ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ

Contributed byaajayadvt@gmail.com|Vijaya Karnataka

ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನವನ್ನು ಕೊಳ್ಳೇಗಾಲದಲ್ಲಿ ಆಚರಿಸಲಾಯಿತು. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಇಒ ಗುರುಶಾಂತಪ್ಪ ಬೆಳ್ಳುಂಡಗಿ ಕರೆ ನೀಡಿದರು. ಪಿಡಿಒಗಳು ಪಾರದರ್ಶಕತೆ ಕಾಪಾಡಬೇಕು. ಕೊಳ್ಳೇಗಾಲದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ 'ಅಕ್ಕ ಕೆಫೆ' ಸ್ಥಾಪನೆಗೆ ಅನುಮೋದನೆ ದೊರೆತಿದೆ. ಕೊಳ್ಳೇಗಾಲವನ್ನು ಮಾದರಿ ತಾಲೂಕಾಗಿ ಅಭಿವೃದ್ಧಿಪಡಿಸಲು ಎಲ್ಲರೂ ಶ್ರಮಿಸಬೇಕು.

guiding instructions for working towards rural development

ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ

- ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಕರೆ | ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಣೆ

ವಿಕ ಸುದ್ದಿಲೋಕ ಕೊಳ್ಳೇಗಾಲ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿ.ಪಂ. ಚಾಮರಾಜನಗರ ಜಿಲ್ಲೆಹಾಗೂ ತಾಲೂಕು ಪಂಚಾಯಿತಿ ಕೊಳ್ಳೇಗಾಲ ಸಹಯೋಗದಲ್ಲಿಮಂಗಳವಾರ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಿಸಲಾಯಿತು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿನಡೆದ ಕಾರ್ಯಕ್ರಮವನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ ಅವರು ಉದ್ಘಾಟಿಸಿ ಮಾತನಾಡಿ, ‘‘ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪಂಚಾಯತ್ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ನೌಕರರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು, ಪಿಡಿಒಗಳು ತಮ್ಮ ಕರ್ತವ್ಯದಲ್ಲಿಸಂಪೂರ್ಣ ಪಾರದರ್ಶಕತೆ ಕಾಪಾಡಿಕೊಂಡು, ಹಣದ ದುರುಪಯೋಗವನ್ನು ತಡೆಯಲು ಜಾಗೃತರಾಗಿರಬೇಕು. ತಾಲೂಕಿನ ಅಭಿವೃದ್ಧಿಗೆ ಎಲ್ಲರೂ ಸಮರ್ಪಿತವಾಗಿ ಶ್ರಮಿಸಬೇಕು,’’ ಎಂಬ ಸಂದೇಶ ನೀಡಿದರು.

ಮಾದರಿ ತಾಲೂಕಾಗಿ ಅಭಿವೃದ್ಧಿಪಡಿಸಿ: ‘‘ಜನಸೇವೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿಕೊಳ್ಳೇಗಾಲದಲ್ಲಿ15 ಲಕ್ಷ ರೂ. ವೆಚ್ಚದಲ್ಲಿ‘ಅಕ್ಕ ಕೆಫೆ’ ಸ್ಥಾಪನೆಗೆ ಅನುಮೋದನೆ ದೊರೆತಿದ್ದು, ಇದು ಸ್ಥಳೀಯ ಜನರಿಗೆ ಉಪಯುಕ್ತ ಹಾಗೂ ಅನುಕೂಲಕರ ಸೇವಾ ಕೇಂದ್ರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇ-ಸ್ವತ್ತು ಸೇರಿದಂತೆ ವಿವಿಧ ಸಾರ್ವಜನಿಕ ಸೇವೆಗಳಲ್ಲಿಜನರನ್ನು ಅನಗತ್ಯವಾಗಿ ಅಲೆದಾಡಿಸದೆ ಸಮಯೋಚಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಕೊಳ್ಳೇಗಾಲವನ್ನು ರಾಜ್ಯಮಟ್ಟದಲ್ಲಿಮಾದರಿ ತಾಲೂಕಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಎಲ್ಲರೂ ಸೇರಿ ಸಾಧಿಸಬೇಕು,’’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ತಾ.ಪಂ. ಸಹಾಯಕ ನಿರ್ದೇಶಕರು ಗೋಪಾಲಕೃಷ್ಣ, ಸಹಾಯಕ ಲೆಕ್ಕಾಧಿಕಾರಿ ರಾಜಣ್ಣ, ಸಹಾಯಕ ಯೋಜನಾಧಿಕಾರಿ ಸಂದೇಶ್ ಹಾಗೂ ಇತರರು ಇದ್ದರು.

----

ಫೋಟೋ ಕೆಜಿಎಲ್ 28-1

ಕೊಳ್ಳೇಗಾಲ ತಾಲೂಕು ಪಂಚಾಯಿತಿ ಕೊಳ್ಳೇಗಾಲ ಆವರಣದಲ್ಲಿನಡೆದ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಸಮಾರಂಭವನ್ನು ಇಒ ಗುರುಶಾಂತಪ್ಪ ಬೆಳ್ಳುಂಡಗಿ ಉದ್ಘಾಟಿಸಿದರು.