ನಟ ಚೇತನ್ ಹೇಳಿಕೆಗೆ ಕರುನಾಡ ಕನ್ನಡಿಗರ ವೇದಿಕೆ ಖಂಡನೆ

Contributed bydevimanjum@gmail.com|Vijaya Karnataka

ನಟ ಚೇತನ್‌ ಅವರ ಡಾ.ರಾಜ್‌ಕುಮಾರ್‌ ಸ್ಮಾರಕ ಭೂಮಿ ಕುರಿತ ಹೇಳಿಕೆಯನ್ನು ಕರುನಾಡ ಕನ್ನಡಿಗರ ವೇದಿಕೆ ಖಂಡಿಸಿದೆ. ಡಾ.ರಾಜ್‌ಕುಮಾರ್‌ ಅವರ ನಾಡು, ನುಡಿ, ಕಲೆಗೆ ನೀಡಿದ ಕೊಡುಗೆ ಅನನ್ಯ. ಅವರು ಕನ್ನಡ ಚಿತ್ರರಂಗದ ಆರಾಧ್ಯ ದೈವ. ಸರಕಾರ ನಟ ಚೇತನ್‌ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವೇದಿಕೆ ಅಧ್ಯಕ್ಷ ಜಿ.ಬಾಲಾಜಿ ಒತ್ತಾಯಿಸಿದ್ದಾರೆ. ವೇದಿಕೆಯ ಪದಾಧಿಕಾರಿಗಳು ಕೂಡ ಈ ಆಗ್ರಹಕ್ಕೆ ಬೆಂಬಲ ಸೂಚಿಸಿದ್ದಾರೆ.

karunada kannadigara vedikes strong stance against chetan

ಗೌರಿಬಿದನೂರು : ವರನಟ ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಸರಕಾರ ನೀಡಿರುವ ಭೂಮಿ ವಿಚಾರವಾಗಿ ನಟ ಚೇತನ್ ನೀಡಿರುವ ಹೇಳಿಕೆಯನ್ನು ಕರುನಾಡ ಕನ್ನಡಿಗರ ವೇದಿಕೆ ಅಧ್ಯಕ್ಷ ಜಿ.ಬಾಲಾಜಿ ಖಂಡಿಸಿದ್ದಾರೆ.

ಡಾ.ರಾಜ್ ಕುಮಾರ್ ಅವರು ನಾಡು, ನುಡಿ ಮತ್ತು ಕಲೆಗೆ ನೀಡಿರುವ ಕೊಡಗೆ ಅನನ್ಯ, ಅದು ಸುವರ್ಣಾಕ್ಷರಗಳಿಂದ ಬರದಿಡಬೇಕಾದಂತಹ ಚರಿತ್ರೆ. ಅವರು ಕನ್ನಡ ನಾಡಿನ ಕಲಾ ಪ್ರಮೀಗಳ ಪಾಲಿಗೆ ಆರಾಧ್ಯ ದೈವವಾಗಿದ್ದಾರೆ. ಕೆಂಟುಕಿ ಕರ್ನಲ್ ಪ್ರಶಸ್ತಿಯನ್ನು ಪಡೆದ ಏಕೈಕ ಭಾರತೀಯ ನಟ ಡಾ.ರಾಜ್ ಕುಮಾರ್ . ಈ ಪ್ರಶಸ್ತಿ ಯುನೈಟೆಡ್ ಸ್ಟೇಟ್ಸ್ ನಲ್ಲಿಕಾಮನ್ ವೆಲ್ತ್ ಆಫ್ ಕೆಂಟುಕಿ ನೀಡುವ ಅತ್ಯುನ್ನತ ಗೌರವವಾಗಿದೆ ಎಂದರು.

ವೈಯಕ್ತಿವಾಗಿ ಮತ್ತು ವೃತ್ತಿಪರವಾಗಿ ಅವರು ಅತ್ಯಂತ ಶಿಸ್ತುಬದ್ಧ ಮತ್ತು ಸರಳ ಜೀವನ ಶೈಲಿಗೆ ಅವರ ಕೊಡುಗೆಯನ್ನು ಸರಕಾರ ಗುರುತಿಸಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ, ಪದ್ಮಭೂಷಣ, ಕರ್ನಾಟಕ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇಂತಹ ಮೇರುನಟನ ಸ್ಮಾರಕ ವಿಚಾರವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಸರಕಾರ ನಟ ಚೇತನ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಹೇಳಿಕೆಯಲ್ಲಿಒತ್ತಾಯಿಸಿದ್ದಾರೆ.

ವೇದಿಕೆ ಪದಾಧಿಕಾರಿಗಳಾದ ಜಿ.ಎನ್ .ವೆಂಕಟಾದ್ರಿ, ಕೋಟೆ ಭಾಸ್ಕರ್ , ಸರವಣ, ಗಿರಿ, ಪ್ರವೀಣ್ , ರಾಜೇಂದ್ರ, ಅರುಣ್ , ರಂಗ ಪ್ರಕಾಶ್ ಅವರೂ ಒತ್ತಾಯಿಸಿದ್ದಾರೆ.

ಚಿತ್ರ 1ಜಿಬಿಡಿ-2 ಜಿ.ಬಾಲಾಜಿ