ಶಕ್ತಿಶಾಲಿಯ ಕೊನೆ ಹಾದಿ ಬುದ್ಧನ ಶಾಂತಿ

Contributed bybhrahmanand.arali@timesgroup.com|Vijaya Karnataka

ಕಲಬುರಗಿಯಲ್ಲಿ ನಡೆದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಅಮೆರಿಕ ಅಧ್ಯಕ್ಷ ಟ್ರಂಪ್ ಯುದ್ಧದ ಹಾದಿ ಹಿಡಿದರೂ, ಕೊನೆಗೆ ಬುದ್ಧನ ಶಾಂತಿಯ ಹಾದಿಗೆ ಬರಬೇಕಾಗುತ್ತದೆ ಎಂದರು. ಬುದ್ಧನ ತತ್ವಗಳು ಶಾಶ್ವತ ಎಂದು ಹೇಳಿದರು. ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಬುದ್ಧನ ತತ್ವಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು. ಖರ್ಗೆ ಕುಟುಂಬದಿಂದ ಭಂತೇಜಿಗಳಿಗೆ ಚೀವರ ದಾನ ನೀಡಲಾಯಿತು.

the final journey of power on the path of buddhas peace

ಚಿತ್ರ: 1ಜಿಎಲ್ ಬಿ16

ಸಿದ್ಧಾರ್ಥ ಬುದ್ಧ ವಿಹಾರದಲ್ಲಿಬುದ್ಧ ಪೂರ್ಣಿಮೆ ಕಾರ್ಯಕ್ರಮಕ್ಕೂ ಮುನ್ನ ರಾಹುಲ್ ಖರ್ಗೆ ಅವರು ಬುದ್ಧನ ಪ್ರತಿಮೆ ಮೆರವಣಿಗೆ ಮುಖಾಂತರ ತಂದರು.

ಚಿತ್ರ: 1ಜಿಎಲ್ ಬಿ10

ಸಿದ್ಧಾರ್ಥ ಬುದ್ಧ ವಿಹಾರದಲ್ಲಿಬುದ್ಧ ಪೂರ್ಣಿಮೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿಬುದ್ಧ ಮೂರ್ತಿಗೆ ಡಾ.ಮಲ್ಲಿಕಾರ್ಜುನ ಖರ್ಗೆ, ರಾಧಾಬಾಯಿ ಖರ್ಗೆ, ಪ್ರೊ.ಪುರುಷೋತ್ತಮ ಬಿಳಿಮಲೆ ಹಾಗೂ ಗಣ್ಯರು ಪುಷ್ಪ ನಮನ ಸಲ್ಲಿಸಿದರು.

ಚಿತ್ರ: 1ಜಿಎಲ್ ಬಿ12

ಸಿದ್ಧಾರ್ಥ ಬುದ್ಧ ವಿಹಾರದಲ್ಲಿಬುದ್ಧ ಪೂರ್ಣಿಮೆ ಕಾರ್ಯಕ್ರಮ ಭಂತೇಜಿಗಳು ಬುದ್ಧ ವಂದನೆ ಸಲ್ಲಿಸಿದರು.

ಚಿತ್ರ: 1ಜಿಎಲ್ ಬಿ14

ಸಿದ್ಧಾರ್ಥ ಬುದ್ಧ ವಿಹಾರದಲ್ಲಿಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿಪಾಲ್ಗೊಂಡ ಗಣ್ಯರು.

