಡಿ
ವಿಕ ಸುದ್ದಿಲೋಕ ಮಾಗಡಿ ಗ್ರಾಮಾಂತರ : ಮಾಗಡಿ ತಾಲೂಕಿನಲ್ಲಿರೈತರಿಗೆ ಬೇಸಿಗೆ ಕಾಲದಲ್ಲಿಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಇದರ ಬಗ್ಗೆ ಬೆಸ್ಕಾಂ ಕ್ರಮವಹಿಸಬೇಕು ಎಂದು ರೈತ ಸಂಘದ ಹಸಿರು ಸೇನೆ ಬಣದ ತಾಲೂಕು ಅಧ್ಯಕ್ಷ ಗೋವಿಂದರಾಜು ಮನವಿ ಮಾಡಿದ್ದಾರೆ.
ರೈತರ ಸಹಿ ಸಂಗ್ರಹಿಸಿ ಬೆಸ್ಕಾಂಗೆ ಮನವಿ ಪತ್ರ ನೀಡಿ ಅವರು ಮಾತನಾಡಿ, ರೈತರ ತೋಟಗಳಿಗೆ ತ್ರೀ ಫೇಸ್ ವಿದ್ಯುತ್ ಅಗತ್ಯವಾಗಿದ್ದು, ವೇಳಾಪಟ್ಟಿ ಪ್ರಕಾರ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದ ಅವರು ಈ ಬಗ್ಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲಎಂದು ಹೇಳಿದರು.
ವೋಲ್ಟೇಜ್ ವ್ಯತ್ಯಯವಾಗುತ್ತಿರುವುದರಿಂದ ರೈತರ ಪಂಪ್ ಸೆಟ್ಟುಗಳು ಹಾಳಾಗುತ್ತಿವೆ. ರೈತರ ಕೊಳವೆ ಬಾವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಮೇ ತಿಂಗಳ 10 ದಿನಗಳ ಒಳಗಾಗಿ ಸಾಧ್ಯವಾದಷ್ಟು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ, ಕೆಇಬಿ ಕಚೇರಿ ಎದುರು ರೈತ ಸಂಘದ ಸದಸ್ಯರು ಪ್ರತಿಭಟಿಸುತ್ತೇವೆ ಎಂದು ಮನವಿ ಪತ್ರದಲ್ಲಿಉಲ್ಲೇಖಿಸಿದ್ದಾರೆ.
1ಎಸ್ ಎಲ್ ಆರ್ 2
ಗೋವಿಂದರಾಜು

