ಚನ್ನಪಟ್ಟಣ ತಾಲೂಕಿನಲ್ಲಿಇಲ್ಲನೀರಿನ ಸಮಸ್ಯೆ

Contributed bychinnagirigowdabp@gmail.com|Vijaya Karnataka

ಚನ್ನಪಟ್ಟಣ ತಾಲೂಕಿನಲ್ಲಿ ನೀರಿನ ಸಮಸ್ಯೆ ದೊಡ್ಡ ಮಟ್ಟಿಗೆ ಕಂಡುಬರುತ್ತಿಲ್ಲ. ಕೆರೆಗಳು ತುಂಬಿರುವುದರಿಂದ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಕೆಲ ಗ್ರಾಮಗಳಲ್ಲಿ ಮಾತ್ರ ಕೊಳವೆ ಬಾವಿಗಳನ್ನು ಕೊರೆಸಿ ಸಮಸ್ಯೆ ಬಗೆಹರಿಸಲಾಗಿದೆ. ನಗರ ಪ್ರದೇಶದಲ್ಲೂ ಕಾವೇರಿ ನೀರು ಮತ್ತು ಕೊಳವೆ ಬಾವಿಗಳಿಂದ ನೀರು ಪೂರೈಕೆ ಆಗುತ್ತಿದೆ. ಇದರಿಂದ ಜನ ಹಾಗೂ ಜಾನುವಾರುಗಳಿಗೆ ತೊಂದರೆಯಾಗಿಲ್ಲ.

major water issues and solutions in channapatna taluk

(ಸರಣಿ ಸ್ಟೋರಿ.. ಭಾಗ-2)

ಕೆಲ ಗ್ರಾಮಗಳಲ್ಲಷ್ಟೇ ನೀರಿನ ಕೊರತೆ | ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಿಂದ ತಪ್ಪಿದ ಬಾಧೆ

ಚಿನ್ನಗಿರಿಗೌಡ ಬಿ.ಪಿ. ಚನ್ನಪಟ್ಟಣ

್ಚhಜ್ಞ್ಞಿaಜಜ್ಟಿಜಿಜಟಡಿdaಚಿpಃಜಞaಜ್ಝಿ.್ಚಟಞ.

ತಾಲೂಕಿನಲ್ಲಿಕೆರೆಗಳು ತುಂಬಿ ತಕ್ಕಮಟ್ಟಿಗೆ ಅಂತರ್ಜಲ ಏರಿಕೆಯಾಗಿರುವ ಪರಿಣಾಮ ಚನ್ನಪಟ್ಟಣದಲ್ಲಿನೀರಿನ ಸಮಸ್ಯೆ ಅಷ್ಟಾಗಿ ಬಾಧಿಸುತ್ತಿಲ್ಲದಿದ್ದರೂ ಕೆಲ ಗ್ರಾಮಗಳಲ್ಲಿಮಾತ್ರ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿದೆ.

ತಾಲೂಕಿನ 32 ಗ್ರಾಮ ಪಂಚಾಯಿತಿಗಳ ಪೈಕಿ ಕೆಲ ಗ್ರಾಮಗಳಲ್ಲಿಮಾತ್ರ ನೀರಿನ ಸಮಸ್ಯೆ ಉದ್ಭವಿಸಿರುವುದಾಗಿ ಮಾಹಿತಿ ಇದ್ದು, ಆ ಗ್ರಾಮಗಳಿಗೆ ಕೊಳವೆ ಬಾವಿಗಳನ್ನು ಕೊರೆಯಲು ಈಗಾಗಲೇ ಶಾಸಕರು ಸೂಚನೆ ನೀಡಿ ಕೊಳವೆ ಬಾವಿಗಳನ್ನು ಕೊರೆಸಿದ್ದು, ಇವರೊಟ್ಟಿಗೆ ಸಂಸದರು ಕೂಡ ಕೊಳವೆ ಬಾವಿಗಳನ್ನು ಕೊರೆಸಲು ಅಗತ್ಯ ಕ್ರಮ ಕೈಗೊಂಡಿರುವ ಪರಿಣಾಮ ನೀರಿನ ಸಮಸ್ಯೆ ತಾಲೂಕನ್ನು ಅಷ್ಟಾಗಿ ಬಾಧೆಸುತ್ತಿಲ್ಲ.

ಈಗಾಗಲೇ ಹದಿನೈದರಿಂದ ಇಪತ್ತು ಗ್ರಾಮಗಳಲ್ಲಿಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಅಲ್ಲೆಲ್ಲಾನೀರು ಸಿಕ್ಕಿದ್ದು ಆ ಗ್ರಾಮಗಳಲ್ಲಿಬಹುತೇಕ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಇದೇ ರೀತಿಯಲ್ಲಿಬೇಸಿಗೆ ಮುಗಿಯುವ ವರೆಗೂ ಅಧಿಕಾರಿ ವರ್ಗ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ.

ಇನ್ನೂ ನಗರ ಭಾಗದಲ್ಲಿಕಾವೇರಿ ನೀರು ಹಾಗೂ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆಗೆ ವಾಟರ್ ಬೋರ್ಡ್ ಮತ್ತು ನಗರಸಭೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿನಗರದಲ್ಲೂನೀರಿನ ಸಮಸ್ಯೆ ಕಾಡುತ್ತಿಲ್ಲ.

