ವಿಕ ಸುದ್ದಿಲೋಕ ಮೂಡುಬಿದಿರೆ
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿಕಲ್ಲಬೆಟ್ಟು ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜು ರಾಜ್ಯದಲ್ಲಿಅಗ್ರ ಹತ್ತರೊಳಗೆ ಮೂರು ಸ್ಥಾನ ಪಡೆದಿತ್ತು. ಆದರೆ ಮರು ಮೌಲ್ಯಮಾಪನದ ನಂತರ ಈ ಸ್ಥಾನ 5ಕ್ಕೆ ಏರಿಕೆಯಾಗಿದೆ.
ಈಗಾಗಲೇ ಪ್ರಕಟಗೊಂಡ ಫಲಿತಾಂಶದಲ್ಲಿಧನುಷ್ ಗುತ್ತಿ ವಿಜ್ಞಾನದಲ್ಲಿ600ಕ್ಕೆ 598 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದರು. ಮರು ಮೌಲ್ಯಮಾಪನದಲ್ಲಿಸರಸ್ವತಿ ಎಂ.ಸಿ. 2 ಅಂಕ ಏರಿಸಿ 595 ಅಂಕ ಪಡೆದು ರಾಜ್ಯಮಟ್ಟದಲ್ಲಿ7ನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದ್ದಾರೆ. ಧನುಷ್ ಗುತ್ತಿ ಮತ್ತು ಸರಸ್ವತಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಗಣಕಶಾಸ್ತ್ರ ಹಾಗೂ ಜೀವಶಾಸ್ತ್ರದಲ್ಲಿಪೂರ್ಣಾಂಕ ಪಡೆದಿದ್ದಾರೆ.
ರವಿತೇಜ್ ಎಸ್ . ಈ ಮೊದಲು 589 ಅಂಕ ಗಳಿಸಿದ್ದು, ಮರು ಮೌಲ್ಯಮಾಪನದಲ್ಲಿ5 ಅಂಕ ಹೆಚ್ಚಿಸಿಕೊಂಡು 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಾರೆ. ತಸ್ನೀಮ್ ಎಸ್ .ಎಂ. 592 ಅಂಕ ಗಳಿಸಿ ರಾಜ್ಯಕ್ಕೆ 8ನೇ ರಾರ ಯಂಕ್ ಪಡೆದುಕೊಂಡಿದ್ದರು. ಕಿಶನ್ ಎಸ್ .ಮಾತಾಡ್ ಈ ಮೊದಲು 589 ಅಂಕ ಗಳಿಸಿದ್ದು, ಮರು ಮೌಲ್ಯಮಾಪನದಲ್ಲಿಒಂದು ಅಂಕ ಹೆಚ್ಚಿಸಿಕೊಂಡು 590 ಅಂಕ ಗಳಿಸಿ ರಾಜ್ಯಕ್ಕೆ 10ನೇ ಸ್ಥಾನ ಪಡೆದಿದ್ದಾರೆ.
ಯಶಸ್ ಎಸ್ . 589, ಶ್ರೇಯಸ್ ಯು. ಶಾನುಭಾಗ್ 588, ಅನ್ವಿತಾ ಕಾಮತ್ 588, ಅನುಷಾ ಒ.ಸಿ. 588, ಮನ್ವಿತ್ ಎಸ್ . ಪದ್ಮಶಾಲಿ 588, ಪ್ರಕೃತಿ ಎಸ್ . 588, ವಿವೇಚನ್ ಡಿ.ಎಂ. 587, ಕಾವ್ಯ ಎನ್ .ಆರ್ . 586, ಶಿವಪ್ರಸಾದ್ ರಟ್ಟಿ 586, ದಿಲೀಪ್ ಆರ್ .ಎಂ. 586, ಇಂಚರ ಆರ್ . 585, ನಿರೀಕ್ಷಾ ಎಲ್ . 585, ಹರ್ಷಿಣಿ ಕೆ.ಆರ್ . 585, ಶ್ರೀನವನೀತ ವಿ.ಆರ್ . 585 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ397 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ209 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿಮೂವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
30ಎಂಡಿಬಿ ಧನುಷ್ ಗುತ್ತಿ
30ಎಂಡಿಬಿ ಸರಸ್ವತಿ
30ಎಂಡಿಬಿ ರವಿತೇಜ್ ಎಸ್ .
30ಎಂಡಿಬಿ ತಸ್ನೀಮ್ ಎಸ್ .ಎಂ.
30ಎಂಡಿಬಿ ಕಿಶನ್ ಎಸ್ .ಮಾತಾಡ್

