ಡ್ರೋನ್ ಹಾರಿಸಿ ಜೂಜಾಡುತ್ತಿದ್ದವರ ಬಂಧನ
ವಿಕ ಸುದ್ದಿಲೋಕ ಶಿವಮೊಗ್ಗ
ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಅರಣ್ಯ ಪ್ರದೇಶದಲ್ಲಿಜೂಜಾಡುತ್ತಿದ್ದ 19 ಜನರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ.
ಡ್ರೋನ್ ಕಾರ್ಯಾಚರಣೆ ವೇಳೆ ಜೂಜಾಡುತ್ತಿದ್ದವರು ಅಲ್ಲಿಂದ ಪರಾರಿಯಾಗಿದ್ದರು. ಆದರೆ, ದೃಶ್ಯದಲ್ಲಿಅವರ ಮುಖ ಸೆರೆಯಾಗಿದ್ದರಿಂದ ಅದರ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.
ನಿರಂತರವಾಗಿ ಡ್ರೋನ್ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಹಲವು ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಇದೆ ಮೊದಲ ಬಾರಿಗೆ ಎಫ್ ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಬಿ.ನಿಖಿಲ್ ತಿಳಿಸಿದ್ದಾರೆ.
===
ಎರಡು ದಿನಗಳಲ್ಲಿ68 ಲಕ್ಷ ರೂ. ವಂಚನೆ
ಶಿವಮೊಗ್ಗ: ಅಧಿಕ ಲಾಭದ ಆಸೆಗೆ ಒಳಗಾದ ಇಬ್ಬರು ಪ್ರತ್ಯೇಕ ಪ್ರಕರಣಗಳಲ್ಲಿಒಟ್ಟು 68 ಲಕ್ಷ ರೂ. ಕಳೆದುಕೊಂಡಿದ್ದು, ಶಿವಮೊಗ್ಗ ಸಿಇಎನ್ ಠಾಣೆಯಲ್ಲಿಪ್ರಕರಣ ದಾಖಲಾಗಿವೆ.
ಭದ್ರಾವತಿಯ 45 ವರ್ಷದ ವ್ಯಾಪಾರಿಯೊಬ್ಬರು ಆನ್ ಲೈನ್ ಟ್ರೇಡಿಂಗ್ ಕಂಪನಿಯ ಆಪ್ ನಲ್ಲಿ53.10 ಲಕ್ಷ ರೂ. ಹೂಡಿಕೆ ಮಾಡಿದ್ದು, ಆ ಹಣವನ್ನು ವಿಥ್ ಡ್ರಾ ಮಾಡಲು ಹೋದಾಗ 2-3 ದಿನ ಬೇಕಾಗುತ್ತದೆ ಎಂದು ಮಾಹಿತಿ ನೀಡಲಾಗಿತ್ತು. ತದನಂತರ, ಪ್ರಯತ್ನಿಸಿದಾಗ ಆಪ್ ತೆರೆದುಕೊಳ್ಳಲಿಲ್ಲ. ನಂತರ, ವಾಟ್ಸ್ ಅಪ್ ಸಂಖ್ಯೆಗೆ ಸಂದೇಶ ಕಳಿಸಿದರೂ ಪ್ರತಿಕ್ರಿಯೆ ಬಂದಿಲ್ಲ. ಈ ವಿಚಾರವನ್ನು ಸ್ನೇಹಿತನ ಮುಂದೆ ಹಂಚಿಕೊಂಡಾಗ ಮೋಸ ಹೋಗಿರುವುದಾಗಿ ತಿಳಿಸಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ತಕ್ಷಣ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ.
ಇನ್ನೊಂದು ಪ್ರಕರಣದಲ್ಲಿಶಿವಮೊಗ್ಗ ನಗರದ 38 ವರ್ಷದ ಯುವಕ 15,86,226 ರೂ. ಕಳೆದುಕೊಂಡಿದ್ದಾರೆ. ಷೇರು ಕಂಪನಿಯೊಂದರಲ್ಲಿಹಣ ಹೂಡಿಕೆ ಮಾಡಿದರೆ ಶೇ.50ರಷ್ಟು ಲಾಭಾಂಶ ನೀಡುವುದಾಗಿ ತಿಳಿಸಿದ್ದರು. ಅದನ್ನು ನಂಬಿ ಕಂಪನಿಯ ಪೇಜ್ ನಲ್ಲಿ1,210 ರೂ. ವರ್ಗಾವಣೆ ಮಾಡಿದ್ದರು. ನಂತರ 300 ರೂ. ಲಾಭಾಂಶವನ್ನು ಖಾತೆಗೆ ವರ್ಗಾವಣೆ ಮಾಡಲಾಗಿತ್ತು. 2025ರ ಫೆಬ್ರವರಿ 10ರಿಂದ ಡಿ.12ರ ವರೆಗೆ ಹಂತ ಹಂತವಾಗಿ 15.86 ಲಕ್ಷ ರೂ. ವರ್ಗಾಯಿಸಿದ್ದಾರೆ. ನಂತರ ಹಣ ವಾಪಸ್ ಕೇಳಿದಾಗ ವಾಪಸ್ ನೀಡದೇ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿಆರೋಪಿಸಲಾಗಿದೆ.
===