ಕಳೆದ ಹಿಂದಿನ ವರ್ಷಗಳಿಗಿಂತಲೂ ಈ ವರ್ಷ ಅತಿ ಹೆಚ್ಚು ಬಿಸಿಲಿನ ತಾಪದ ಕಾರಣ ಕೆರೆಯಲ್ಲಿನ ನೀರು ಕಡಿಮೆಯಾಗಿದ್ದು ಬಿಟ್ಟರೆ ಜನಗಳಿಗಾಗಲಿ, ಜಾನುವಾರುಗಳಿಗಾಗಲಿ ನೀರಿನ ಸಮಸ್ಯೆ ತಟ್ಟಿಲ್ಲ.

ತಾಲೂಕಿನ ಜೀವನಾಡಿಗಳು ಎನಿಸಿಕೊಂಡಿರುವ ಇಗ್ಗಲೂರು ಜಲಾಶಯ ಹಾಗೂ ಕಣ್ವ ಜಲಾಶಯಗಳಲ್ಲಿಸಾಕಷ್ಟು ನೀರಿನ ಲಭ್ಯತೆಯಿದ್ದು, ಕಣ್ವ ಏತ ನೀರಾವರಿ ಯೋಜನೆಯಿಂದಾಗಿ ಬಹುತೇಕ ಕೆರೆಗಳು ತುಂಬಿರುವ ಕಾರಣ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿರುವ ಪರಿಣಾಮ ತಾಲೂಕಿನಲ್ಲಿನೀರಿನ ಸಮಸ್ಯೆ ಉದ್ಭವಿಸಿಲ್ಲ.

ಇದರ ಜತೆಗೆ ಸಿಲ್ ್ಕ ಮತ್ತು ಮಿಲ್ ್ಕ ನಲ್ಲೂಕ್ರಾಂತಿಯಾಗುತ್ತಿದ್ದು, ಹಾಲು ಉತ್ಪಾದನೆಯಲ್ಲಿಪ್ರಾಬಲ್ಯ ಮೆರೆಯಲು, ರೇಷ್ಮೆ ಬೆಳೆಯಲ್ಲಿದಾಖಲೆ ದರ ಪಡೆಯಲು ಈ ನೀರಿನ ಲಭ್ಯತೆ ಕಾರಣವೆಂದರೆ ತಪ್ಪಾಗಲಾರದು.

ಕೋಟ್ ..

ನಮ್ಮ ತಾಲೂಕಿನಲ್ಲಿನೀರಿನ ಸಮಸ್ಯೆ ಇಲ್ಲ, ನಾಲ್ಕೈದು ಗ್ರಾಮಗಳಲ್ಲಿಮಾತ್ರ ಸ್ವಲ್ಪ ಸಮಸ್ಯೆ ಕಂಡು ಬಂದಿತ್ತಾದರೂ ತಕ್ಷಣ ಕೊಳವೆ ಬಾವಿ ಕೊರೆಸಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ನಮ್ಮ ತಾಲೂಕು ನೀರಾವರಿ ವಿಚಾರದಲ್ಲಿಸಮೃದ್ಧವಾಗಿದ್ದು, ನಿಗದಿತ ಸಮಯಕ್ಕೆ ಮಳೆ ಬಾರದ ಕಾರಣ ಸ್ವಲ್ಪ ಭಯವುಂಟಾಗಿತ್ತು. ಭಗವಂತನ ಕೃಪೆಯಿಂದ ಮಳೆ ಬಂತು. ರೈತರು ಸೇರಿದಂತೆ ಎಲ್ಲರೂ ನೆಮ್ಮದಿಯಿಂದ ಉಸಿರು ಬಿಡುತ್ತಿದ್ದಾರೆ.

-ಸಿ.ಪಿ.ಯೋಗೇಶ್ವರ್ , ಶಾಸಕರು

ಬಾಕ್ಸ್

ಗ್ರಾಮ ಪಂಚಾಯಿತಿಗಳು: 32 ಗ್ರಾಪಂ

ನಗರಸಭೆ: 31 ವಾರ್ಡ್ ಗಳು

ತಾಲೂಕಿನಲ್ಲಿರುವ ಗ್ರಾಮಗಳು: 250ಕ್ಕೂ ಹೆಚ್ಚು

ತಾಲೂಕಿನ ಜಲಮೂಲಗಳು : ಕಣ್ವ ಜಲಾಶಯ ಮತ್ತು ಇಗ್ಗಲೂರು ಜಲಾಶಯ

ತಾಲೂಕಿನಲ್ಲಿರುವ ಕೆರೆಗಳ ಸಂಖ್ಯೆ: 150ಕ್ಕೂ ಹೆಚ್ಚು ಕೆರೆಗಳು

ಪೋಟೊ01ಸಿಪಿಟಿ1:ಬಿರು ಬೇಸಿಗೆಯಲ್ಲೂತುಂಬಿರುವ ಕಣ್ವ ಜಲಾಶಯ

ಪೋಟೊ01ಸಿಪಿಟಿ2: ಶಾಸಕ ಸಿ.ಪಿ.ಯೋಗೇಶ್ವರ್