ಮುಸ್ಲಿಂ ಲೀಗ್ ನಿಂದ ಪ್ರತಿಭಟನೆಗೆ ಸಿದ್ಧತೆ
ಕಾಸರಗೋಡು: ಜಿಲ್ಲೆಯ ಕುಂಬ್ಡಾಜೆ ಪಂಚಾಯಿತಿಯ ಜಿಲ್ಲಾ ಪಂಚಾಯಿತಿ ರಸ್ತೆಯಾದ ಪೊಡಿಪಳ್ಳ-ಬೆಳಿಂಜ-ನಾಟೆಕಲ್ಲು ರಸ್ತೆಯು ಹೊಂಡ ಗುಂಡಿಗಳಿಂದ ತುಂಬಿದ್ದು, ಸಂಚಾರಕ್ಕೆ ಆಯೋಗ್ಯವಾಗಿದೆ. ಇದನ್ನು ಶೀಘ್ರ ದುರಸ್ತಿ ನಡೆಸಬೇಕೆಂದು ಆಗ್ರಹಿಸಿ ಮೇ 2ರಂದು ರಸ್ತೆ ನಡೆಸಲಾಗುವುದು ಎಂದು ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯಿತಿ ಉಪಾಧ್ಯಕ್ಷ ರಶೀದ್ ಬೆಳ್ಳಿಂಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಳೆಗಾಲದಲ್ಲಿ ಕೆಸರು ಗುಂಡಿಗಳು ಮತ್ತು ಬೇಸಿಗೆಯಲ್ಲಿಧೂಳು ತುಂಬಿದ ರಸ್ತೆ ಈ ಭಾಗದ ಜನರಿಗೆ ಸಮಸ್ಯೆಯಾಗಿದೆ. ಇದು ಸಾಮಾನ್ಯ ಹಳ್ಳಿ ರಸ್ತೆಯಲ್ಲ, ಬದಲಾಗಿ ಬದಿಯಡ್ಕ್ಕ ಮತ್ತು ಬೆಳ್ಳೂರು ಪಂಚಾಯಿತಿಗಳನ್ನು ಸಂಪರ್ಕಿಸುವ ಮತ್ತು ಕರ್ನಾಟಕಕ್ಕೆ ಹಾದುಹೋಗುವ ಪ್ರಮುಖ ರಸ್ತೆಯಾಗಿದೆ.
ಜಿಲ್ಲಾಪಂಚಾಯಿತಿ ಅಧೀನದಲ್ಲಿರುವ ಈ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಹೇಳಿದರು.
ಆರಂಭದಲ್ಲಿ ಕುಂಬ್ಡಾಜೆ ಮುಸ್ಲಿಂ ಲೀಗ್ ನೇತೃತ್ವದಲ್ಲಿರಸ್ತೆ ನಡೆಸಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಲಾಗುವುದು. ಬಳಿಕ ಜಿಲ್ಲಾಪಂಚಾಯಿತಿ ಕಚೇರಿಗೆ ಪ್ರತಿಭಟನಾ ಜಾಥಾ ನಡೆಸಲಾಗುವುದು. ಮೂರನೇ ಹಂತವು ಜಿಲ್ಲಾಪಂಚಾಯಿತಿ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯಿತಿ ಪ್ರಧಾನ ಕಾರ ್ಯದರ್ಶಿ ಬಿಟ್ಟಿ ಅಬ್ದುಲ್ಲಾಕುಂಞಿ, ಮಂಡಲ ಕಾರ ್ಯದರ್ಶಿ ಎಸ್ .ಮುಹಮ್ಮದ್ ಮತ್ತು ಪಂಚಾಯಿತಿ ಕಾರ ್ಯದರ್ಶಿ ಮಜೀದ್ ಚಕ್ಕುಡಲ್ ಭಾಗವಹಿಸಿದ್ದರು.

