‘ತುರ್ತಾಗಿ ಹುದ್ದೆ ಭರ್ತಿ ಮಾಡಲಿ’
ವಿಕ ಸುದ್ದಿಲೋಕ ರಾಯಚೂರು
‘‘ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಾರ್ವಜನಿಕ ಗ್ರಂಥಾಲಯಗಳಲ್ಲಿಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ಸರಕಾರ ತುರ್ತಾಗಿ ಭರ್ತಿ ಮಾಡಬೇಕು,’’ ಎಂದು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಡಾ.ಪಿ.ವಿ. ಹೇಳಿದರು.
ಕೃಷಿ ವಿವಿಯ ಡಾ.ಬಿ.ಆರ್ .ಅಂಬೇಡ್ಕರ್ ಪ್ರಧಾನ ಗ್ರಂಥಾಲಯದಲ್ಲಿರಾಜ್ಯ ಗ್ರಂಥಾಲಯ ಸಂಘ ರಾಯಚೂರು ಹಾಗೂ ಯಾದಗಿರಿ ಜಿಲ್ಲಾಘಟಕದ ಉದ್ಘಾಟನಾ ಸಮಾರಂಭ, ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗುರುವಾರ ಸಂಜೆ ಗ್ರಂಥಾಲಯ ಪಿತಾಮಹ ಡಾ.ಎಸ್ .ಆರ್ .ರಂಗನಾಥನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ‘‘ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ,’’ ಎಂದರು.
ಡಾ.ಪರಮಾನಂದ ಜೆ.ಹಂಗರಗಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿಶೈಕ್ಷಣಿಕ ಮತ್ತು ಸಾರ್ವಜನಿಕ ಗ್ರಂಥಾಲಯಗಳ ಪ್ರಾಮುಖ್ಯತೆ ವಿವರಿಸಿದರು. ‘‘ಸಂಶೋಧಕ, ವಿದ್ಯಾರ್ಥಿಗಳು ಮತ್ತು ಗ್ರಂಥಪಾಲಕರು ಸಂಘದ ಸದಸ್ಯತ್ವ ಪಡೆಯುವ ಮೂಲಕ ಗ್ರಂಥಾಲಯಗಳ ಬಲವರ್ಧನೆಗೆ ಶ್ರಮಿಸಬೇಕು,’’ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಎಸ್ .ಎಲ್ .ಕಾಡದೇವರಮಠ ಮಾತನಾಡಿ, ‘‘ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿ ಓದುಗರಿಗೆ ಉತ್ತಮ ಸೇವೆ ಒದಗಿಸಬೇಕು. ಗ್ರಂಥಪಾಲಕರು ಲೇಖನ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು,’’ ಎಂದು ಸಲಹೆ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಶೇಖರ್ ಎಚ್ .ಪಿ. ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಡಾ.ಜಿ.ಎಸ್ .ಬಿರಾದಾರಮತ್ತು ಡಾ. ಮಚ್ಚೇಂದ್ರನಾಥ್ ಎಸ್ . ಇದ್ದರು. ಡಾ. ಬಲಭೀಮ, ಡಾ.ಸತೀಶ್ ಕುಮಾರ್ ಮಾವಿನ, ಶೋಭಾ ಕೆ.ವಿ., ಯಲ್ಲಪ್ಪ ಗೋನವಾರ ನಿರ್ವಹಿಸಿದರು.
---
01ಎಂಎಸ್ 07
ರಾಯಚೂರಿನ ಕೃಷಿ ವಿವಿಯಲ್ಲಿಗುರುವಾರ ಸಂಜೆ ನಡೆದ ಸಮಾರಂಭದಲ್ಲಿಗ್ರಂಥಾಲಯ ಪಿತಾಮಹ ಡಾ.ಎಸ್ .ಆರ್ .ರಂಗನಾಥನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

