ಕೆನರಾ ಕಾಲೇಜಿನಲ್ಲಿರಾಜ್ಯಮಟ್ಟದ ಸಮ್ಮೇಳನ

Contributed byvijaya.poojary@timesgroup.com|Vijaya Karnataka

ಮಂಗಳೂರಿನ ಕೆನರಾ ಕಾಲೇಜಿನಲ್ಲಿ ರಾಜ್ಯಮಟ್ಟದ ಸಮ್ಮೇಳನ ನಡೆಯಿತು. ಡಿಜಿಟಲ್‌ ತಂತ್ರಜ್ಞಾನ ಮತ್ತು ಸ್ಮಾರ್ಟ್‌ ವ್ಯವಹಾರ ತಂತ್ರಗಳ ಕುರಿತು ಚರ್ಚಿಸಲಾಯಿತು. ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧ ಮಂಡಿಸಿದರು. ಕಾಲೇಜಿನ ಯುಜಿ ವಿದ್ಯಾರ್ಥಿಗಳಿಗೆ 'ರಣನೀತಿ 2026' ಫೆಸ್ಟ್‌ ಕೂಡ ನಡೆಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

state level conference at kenya college 2023

ವಿಕ ಸುದ್ದಿಲೋಕ ಮಂಗಳೂರು

ನಗರದ ಕೆನರಾ ಕಾಲೇಜಿನ (ಸ್ನಾಯತ್ತ) ವಾಣಿಜ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ ವರ್ಚುವಲ್ ವಿಸ್ತಾಸ್ ಆಫ್ ಭಾರತ್ ಅನ್ ಲಾಕಿಂಗ್ ಇಂಡಿಯಾಸ್ ಕ್ರಿಯೇಟಿವ್ ಕ್ಯಾಪಿಟಲ್ ತ್ರೂ ಡಿಜಿಟಲ್ ಟ್ವಿನ್ಸ್ ಸ್ಮಾರ್ಟ್ ಬಿಜಿ‚ನೆಸ್ ಸ್ಟ್ರಾಟಜಿ ಎಂಬ ವಿಷಯದ ಮೇಲೆ ರಾಜ್ಯ ಮಟ್ಟದ ಒಂದು ದಿನದ ಸಮ್ಮೇಳನ ನಡೆಯಿತು.

ನಾನಾ ಕಾಲೇಜುಗಳ ಯುಜಿ ಹಾಗೂ ಪಿಜಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಯುಜಿ ವಿದ್ಯಾರ್ಥಿಗಳಿಗಾಗಿ ಅಂತರ್ ತರಗತಿ ವಾಣಿಜ್ಯ ಮತ್ತು ನಿರ್ವಹಣಾ ಫೆಸ್ಟ್ - ರಣನೀತಿ 2026ನ್ನು ಆಯೋಜಿಸಲಾಯಿತು.

ಸಿಎ ಪ್ರಸನ್ನ ಶೆಣೈ ಉದ್ಘಾಟಿಸಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿಸಮ್ಮೇಳನದ ವಿಷಯದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ನವೀನತೆ ಮತ್ತು ಉದ್ಯಮಶೀಲತೆಯತ್ತ ಗಮನಹರಿಸಬೇಕು ಎಂದರು.

ಸ್ನಾತಕೋತ್ತರ ವಿಭಾಗದ ಸಂಯೋಜಕಿಯಾದ ಸ್ವಾತಿ ನಾಯಕ್ ಕಾರ್ಯಕ್ರಮದ ಉದ್ದೇಶ ಮತ್ತು ರೂಪುರೇಷೆಗಳ ಕುರಿತು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಡಾ.ಪ್ರೇಮಲತಾ ವಿ. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ಬೆಳವಣಿಗೆ ಸಾಧಿಸಬೇಕು ಎಂದರು.

ಸಿಎ ಪ್ರಸನ್ನ ಶೆಣೈ ತಾಂತ್ರಿಕ ಅಧಿವೇಶನವನ್ನು ನಡೆಸಿ, ನವೀನತೆ, ಸ್ಮಾರ್ಟ್ ಆ್ಯಪ್ ಗಳು ಹಾಗೂ ಆಧುನಿಕ ವ್ಯವಹಾರ ತಂತ್ರಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಅಧಿವೇಶನವಾಗಿತ್ತು. ಸಮ್ಮೇಳನದ ಅಂಗವಾಗಿ ನಡೆದ ಪ್ಯಾನೆಲ್ ಪೇಪರ್ ಪ್ರಸ್ತುತಿಗಳಲ್ಲಿನಾನಾ ಕಾಲೇಜುಗಳಿಂದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳು ಒಟ್ಟು 35 ಸಂಶೋಧನಾ ಪ್ರಬಂಧ ಮಂಡಿಸಿದರು.

ಸಮಾರೋಪ ಸಮಾರಂಭದಲ್ಲಿಸಮ್ಮೇಳನದ ಸಂಯೋಜಕಿ ಶ್ವೇತಾ ಪೈ ಎಂ. ಹಾಗೂ ಫೆಸ್ಟ್ ನ ಸಂಯೋಜಕಿ ಸ್ನೇಹಾ ಪೈ ಸ್ಪರ್ಧಾ ವಿಜೇತರನ್ನು ಘೋಷಿಸಿದರು. ಸಿಎ ವೃಂದಾ ಕೊನ್ನರ್ ವಿಜೇತರಿಗೆ ಬಹುಮಾನ ವಿತರಿಸಿದರು. ಕಾಲೇಜಿನ ಸಂಚಾಲಕ ಸಿಎ ಎಂ.ಜಗನ್ನಾಥ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

30ಎಂಎನ್ ಜಿ-ಕೆನರಾ ಕಾಲೇಜು