***

* ಸಿದ್ಧಾರ್ಥ ಬುದ್ಧ ವಿಹಾರದಲ್ಲಿ2570ನೇ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿಡಾ.ಮಲ್ಲಿಕಾರ್ಜುನ ಖರ್ಗೆ ಆಭಿಮತ

ಶಕ್ತಿಶಾಲಿಯ ಕೊನೆ ಹಾದಿ ಬುದ್ಧನ ಶಾಂತಿ

ವಿಕ ಸುದ್ದಿಲೋಕ ಕಲಬುರಗಿ

ನಮ್ಮ ಬಳಿ ಶಕ್ತಿಶಾಲಿ ಬಾಂಬ್ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನುಕುಲವನ್ನು ನಾಶ ಮಾಡುವ ಯುದ್ಧದ ಹಾದಿ ಹಿಡಿದಿದ್ದಾನೆ. ಆದರೆ, ಅವೆಲ್ಲವೂ ಮುಗಿದ ಬಳಿಕ ಎಷ್ಟೇ ಶಕ್ತಿಶಾಲಿಯಾದರೂ ಕೊನೆಗೆ ಬುದ್ಧನ ಶಾಂತಿಯ ಹಾದಿಗೆ ಬರಬೇಕಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರ ಹೊರವಲಯದ ಸಿದ್ಧಾರ್ಥ ಬುದ್ಧ ವಿಹಾರದಲ್ಲಿಸಿದ್ಧಾರ್ಥ ಬುದ್ಧ ವಿಹಾರ ಟ್ರಸ್ಟ್ ಹಮ್ಮಿಕೊಂಡ 2570ನೇ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಬುದ್ಧನ ತತ್ವಗಳ ಬಗ್ಗೆ ಮಾತಾಡುವವರು ಕಡಿಮೆ ಜನರಿದ್ದಾರೆ ಎಂದು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ, ಕೊನೆಗೆ ಶಾಂತಿ ಮಾತುಕತೆ ಎಂದು ಬುದ್ಧನ ತತ್ವಗಳೇ ಶಾಶ್ವತ ಎಂಬುದು ತಿಳಿದು ಬರುತ್ತದೆ ಎಂದು ಹೇಳಿದರು.

ಬುದ್ಧರು ತಮ್ಮ ಇಡೀ ಜೀವನದಲ್ಲಿಪ್ರಜ್ಞೆ ಮತ್ತು ಕರುಣೆ ಆಧಾರದ ಮೇಲೆ ಧಾರ್ಮಿಕ ವಿಚಾರಗಳನ್ನು ತಮ್ಮ ಶಿಷ್ಯರಿಗೆ ತಿಳಿಸಿದರು. ಕ್ರಿ.ಪೂ. ಆರನೇ ಶತಮಾನದಲ್ಲಿಸನಾತನ, ವೈದಿಕ ಪ್ರಭಾವವಿದ್ದಾಗ ಮಾನವ ಕೇಂದ್ರಿತ ವಿಚಾರಗಳನ್ನು ಹೇಳಿದ್ದರು. ಅವರೆಂದೂ ಸುಳ್ಳು ಹೇಳಲಿಲ್ಲ. ಸತ್ಯದ ಮಾರ್ಗ ಬಿಟ್ಟು ಬೇರೆನೂ ಹೇಳಲಿಲ್ಲ. ಬುದ್ಧ ಧರ್ಮದಲ್ಲಿನಾನು ಎಂಬ ಪದವಿಲ್ಲ. ಬೇರೆಯವರಲ್ಲಿಕರುಣೆ, ಸಮಾನತೆ, ಬಂಧುತ್ವದ ಕೊರತೆ ಇದೆ. ಬೇರೆಯವರನ್ನು ಖಂಡಿಸದೆ ನಮ್ಮಲ್ಲಿನ ಒಳ್ಳೆಯ ವಿಚಾರ ಬೇರೆಯವರಿಗೆ ತಿಳಿಸೋಣ ಎಂದರು.

