ವಿಕ ಸುದ್ದಿಲೋಕ ಮೈಸೂರು ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಮೈಸೂರು ಜಿಲ್ಲೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಕಿವಿಮಾತು ಹೇಳಿದರು. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿಇತ್ತೀಚೆಗೆ ಆಯೋಜಿಸಿದ್ದ ಎಸ್ ಸಿಎಸ್ ಪಿ, ಟಿಎಸ್ ಪಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮದಲ್ಲಿಅರ್ಹ 181 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಮಾತನಾಡಿದರು. ‘‘ತಾಂತ್ರಿಕ ವಿಷಯಗಳಲ್ಲಿವಿಧ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಈ ಲ್ಯಾಪ್ ಟಾಪ್ ವಿತರಣೆಯಿಂದ ಅನುಕೂಲವಾಗಲಿದೆ. ಹಾಗಾಗಿ, ಈ ಯೋಜನೆಯೊಂದಿಗೆ ಸರಕಾರದಿಂದ ದೊರೆಯುವ ಯಾವುದೇ ಸವಲತ್ತುಗಳನ್ನು ನಿರ್ಲಕ್ಷ್ಯಿಸದೆ ಸದ್ಬಳಕೆ ಮಾಡಿಕೊಳ್ಳಬೇಕು,’’ ಎಂದು ಹೇಳಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಮೈಸೂರು ಕೇಂದ್ರ ನಿರ್ದೇಶಕ ಡಾ.ಎಂ. ನಂಜುಂಡಸ್ವಾಮಿ ಮಾತನಾಡಿ, ‘‘ವಿದ್ಯಾಭ್ಯಾಸ ಮಾಡುವ ಸಮಯದಿಂದ ಉದ್ಯೋಗ ಪಡೆಯುವವರೆಗೂ ಈ ಲ್ಯಾಪ್ ಟಾಪ್ ನಿಂದ ಉಪಯೋಗವಿದೆ. ಇದನ್ನು ಸರಿಯಾದ ಮಾರ್ಗದಲ್ಲಿಬಳಸಿಕೊಂಡು ಶೈಕ್ಷಣಿಕವಾಗಿ ಮೈಲುಗಲ್ಲುಸಾಧಿಸಬೇಕು,’’ ಎಂದು ಹೇಳಿದರು. ವಿ.ತಾ.ವಿ.ಬೆಳಗಾವಿ ಎಸ್ ಸಿ, ಎಸ್ ಟಿ ಲೈಸನ್ಸ್ ಅಧಿಕಾರಿ ಡಾ. ಪ್ರಹ್ಲಾದ್ ರಾಥೋಡ್ , ನೋಡಲ್ ಅಧಿಕಾರಿ ಡಾ. ಕವಿತಾ ಸೇರಿದಂತೆ ಇತರರು ಇದ್ದರು.

