ಕಾಟಾಚಾರದ ಉತ್ತರ ವಿವಿ ಮಟ್ಟದ ಕಬಡ್ಡಿ ಪಂದ್ಯಾವಳಿ

Contributed bybommekallu@gmail.com|Vijaya Karnataka

ಚಿಂತಾಮಣಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮಟ್ಟದ ಕಬಡ್ಡಿ ಪಂದ್ಯಾವಳಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆಯೋಜಕರ ನಿರ್ಲಕ್ಷ್ಯ ಮತ್ತು ವಿದ್ಯಾರ್ಥಿಗಳ ಬೇಜವಾಬ್ದಾರಿತನದಿಂದಾಗಿ ಕಾರ್ಯಕ್ರಮ ತನ್ನ ಘನತೆ ಕಳೆದುಕೊಂಡಿತು. ಕೇವಲ 50-60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಯ ಪಾಲನೆಯಲ್ಲೂ ವಿಫಲವಾಯಿತು. ಇದು ಕ್ರೀಡಾಪಟುಗಳ ಪ್ರತಿಭೆ ಅನಾವರಣಗೊಳ್ಳಬೇಕಿದ್ದ ವೇದಿಕೆಯು ನೆಪಮಾತ್ರದ ಕಾರ್ಯಕ್ರಮವಾಗಿ ಮುಕ್ತಾಯಗೊಂಡಿತು.

corrupted kabaddi failure in katichara

ವಿಕ ಸುದ್ದಿಲೋಕ ಚಿಂತಾಮಣಿ

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿಬುಧವಾರ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಯು ನಿರೀಕ್ಷಿತ ಮಟ್ಟದಲ್ಲಿಯಶಸ್ವಿಯಾಗುವಲ್ಲಿವಿಫಲವಾಗಿದೆ.

ವಿಶ್ವವಿದ್ಯಾಲಯ ಮಟ್ಟದ ಪಂದ್ಯಾವಳಿ ಎಂದರೆ ಅಲ್ಲಿಕ್ರೀಡಾ ಸಂಭ್ರಮ ಮೇಳೈಸಬೇಕಿತ್ತು, ಆದರೆ ಇಲ್ಲಿಕೇವಲ ಹೆಸರಿಗಷ್ಟೇ ಕಾರ್ಯಕ್ರಮ ನಡೆದಂತೆ ಭಾಸವಾಯಿತು. ಆಯೋಜಕರ ನಿರ್ಲಕ್ಷ್ಯ ಮತ್ತು ವಿದ್ಯಾರ್ಥಿಗಳ ಬೇಜವಾಬ್ದಾರಿತನದಿಂದಾಗಿ ಕ್ರೀಡಾಕೂಟ ತನ್ನ ಘನತೆ ಕಳೆದುಕೊಂಡಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿವೇದಿಕೆಯ ಮೇಲಿದ್ದ ಗಣ್ಯರು ಹಾಗೂ ಪ್ರಾಧ್ಯಾಪಕರು ಕ್ರೀಡೆಯ ಶಿಸ್ತು ಮತ್ತು ಮಹತ್ವದ ಬಗ್ಗೆ ಭಾಷಣ ಮಾಡುತ್ತಿದ್ದರೂ, ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಅಲ್ಲಿನೆರೆದಿದ್ದ ವಿದ್ಯಾರ್ಥಿಗಳಿಗೆ ಇರಲಿಲ್ಲ.

ಪೆಂಡಾಲ್ ಅಡಿ ಕುಳಿತು ಕಾರ್ಯಕ್ರಮ ವೀಕ್ಷಿಸುವ ಬದಲು, ಬಹುತೇಕ ವಿದ್ಯಾರ್ಥಿಗಳು ಮರ ಗಿಡಗಳ ಕೆಳಗೆ ತಮಗೆ ಇಷ್ಟ ಬಂದಂತೆ ಕುಳಿತಿದ್ದರು. ಅತಿಥಿಗಳ ಮಾತಿಗಿಂತಲೂ ತಮ್ಮ ಮೊಬೈಲ್ ಫೋನ್ ಗಳಲ್ಲಿಮುಳುಗಿದ್ದ ವಿದ್ಯಾರ್ಥಿಗಳ ನಡೆ ಕಾಲೇಜು ಶಿಕ್ಷಣದ ಶಿಸ್ತಿಗೆ ಹಿಡಿದ ಕನ್ನಡಿಯಂತಿತ್ತು. ಸಾರ್ವಜನಿಕ ವಲಯದಲ್ಲಿಈ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕೇವಲ 50-60 ವಿದ್ಯಾರ್ಥಿಗಳು ಮಾತ್ರ ಕ್ರೀಡಾಕೂಟದಲ್ಲಿಭಾಗವಹಿಸಿದ್ದರು. ಸಂಘಟಕರು ಈ ಪಂದ್ಯಾವಳಿಯನ್ನು ಎಷ್ಟರಮಟ್ಟಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೊರತರುವ ಕೆಲಸ ಮಾಡಿದ್ದರು ಎಂಬ ಅನುಮಾನ ಮೂಡುವಂತಿತ್ತು. ಇಡೀ ಕ್ರೀಡಾಂಗಣದಲ್ಲಿಕ್ರೀಡಾ ಕಳೆಯ ಬದಲು ಮೌನವೇ ಆವರಿಸಿತ್ತು. ಸಮಯ ಪಾಲನೆಯ ವಿಷಯದಲ್ಲೂಈ ಕ್ರೀಡಾಕೂಟ ವಿಫಲವಾಗಿದ್ದು, ವ್ಯವಸ್ಥಿತವಾದ ಯೋಜನೆಯ ಕೊರತೆ ಎದ್ದು ಕಾಣುತ್ತಿತ್ತು.

ಒಟ್ಟಾರೆ, ಕ್ರೀಡಾಪಟುಗಳ ಪ್ರತಿಭೆ ಅನಾವರಣಗೊಳ್ಳಬೇಕಿದ್ದ ಈ ವೇದಿಕೆಯು ಕೇವಲ ಒಂದು ನೆಪಮಾತ್ರದ ಕಾರ್ಯಕ್ರಮವಾಗಿ ಮುಕ್ತಾಯಗೊಂಡಿತು. ಕಾಟಾಚಾರದ ಕಾರ್ಯಕ್ರಮವಾದ್ದರಿಂದ ಸೂಕ್ತ ಪ್ರಚಾರವೂ ಈ ವಿವಿ ಮಟ್ಟದ ಕಾರ್ಯಕ್ರಮಕ್ಕೆ ಇರಲಿಲ್ಲ.

30ಸಿಎಂವೈವಿ3

ಕಬ್ಭಡ್ಡಿ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದ ವೇಳೆ ತಮ್ಮದೇ ಲೋಕದಲ್ಲಿತಲ್ಲೀನರಾಗಿರುವ ವಿದ್ಯಾರ್ಥಿಗಳು.