ಬುದ್ಧ ಹುಟ್ಟಿದ್ದು ಭಾರತದಲ್ಲಿವಿಚಾರಗಳು ಬೆಳೆದಿದ್ದು ವಿಶ್ವದೆಲ್ಲೆಡೆ. ಬುದ್ಧನನ್ನು, ಬಸವಣ್ಣನವರನ್ನು ನೆನಪಿಸಿಕೊಳ್ಳುವವರು ಕಡಿಮೆ ಆಗಿದ್ದಾರೆ. ಅವರೇ ಜಗಳ ಆಡುತ್ತಿದ್ದಾರೆ. ತತ್ವದ ಆಧಾರದ ಮೇಲೆ ನಡೆಯುವಾಗ ವಿರುದ್ಧ ವಿಚಾರ ಧಾರೆಗಳವರು ಸ್ವೀಕರಿಸುವುದಿಲ್ಲ. ಒಳ್ಳೆ ವಿಚಾರಗಳಿದ್ದರೆ ತಿಳಿಸಲಿ ಎಂದರು.

ಕಾರಣ ಇಲ್ಲದೇ ಜಗತ್ತಿನಲ್ಲಿಯಾವುದೇ ಸೃಷ್ಟಿ ಸಾಧ್ಯವಿಲ್ಲ. ದೇಶದ ವಿವಿಧೆಡೆ ಬುಡಕಟ್ಟು ಸಮಾಜದವರು ನಿಸರ್ಗ ಪೂಜೆ ಮಾಡುತ್ತಾರೆ. ಮೂರ್ತಿ ಇಟ್ಟು ಪೂಜೆ ಮಾಡಲ್ಲ. ಸೂರ್ಯ, ನೀರು, ಮಣ್ಣು, ಮರ ಸೇರಿದಂತೆ ಪಂಚಧಾತುಗಳಿಗೆ ಪೂಜೆ ಮಾಡುತ್ತಾರೆ. ಇದರಿಂದಲೇ ಪ್ರಪಂಚ ಹುಟ್ಟುವುದು ಬೆಳೆಯುತ್ತದೆ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೊ›.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಬುದ್ಧನನ್ನು ನಮ್ಮೊಳಗೆ ಮೂಡಿಸಿಕೊಳ್ಳುವ ಅವಶ್ಯಕತೆ ಇಂದು ಹೆಚ್ಚಿದೆ. ಸದ್ಯದ ಭಾರತದ ರಾಜಕಾರಣ, ಪ್ರಜಾಪ್ರಭುತ್ವ, ಯೋಚನೆಗಳು ಮಹತ್ವದ ತಿರುವಿನಲ್ಲಿಇರುವಾಗ ನಮ್ಮೊಳಗೆ ಬುದ್ಧರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಭಂತೇಜಿಗಳಿಗೆ ಖರ್ಗೆ ಕುಟುಂಬದಿಂದ ಚೀವರ ದಾನ ನೀಡಲಾಯಿತು. ಸಾಹಿತಿ ಈಶ್ವರ ಇಂಗನ್ ಅವರ 10 ಬೌದ್ಧ ನಾಟಕಗಳು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ರಾಧಾಬಾಯಿ ಖರ್ಗೆ, ಸಚಿವ ಡಾ.ಶರಣಪ್ರಕಾಶ ಪಾಟೀಲ…, ಶಾಸಕರಾದ ಬಿ.ಆರ್ .ಪಾಟೀಲ…, ಅಲ್ಲಮಪ್ರಭು ಪಾಟೀಲ…, ಎಂ.ವೈ.ಪಾಟೀಲ…, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಎ.ವಸಂತಕುಮಾರ, ಹಂಪನಗೌಡ ಬಾದರ್ಲಿ, ಬಸನಗೌಡ, ಮಹಾರಾಷ್ಟ್ರದ ಶಾಸಕ ಸಂಜಯ ಮಿಶ್ರನ್ , ಮಾಜಿ ಎಂಎಲ್ಸಿ ಅರವಿಂದ್ ಅರಳಿ, ರಾಹುಲ್ ಖರ್ಗೆ, ಚಂದ್ರಿಕಾ ಪರಮೇಶ್ವರಿ, ಆರ್ .ಕೆ.ಬೇಗಾರ, ಶರಣಕುಮಾರ ಮೋದಿ ಸೇರಿ ಹಲವು ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.

