ಎಸ್ ಎಸ್ ಎಲ್ ಸಿಯಲ್ಲಿರಾಜ್ಯಕ್ಕೆ 4ನೇ ರಾರ ಯಂಕ್

Contributed byaishwaryabeejadi@gmail.com|Vijaya Karnataka

ಕುಂಭಾಸಿಯ ಸಂಕಲ್ಪ್ ಕುಮಾರ್ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 622 ಅಂಕ ಪಡೆದು ರಾಜ್ಯಕ್ಕೆ 4ನೇ ರ‍್ಯಾಂಕ್ ಗಳಿಸಿದ್ದಾರೆ. ಅವರು ಕೋಟ ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಸಂಕಲ್ಪ್ ಕುಮಾರ್ ಅವರು ಸಂಗೀತ ಮತ್ತು ಚಿತ್ರಕಲೆಯಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಗೆ ಪೋಷಕರು ಹಾಗೂ ಶಾಲೆಯು ಹೆಮ್ಮೆಪಟ್ಟಿದೆ. ಇದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ.

remarkable achievement sankalp kumar secures 4th rank in karnataka sslc

ಕುಂಭಾಸಿ: 2025-2026ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿಸಂಕಲ್ಪ್ ಕುಮಾರ್ 625ರಲ್ಲಿ622 ಅಂಕ ಪಡೆದು (99.52%) ರಾಜ್ಯಕ್ಕೆ 4ನೇ ರಾರ ಯಂಕ್ ಬಂದಿರುತ್ತಾರೆ. ಅವರು ಕುಂಭಾಸಿಯಲ್ಲಿನೆಲೆಸಿರುವ ಎಂಐಟಿ ಮಣಿಪಾಲದಲ್ಲಿಪ್ರಾಧ್ಯಾಪಕರಾಗಿರುವ ಡಾ.ಸಂಪತ್ ಕುಮಾರ್ ಹಾಗೂ ಎಂಐಟಿ ಕುಂದಾಪುರದಲ್ಲಿಸಹಾಯಕ ಪ್ರಾಧ್ಯಾಪಕರಾಗಿದ್ದ ಶಿಲ್ಪಾ ದಂಪತಿಗಳ ಪ್ರಥಮ ಪುತ್ರರಾಗಿದ್ದಾರೆ.

ಇವರು ಕೋಟ ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, ಕರ್ನಾಟಕ ಶಿಕ್ಷಣ ಮಂಡಳಿಯ ಸೀನಿಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲೂ‘ವಿಶಿಷ್ಟ ಶ್ರೇಣಿಯಲ್ಲಿ’ ಉತ್ತೀರ್ಣರಾಗಿದ್ದಾರೆ. ಪುಣೆಯ ಗಂಧರ್ವ ಮಹಾವಿದ್ಯಾಲಯದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ‘ಪ್ರಾವೇಶಿಕ ಪ್ರಥಮ’ ಪರೀಕ್ಷೆಯಲ್ಲಿ‘ವಿಶಿಷ್ಟ ಶ್ರೇಣಿ’ ಗಳಿಸಿದ್ದು, ಈ ಬಾರಿ ‘ಪ್ರಾವೇಶಿಕ ಪೂರ್ಣ’ ಪರೀಕ್ಷೆಯನ್ನೂ ಬರೆದಿರುತ್ತಾರೆ.

ಪೋಟೋ//30ಎಬಿ-ಎಸ್ ಎನ್ ಕೆ// ಸಂಕಲ್ಪ್ ಕುಮಾರ್