ಪ್ರವೇಶಕ್ಕೆ ಅರ್ಜಿ ಆಹ್ವಾನ
ಕೊಪ್ಪಳ : ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
10ನೇ ತರಗತಿ ಉತ್ತೀರ್ಣರಾದವರು ಮೇ 8ರೊಳಗೆ ಅರ್ಜಿ ಸಲ್ಲಿಸಬಹುದು.
ಮಹಿಳಾ ಅಭ್ಯರ್ಥಿಗಳಿಗೆ ವಾರ್ಷಿಕ ಬೋಧನಾ ಶುಲ್ಕದಲ್ಲಿವಿನಾಯಿತಿ ನೀಡಲಾಗಿದ್ದು, ಪ್ರವೇಶ ಉಚಿತವಾಗಿದೆ. ಮಾಹಿತಿಗೆ
ಕಚೇರಿ ವೇಳೆಯಲ್ಲಿಸಂಸ್ಥೆಯನ್ನು ಸಂಪರ್ಕಿಸಲು ತರಬೇತಿ ಅಧಿಕಾರಿ ತಿಳಿಸಿದ್ದಾರೆ.
====
ತರಬೇತಿ ಕೇಂದ್ರಕ್ಕೆ ಆಹ್ವಾನ
ಕೊಪ್ಪಳ: ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಖೇಲೋ ಇಂಡಿಯಾ ಕ್ರೀಡಾ ಯೋಜನೆಯಡಿ
ಜಿಲ್ಲೆಯಲ್ಲಿತರಬೇತಿ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದೂರವಾಣಿ ಸಂಖ್ಯೆ 08539-230121 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
====
ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ
ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದಲ್ಲಿರುವ ಹುಲಿಗೆಮ್ಮ ದೇವಸ್ಥಾನದ ಜಾತ್ರಾ ಮಹೋತ್ಸ ಮೇ 10ರಿಂದ 14ರವರೆಗೆ ನಡೆಯಲಿದ್ದು,
ಮೇ 2 ರಿಂದ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ.
ಮೇ 2 ರಂದು ರಾತ್ರಿ 8 ಗಂಟೆಗೆ ಹುಲಿಗೆಮ್ಮ ಸೇವಿಯವರಿಗೆ ಕಂಕಣಧಾರಣೆ ಮಾಡಲಾಗುವುದು. ಮೇ 10ರಂದು ಸಂಜೆ 7 ಗಂಟೆಗೆ ಉತ್ಸವ
ನಡೆಯಲಿದ್ದು, ಮೇ 11ರಂದು ಅಕ್ಕಿಪಡಿ ಹಾಗೂ ಸಂಜೆ 5.30ಕ್ಕೆ ಮಹಾರಥೋತ್ಸವ ನಡೆಯಲಿದೆ.
ಮೇ 12ರಂದು ಗಂಗಾದೇವಿ ಪೂಜೆ, ದೇವಿಗೆ ಪ್ರಸಾದ ಕೇಳುವುದು, ಬಾಳಿದಂಡಿಗೆ ಆರೋಹಣ ನಡೆಯಲಿವೆ. ಮೇ 13ರಂದು ಪಾಯಸ ಮತ್ತು ಅಗ್ನಿಕುಂಡ
ಪೂಜೆ ನಡೆಯಲಿದೆ. ಮೇ 14 ರಂದು ಅಗ್ನಿಕುಂಡ ಕಾರ್ಯಕ್ರಮ ನಡೆಯಲಿವೆ. ಜೂನ್ 30ರಂದು ರಾತ್ರಿ 8 ಗಂಟೆಗೆ ಕಂಕಣ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಎಂದು ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ರಾವ್ ತಿಳಿಸಿದ್ದಾರೆ.

