ಮೈನಾರಿಟಿ ಮನವೊಲಿಕೆಗೆ ಅನುದಾನ: ಬಿಜೆಪಿ ಖಂಡನೆ

Contributed byKeerthi Prasad|Vijaya Karnataka

ಬಿಜೆಪಿ, ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿಗೆ 600 ಕೋಟಿ ರೂ. ಅನುದಾನ ಘೋಷಣೆಯನ್ನು ಓಲೈಕೆ ರಾಜಕಾರಣ ಎಂದು ಟೀಕಿಸಿದೆ. ಮುಖ್ಯಮಂತ್ರಿಗಳು ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಸರ್ವರಿಗೂ ಸಮಪಾಲು ಎನ್ನುವ ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಮಾತ್ರ ಅನುದಾನ ನೀಡುತ್ತಿರುವುದು ಸರಿಯಲ್ಲ ಎಂದು ಆರ್. ಅಶೋಕ್ ತಿಳಿಸಿದ್ದಾರೆ. ಜಿಬಿಎ ಚುನಾವಣೆ ಹಣದ ಕೊರತೆ ಎನ್ನುವ ಸರ್ಕಾರ ಮತಬ್ಯಾಂಕ್‌ಗಾಗಿ ಅನುದಾನ ಘೋಷಿಸಿರುವುದು ಜನತೆಗೆ ದ್ರೋಹ ಎಂದು ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

bjps major condemnation announcement against minority funding

ವಿಕ ಸುದ್ದಿಲೋಕ ಬೆಂಗಳೂರು

‘ಧಿ‘ಅಲ್ಪಸಂಖ್ಯಾತರು ನೆಲೆಸಿರುವ ಕಾಲೊನಿಗಳನ್ನು 600 ಕೋಟಿ ರೂ. ವೆಚ್ಚದಲ್ಲಿಅಭಿವೃದ್ಧಿಪಡಿಸಲು ಸಂಪುಟ ಸಭೆಯಲ್ಲಿತಿರ್ಮಾನ ಕೈಗೊಂಡಿರುವುದು ಓಲೈಕೆ ರಾಜಕಾರಣದ ಪರಮಾವಧಿ,’ಧಿ’ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘‘ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಕಾಂಗ್ರೆಸ್ ಸರಕಾರಕ್ಕೆ ಹಿಂದೂಗಳು ಮತ ಹಾಕಿಲ್ಲವೇ? ಹಿಂದೂಗಳಿಗೆ ಮುಖ್ಯಮಂತ್ರಿಗಳು ಅಪಮಾನ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಇಧಿದಧಿನ್ನು ಜನ ಕ್ಷಮಿಸುವುದಿಲ್ಲ,’’ ಎಂದು ಹೇಳಿದ್ದಾರೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ .ಅಶೋಕ್ , ‘‘ಸರ್ವರಿಗೂ ಸಮಪಾಲು ಎಂದು ಹೇಳುವ ಕಾಂಗ್ರೆಸ್ ಸರಕಾರ ಮುಸ್ಲಿಮರಿಗಷ್ಟೇ ವಿಶೇಷ ಅನುದಾನ ನೀಡುತ್ತಿದೆ. ಇದರ ಜತೆಗೆ ದಲಿತರು, ಹಿಂದುಳಿದ ವರ್ಗಕ್ಕೂ ವಿಶೇಷ ಅನುದಾನ ನೀಡಬೇಕಿತ್ತು. ಇದಕ್ಕೆ ಹಿಂದೂಗಳು ತಿರುಗೇಟು ನೀಡಲಿದ್ದಾರೆ,’’ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ‘‘ಜಿಬಿಎ ಚುನಾವಣೆ ನಡೆಸಲು ‘ಹಣದ ಕೊರತೆ’ ಎಂಬ ಕಾರಣವನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡಿಸಿ ಪ್ರಜಾಪ್ರಭುತ್ವವನ್ನು ಅಣಕಿಸುವ ಸರಕಾರ, ಇನ್ನೊಂದೆಡೆ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು 600 ಕೋಟಿ ರೂ.ಗಳನ್ನು ಓಲೈಕೆ ರಾಜಕಾರಣದ ದೃಷ್ಟಿಯಿಂದ ಘೋಷಿಸಿರುವುದು ಜನತೆಗೆ ಮಾಡುತ್ತಿರುವ ದ್ರೋಹವಲ್ಲವೇ,’ಧಿ’ಧಿಎಂದು ಪ್ರಧಿಶ್ನಿಧಿಸಿಧಿದ್ದಾಧಿರೆ.