*

ಬಾಕ್ಸ್ ...

ಮಹಾತ್ಮರ ಧರ್ಮ ಮನೆ ದಾಟಲಿಲ್ಲ

ಬಸವಣ್ಣನವರು 12ನೇ ಶತಮಾನದಲ್ಲಿಜಾತಿರಹಿತ ಅನುಭವ ಮಂಟಪ ಕಟ್ಟಿ, ಸಮಾನತೆ ಸಾರಿದವರು. ಅಂತಹ ಮಹಾತ್ಮರು ಕಟ್ಟಿದ ಧರ್ಮ ಕೆಲವರ ಮನೆ ದಾಟಿ ಹೊರಗೆ ಬರಲಿಲ್ಲ. ಅದು ಅಗಸಿ ಒಳಗೆ ಉಳಿದಿದ್ದರಿಂದ ಹೊರಗಿನವರಿಗೂ ತಿಳಿಯಲಿಲ್ಲ. ಒಂದು ವೇಳೆ ಅಗಸಿ ದಾಟಿ ಹೊರ ಬಂದಿದ್ದರೆ ಪಂಜಾಬ್ ನ ಸಿಖ್ , ಬುದ್ಧನ ಬೌದ್ಧ ಧರ್ಮದಂತೆ ಪ್ರಪಂಚದಾದ್ಯಂತ ಬೆಳೆಯುತ್ತಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಬಾಕ್ಸ್ ...

ಸಂಪತ್ತಿನ ಕ್ರೋಢೀಕರಣ ನಿಲ್ಲಬೇಕು

ನಮ್ಮ ಮುಂದೆ ಇರುವ ಆಯ್ಕೆ ಒಂದು ತಿರುವಿನಲ್ಲಿಇದ್ದಾಗ ಬುದ್ಧನ ಜ್ಞಾನ ಪರಂಪರೆಯನ್ನು ಅರಿಯಬೇಕು. ಆಸೆಯೆ ದುಃಖಕ್ಕೆ ಮೂಲ ಎಂದು ಬುದ್ಧರು ಹೇಳಿದ್ದಾರೆ. ಆದರೆ, ಇಲ್ಲಿಆಗುತ್ತಿರುವುದು ಏನು? ಶೇ.4 ಭಾರತೀಯರ ಕೈಯಲ್ಲಿಶೇ.37 ಜಮೀನಿದೆ. ಶೇ.77 ಮಹಿಳೆಯರು ಕೃಷಿ ಕೆಲಸದಲ್ಲಿದ್ದಾರೆ. ಆದರೆ, ಅವರಲ್ಲಿಯೇ ಶೇ.52 ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆಯಲ್ಲಿದ್ದಾರೆ. ಅವರ ದುಡಿಮೆಯ ಸಂಪತ್ತು ಅವರಿಗೆ ದೊರೆಯುತ್ತಿಲ್ಲ. ಯಾರ ಆಸೆಗೆ ಯಾರು ಬಳಲುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಇದರಿಂದ ಸಂಪತ್ತಿನ ಕ್ರೋಢೀಕರಣ ಆಗುತ್ತಿದೆ ಎಂದು ಪ್ರೊ.ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.

***

ಕೋಟ್ ...

