ಭೂ ಮಂಜೂರಾತಿ ಅರ್ಜಿ ವಿಲೇಗೆ ಒತ್ತಾಧಿಯ
ವಿಕ ಸುದ್ದಿಧಿಲೋಕ ರಾಯಚೂರು
‘‘ಭೂ ಕಂದಾಯ ಕಾಯಿದೆ 1964ರ ಸೆಕ್ಷನ್ 94ಎ, 94ಬಿ ಮತ್ತು 94ಸಿ ಅಡಿ ಸಲ್ಲಿಸಿರುವ ಫಾರಂ ನಂ.50/53 ಮತ್ತು 57 ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು,’’ ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವಧಿರಿಗೆ ಗುರುಧಿವಾರ ಮನವಿ ಸಲ್ಲಿಸಲಾಯಿತು.
‘‘ದೇವದುರ್ಗ, ಅರಕೇರಾ ಹಾಗೂ ರಾಯಚೂರು ಗ್ರಾಮೀಣ ತಾಲೂಕಿನ ಜಾಲಹಳ್ಳಿ, ಹೊಸೂರು, ಸಿದ್ದಾಪುರ, ಚಿಂಚೋಡಿ, ಪರಪುರ, ಬಂಕಲದೊಡ್ಡಿ, ಮಿಡಗಲದಿನ್ನಿ, ಯಾರಗುಂಟ, ಅನ್ವರಾ, ಗೊನವಾರ, ಪಲವಳದೊಡ್ಡಿ, ಬುರ್ದಿಪಾದ, ಗದರಾ, ಮುಂಡರಗಿ ಸೇರಿ ಇತರ ಹಳ್ಳಿಗಳಲ್ಲಿಭೂಹೀನ ಬಡ ರೈತರು 30- 40 ವರ್ಷಗಳಿಂದ ಸರಕಾರದ ಗೈರಾಣಿ, ಪೋರಂಪೋಕ, ಗೋಮಾಳ ಹಾಗೂ ಅರಣ್ಯ ಭೂಮಿಗಳಲ್ಲಿನಿರಂತರ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸರಕಾಧಿರದ ಸ್ವಾಧೀನದಲ್ಲಿರುವ ಇಂತಹ ಭೂಮಿಗಳನ್ನು ನಿಯಮಾನುಸಾರ ಅರ್ಹ ಸಾಗುವಳಿದಾರರಿಗೆ ಮಂಜೂರು ಮಾಡಲು ಫಾರಂ ನಂ.50/53 ಮತ್ತು 57ರಡಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ಅರಕೇರಾ ತಾಲೂಕಿನಲ್ಲಿಇದುವರೆಗೆ ಭೂ ಮಂಜೂರಾತಿ ಸಮಿತಿ ರಚನೆಯಾಗದೇ ಅರ್ಜಿಗಳು ಬಾಕಿ ಉಳಿದಿವೆ. ದೇವದುರ್ಗ ಹಾಗೂ ರಾಯಚೂರು ತಾಲೂಕುಗಳಲ್ಲಿಸಮಿತಿ ರಚನೆಯಾದರೂ ಸಭೆ ಕರೆಯದೇ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿಲ್ಲ. ಇದರಿಂದ ದೀರ್ಘ ಕಾಲದಿಂದ ಸಾಗುವಳಿ ಮಾಡುತ್ತಿರುವ ರೈತರು ಕಾನೂನುಬದ್ಧ ಹಕ್ಕಿನಿಂದ ವಂಚಿತರಾಗಿದ್ದಾರೆ. ಕೂಧಿಡಲೇ ಅರಕೇರಾ ತಾಲೂಕಿನಲ್ಲಿಭೂ ಮಂಜೂರಾತಿ ಸಮಿತಿ ರಚಿಸಬೇಕು. ದೇವದುರ್ಗ ಮತ್ತು ರಾಯಚೂರು ತಾಲೂಕುಗಳ ಭೂ ಮಂಜೂರಾತಿ ಸಮಿತಿಯ ತುರ್ತು ಸಭೆ ಕರೆಯಬೇಕು. ಬಾಕಿ ಇರುವ ಎಲ್ಲಅರ್ಜಿಗಳ ವಿಲೇವಾರಿಗೆ ನಿಗದಿತ ಕಾಲಮಿತಿ ಘೋಷಿಸಬೇಕು,’’ ಎಂದು ಒತ್ತಾಯಿಸಿದರು.
ರೈತ ಸಂಘಟನೆ ಜಿಲ್ಲಾಕಾರ್ಯದರ್ಶಿ ಮಲ್ಲನಗೌಡ ಅಂಚೆಸೂಗೂರು, ಕಕ್ಕಲದೊಡ್ಡಿ ಮಹಮ್ಮದ್ ಸಾಬ್ , ಕಕ್ಕಲದೊಡ್ಡಿ ರಂಗಣ್ಣ, ವಿಶ್ವನಾಥ ಜಾಲಹಳ್ಳಿ, ಭೀಮಣ್ಣ ಮಿಡಗಲದಿನ್ನಿ, ನಿಂಗಣ್ಣ ನವಲಕಲ್ ಇದ್ದರು.
---
ಸಂತೊಷ 30ಎ.ಎಧಿಸ್ 07
ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ರಾಯಧಿಚೂರು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವಧಿರಿಗೆ ಗುರುಧಿವಾರ ಮನವಿ ಪತ್ರ ಸಲ್ಲಿಸಲಾಯಿತು.

