ಚನ್ನಗಿರಿ : ಶಿಕ್ಷಕರಿಂದ ಮತದಾನ
ಚನ್ನಗಿರಿ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಶುಕ್ರವಾರ ಪಟ್ಟಣದ ಬಾಲಕಿಯರ ಸರಕಾರಿ ಪ್ರೌಢಶಾಲಾ ಕೊಠಡಿಗಳಲ್ಲಿನಡೆದಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರು ರಜೆ ದಿನಗಳಲ್ಲಿಯೂ ಉತ್ಸಾಹದಿಂದ ಮತದಾನ ಮಾಡಿದರು.
ಸಂಘದ ಒಟ್ಟು 14 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಗುರುಸ್ಪಂದನಾ ಶಿಕ್ಷಕರ ತಂಡ, ಪ್ರಗತಿಪರ ಸಮಾನ ಮನಸ್ಕರ ಶಿಕ್ಷಕರ ತಂಡ 2 ತಂಡಗಳನ್ನು ಮಾಡಿಕೊಳ್ಳುವ ಮೂಲಕ 28 ಜನ ಕಣದಲ್ಲಿಇದ್ದಾರೆ. ಅದರಲ್ಲಿ9 ಜನ ಪುರುಷರು ಮತ್ತು 5 ಜನ ಮಹಿಳೆಯರು ಆಯ್ಕೆಯಾಗಬೇಕಿದೆ.
ತಾಲೂಕು ವ್ಯಾಪ್ತಿಯಲ್ಲಿ819 ಜನ ಪ್ರಾಥಮಿಕ ಶಾಲಾ ಶಿಕ್ಷಕರು ಇದ್ದು, 696 ಜನ ಮತದಾನ ಮಾಡಲು ಅರ್ಹತೆ ಪಡೆದಿದ್ದು, 2 ಕೊಠಡಿಗಳಲ್ಲಿಮತದಾನ ನಡೆಯಿತು.
-----
30ಸಿಎಚ್ ಎನ್ ಪಿ1
ಚನ್ನಗಿರಿಯಲ್ಲಿಮತದಾನ ಮಾಡಲು ಮತಗಟ್ಟೆಗೆ ಬರುತ್ತಿರುವ ಮಹಿಳಾ ಶಿಕ್ಷಕಿ.
---
30ಸಿಎಚ್ ಎನ್ ಪಿ2
ಚನ್ನಗಿರಿಯಲ್ಲಿಮತದಾನ ಮಾಡಲು ಸರತಿ ಸಾಲಿನಲ್ಲಿನಿಂತಿರುವ ಶಿಕ್ಷಕರು.