ಮನುಷ್ಯ ಧರ್ಮಕ್ಕಾಗಿ ಹುಟ್ಟಿಲ್ಲ, ನಿಸರ್ಗದ ನಿಯಮದ ಪ್ರಕಾರ ಹುಟ್ಟಿದ್ದೇವೆ. ಧರ್ಮ ಎಂಬುದುವು ಟ್ರಾಫಿಕ್ ನಿಯಮ ಇದ್ದಂತೆ. ಮೂಢನಂಬಿಕೆಯಿಂದ ನಾವು ಕೆಟ್ಟಿದ್ದೇವೆ. ಇದಕ್ಕಾಗಿಯೇ ದೇಶ ಒಗ್ಗಟ್ಟಾಗಿ ಉಳಿದಿಲ್ಲ. ಸಂವಿಧಾನ ಒಂದೇ ಪುಸ್ತಕ ಎಲ್ಲರನ್ನು ಒಂದು ಗೂಡಿಸಿತು. ವೇದ, ಪುರಾಣ ಎಂದಿಗೂ ಎಲ್ಲರನ್ನು ಒಂದು ಮಾಡಲಿಲ್ಲ. ಆದರೆ, ಇಡೀ ದೇಶವನ್ನು ಒಂದು ಮಾಡಿದ್ದು ಸಂವಿಧಾನ, ಬುದ್ಧರ ತತ್ವಗಳಲ್ಲಿಕಾಣುವುದು ಜ್ಞಾನ, ಕಾರುಣ್ಯ ಮತ್ತು ಬಂಧುತ್ವ ಮಾತ್ರ.

- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಕೋಟ್ ...

ಅನಾದಿ ಕಾಲದಿಂದ ಕ್ರೌರ್ಯ ಹೇಳಿದ್ದು ಸನಾತನ ಧರ್ಮ. ಶಂಭುಕನನ್ನು ಕೊಂದ ರಾಮನ ರಾಮಾಯಣ ಕ್ರೌರ್ಯದ್ದು. ಇಂತಹ ಕ್ರೌರ್ಯ ಮೀರಿ, ಕಾರುಣ್ಯದ ಬುದ್ಧನ ತತ್ವ ನಮ್ಮದಾಗಬೇಕು. ಬುದ್ಧ, ಬಸವಾದಿ ಶರಣರ ವಿವೇಕ, ಅಂಬೇಡ್ಕರರ ಮಾರ್ಗದರ್ಶನ ಇಂದಿನ ಕಾಲಘಟ್ಟಕ್ಕೆ ಅಳವಡಿಸಿಕೊಳ್ಳಬೇಕು. ಧರ್ಮಕೇಂದ್ರಿತ ರಾಷ್ಟ್ರೀಯತೆ ತೆಗೆದು, ಜನ ಕೇಂದ್ರೀತ ರಾಷ್ಟ್ರೀಯತೆ ಬೋಧಿಸಿದ್ದು ಬುದ್ಧಗುರು, ಕಾನೂನು ಮಾಡಿದ್ದು ಅಂಬೇಡ್ಕರರು.

- ಪ್ರೊ. ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

*

ಬಾಕ್ಸ್ ...

ಹರಿದು ಬಂದ ಉಪಾಸಕರು

ಬುದ್ಧ ಪೂರ್ಣಿಮೆ ಪ್ರಯುಕ್ತ ಬುದ್ಧ ವಿಹಾರದಲ್ಲಿಬೆಳಗ್ಗೆಯಿಂದ ಸಂಜೆವರೆಗೆ ಬೌದ್ಧ ಉಪಾಸಕರು ಸಹಸ್ರಾರು ಸಂಖ್ಯೆಯಲ್ಲಿಹರಿದು ಬಂದರು. ವಿಹಾರದ ಟ್ರಸ್ಟ್ ವತಿಯಿಂದ ಅನ್ನ ಹಾಗೂ ತಂಪು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಲ್ಲಿಬಾವುಟ, ಭಾವಚಿತ್ರ ಸೇರಿ ಇತರ ವಸ್ತುಗಳು ಮಾರಾಟ ಕಂಡು ಬಂದಿತು. ಬಿಸಿಲಿನ ಪ್ರಭಾವ ಜೋರಾಗಿದ್ದರಿಂದ ಜನ ದರ್ಶನ ಮುಗಿಸಿಕೊಂಡು ಬೇಗ ಮನೆ ಕಡೆ ಹೆಜ್ಜೆ ಹಾಕುವುದು ಕಂಡು ಬಂದಿತು.