ಮಾದಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ದಾವಣಗೆರೆ: 2025-26ನೇ ಸಾಲಿನಲ್ಲಿಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಶೇ.60ಕ್ಕೂ ಹೆಚ್ಚು ಅಂಕ ಪಡೆದ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ, ಜಿಲ್ಲಾಮಾದಿಗ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಬಿ.ಎಚ್ . ವೀರಭದ್ರಪ್ಪ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಮೇ 22ರಂದು ನಗರದ ಶಿವಯೋಗಿ ಮಂದಿರಲ್ಲಿಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶೇ.60ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮೇ 17ರ ಒಳಗಾಗಿ ಆಯಾ ತಾಲೂಕುಗಳ ಮಹಾಸಭಾದ ಪ್ರತಿನಿಧಿಗಳಿಗೆ ಅಂಕಪಟ್ಟಿ, ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣಪತ್ರದ ಜೆರಾಕ್ಸ್ ಪ್ರತಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.
ದಾವಣಗೆರೆ ನಗರದವರು ಹೆಗ್ಗೆರೆ ರಂಗಪ್ಪ (9686570571), ದಾವಣಗೆರೆ ಗ್ರಾಮಾಂತರ ಆಲೂರು ಶಿವಕುಮಾರ್ (9880298701), ಚನ್ನಗಿರಿ ಬಿ.ಮಂಜುನಾಥ್ (9844789566), ಹೊನ್ನಾಳಿ ದಿಡಗೂರು ತಮ್ಮಣ್ಣ (9620800783), ಹರಿಹರ ನಗರ ಡಿ.ಹನುಮಂತಪ್ಪ (7996475089) ಅವರನ್ನು ಸಂಪರ್ಕಿಸಿ ವಿವರ ನೀಡಬೇಕು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿಮಹಾಸಭಾದ ಗೌರವಾಧ್ಯಕ್ಷ ರವಿನಾರಾಯಣ, ಹೆಗ್ಗೆರೆ ರಂಗಪ್ಪ, ಪದಾಧಿಕಾರಿಗಳು ಇದ್ದರು.
-----

