ವಿಕ ಸುದ್ದಿಲೋಕ ಬಂಕಾಪುರ
ಸಾಮಾಜಿಕ ಕಳಕಳಿಯೊಂದಿಗೆ ಕೈಗೊಳ್ಳುವ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದು ವಿದ್ವಾನ್ ವೆಂಕಟೇಶಾಚಾರ್ಯ ಜಹಗೀರದಾರ್ ತಿಳಿಸಿದರು.
ಗುರುವಾರ ಪಟ್ಟಣದ ಪುರಾತನ ಉಗ್ರ ಗುಹಾ ನರಸಿಂಹ ದೈವ ಸನ್ನಿಧಿಯಲ್ಲಿನಡೆದ ಶ್ರೀ ನರಸಿಂಹ ಜಯಂತಿ ಕಾರ್ಯಕ್ರಮದಲ್ಲಿರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ‘‘ಸಾಮಾಜಿಕವಾಗಿ ಒಂದು ಜೀವದಿಂದ ಇನ್ನೊಂದು ಜೀವಕ್ಕೆ ಉಪಕರಿಸುವ ಕಾರ್ಯ ಆಗಬೇಕು’’ ಎಂದರು.
ಪ್ರಸಿದ್ಧ ಹರಿದಾಸ ಗಾಯಕರಾದ ಮೈಸೂರು ರಾಮಚಂದ್ರ ಆಚಾರ್ಯರ ಸಂಗೀತ ಕಾರ್ಯಕ್ರಮ ನೆರವೇರಿದ್ದು, ಭಕ್ತಿ ಶ್ರದ್ಧೆ ಪೂರ್ವಕವಾಗಿ ಮಾಡುವ ದಾಸ ಸಾಹಿತ್ಯದ ಗಾಯನ ತನ್ಮಯತೆಯನ್ನು ಹೆಚ್ಚಿಸುತ್ತದೆ ಎಂದರು. ಶ್ರೀ ನರಸಿಂಹ ಜಯಂತಿ ಅಂಗವಾಗಿ, ದೀಪೋತ್ಸವ, ವೇದವ್ಯಾಸ ಪೂಜೆ, ಮನ್ಯು ಸೂಕ್ತ ಹೋಮ, ರಾಯರ ಅಷ್ಟೋತ್ತರ, ವಿಶೇಷ ಪಂಚಾಮೃತ ಅಲಂಕಾರ, ಪುಷ್ಪಾರ್ಚನೆ, ಪ್ರವಚನ, ತೀರ್ಥ ಪ್ರಸಾದ ವಿತರಣೆ ಹಾಗೂ ರಾಷ್ಟೊ್ರೕತ್ಥಾನ ರಕ್ತ ಕೇಂದ್ರದ ಆಶ್ರಯದಲ್ಲಿರಕ್ತದಾನ ಶಿಬಿರ ನೆರವೇರಿತು.
ಹತ್ತಿರದ ಪುರಾತನ ವೀರನರಸಿಂಹ ಹಾಗೂ ಕೇಶವ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಸಲ್ಲಿಸಲಾಯಿತು. ಮೂರು ಗಂಟೆಗಳ ಕಾಲ ದಾಸ ಸಾಹಿತ್ಯದ ಗಾನ ಸುಧೆ ಹರಿಸಿದ ಮೈಸೂರು ರಾಮಚಂದ್ರ ಆಚಾರ್ಯ ಅವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು. ಕಿರಣ ಅಯಾಚಿತ, ಅಕ್ಷಯ ಜೋಶಿ, ವಾದಿರಾಜ ಹಾಗೂ ಸಂಗಡಿಗರು ವಾದ್ಯ ಹೆಮ್ಮೇಳದ ಸಾಥ್ ನೀಡಿದರು.
ದೇವಸ್ಥಾನದ ಪ್ರಮುಖರಾದ ಸುಧೀಂದ್ರ ಪೂಜಾರ, ಆನಂದ ತಾಳಿಕೋಟಿ, ರಾಘವೇಂದ್ರ ಕಬ್ಬೂರ, ಶ್ರೀನಿವಾಸ ಅಡೂರ, ಶ್ರೀಧರ ಗುಡಿ, ಶ್ರೀನಿವಾಸ ಪಾಟೀಲ, ಮಿಥುನ ಕುಲಕರ್ಣಿ, ಜಯತೀರ್ಥ ಪೂಜಾರ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಪಾಂಡುರಂಗ ಪೂಜಾರ ನಿರೂಪಿಸಿದರು.
1ಎಸ್ .ಜಿ.ಎನ್ .2
ಬಂಕಾಪುರ ಪಟ್ಟಣದ ದಾಸವಾಣಿ ಕಾರ್ಯಕ್ರಮ ನೀಡಿದ ಮೈಸೂರು ರಾಮಚಂದ್ರ ಆಚಾರ್ಯರು.

