ಐಸಿಎಸ್ ಇ: ವಿದ್ಯಾಂಜಲಿ ಪಬ್ಲಿಕ್ ಶಾಲೆ ನೂರಕ್ಕೆ ನೂರು

Contributed byvishnubkl2018@gmail.com|Vijaya Karnataka

ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಐಸಿಎಸ್‌ಇ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸಿದೆ. ಇದು ಶಾಲೆಯ ಸತತ 12ನೇ ಯಶಸ್ಸು. ಇಬ್ರಾಹಿಂ ಶೇಖ್‌ 95.6% ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಒಟ್ಟು 32 ವಿದ್ಯಾರ್ಥಿಗಳಲ್ಲಿ 18 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಉಳಿದವರೆಲ್ಲರೂ 70% ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪಾಲಕರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

icse vidyanjali public school achieves outstanding results

ಭಟ್ಕಳ : ಇಲ್ಲಿನ ಪ್ರತಿಷ್ಠಿತ ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಐಸಿಎಸ್ ಇ ಫಲಿತಾಂಶದಲ್ಲಿಸತತ 12ನೇ ಸಾಲಿನಲ್ಲಿಯೂ ಶೇ.100ರಷ್ಟು ಸಾಧನೆ ಮಾಡಿದೆ.

ಶಾಲೆಯ ವಿದ್ಯಾರ್ಥಿಗಳಾದ ಇಬ್ರಾಹಿಂ ಶೇಖ್ 95.6%, ಪೂರ್ವಿ ಹೆಗಡೆ 94.4%, ಸಿ ಎನ್ ತನ್ವಿತಾ 94%, ಧನ್ಯಾ ರಾಜು ನಾಯ್ಕ 93.6%, ಅಂಕಿತಾ ಉದಯ ನಾಯ್ಕ 93.4%, ಅನನ್ಯಾ ಕಾರ್ಕಳ್ 92.8%, ವಿಹಾ ವೀರೇಂದ್ರ ಶಾನಬಾಗ 92%, ನಿಶತ್ ಕೌಸರ್ 91.2%, ಐಶ್ವರ್ಯ ಆನಂದ ದೇವಡಿಗ 90.8%, ಚೈತ್ರಾ ಚಂದ್ರಕಾಂತ ಚಿತ್ರಾಪುರ 90%, ಸಮರ್ಥ ಮಾಸ್ತಿ ಗೊಂಡ 90% ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟೂ 32 ವಿದ್ಯಾರ್ಥಿಗಳಲ್ಲಿ18 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡರೆ, ಉಳಿದ 14 ವಿದ್ಯಾರ್ಥಿಗಳು ಶೇ.70ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ ್ಯರು, ಶಿಕ್ಷಕರು ಹಾಗೂ ಪಾಲಕರು ಸಂತೋಷ ವ್ಯಕ್ತ ಪಡಿಸಿದ್ದಾರೆ.

ಪೋಟೋ: ಇಬ್ರಾಹಿಂ, ಶೇಖ್ , ಪೂರ್ವಿ ಹೆಗಡೆ, ಸಿ.ಎನ್ .ತನ್ವಿತಾ, ಧನ್ಯಾ, ಅಂಕಿತಾ, ಅನನ್ಯಾ, ವಿಹಾ, ನಿಶತ್ , ಐಶ್ವರ್ಯ, ಚೈತ್ರಾ, ಸಮರ್ಥ