ದಿಲ್ಲಿಯಲ್ಲಿ3,000 ಬಸ್ ಗಳಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ

Contributed byvijay.cheelange@timesgroup.com|Vijaya Karnataka

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ತಾಪಮಾನದ ಹಿನ್ನೆಲೆಯಲ್ಲಿ, ಸಾರಿಗೆ ನಿಗಮವು 'ಜಲದೂತ್' ಉಪಕ್ರಮವನ್ನು ಆರಂಭಿಸಿದೆ. ಇದರ ಅಡಿಯಲ್ಲಿ 3,000 ಬಸ್‌ಗಳಲ್ಲಿ ಪ್ರಯಾಣಿಕರಿಗೆ ಉಚಿತ ಕುಡಿಯುವ ನೀರು ಲಭ್ಯವಾಗಲಿದೆ. ದಿಲ್ಲಿಯ 23 ಪ್ರಮುಖ ಬಸ್ ಟರ್ಮಿನಲ್‌ಗಳಲ್ಲಿಯೂ 'ಜಲದೂತ್' ಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯು ಪ್ರಯಾಣಿಕರಿಗೆ, ವಿಶೇಷವಾಗಿ ತೀವ್ರ ಶಾಖದಲ್ಲಿರುವವರಿಗೆ ತಕ್ಷಣದ ಪರಿಹಾರ ನೀಡುವ ಗುರಿ ಹೊಂದಿದೆ.

free drinking water system in 3000 buses in delhi

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಬಸ್ ಗಳಲ್ಲೂಪ್ರಯಾಣಿಕರಿಗೆ ಸರಕಾರವು ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಸಾರಿಗೆ ನಿಗಮದಲ್ಲಿಕುಡಿಯುವ ನೀರು ಪೂರೈಸುವ ‘ಜಲದೂತ್ ’ ಉಪಕ್ರಮಕ್ಕೆ ಅವರು ಚಾಲನೆ ನೀಡಲಾಗಿದೆ. ಪ್ರಯಾಣಿಕರಿಗೆ ಉಚಿತ ಕುಡಿಯುವ ನೀರು ಒದಗಿಸಲು ದಿಲ್ಲಿಯ ವಿವಿಧ ಪ್ರದೇಶಗಳಲ್ಲಿನ 23 ಪ್ರಮುಖ ಬಸ್ ಟರ್ಮಿನಲ್ ಗಳಲ್ಲಿ‘ಜಲದೂತ್ ’ಗಳನ್ನು ಅಳವಡಿಸಲಾಗಿದೆ. ಜನಸಾಮಾನ್ಯರಿಗೆ, ಅದರಲ್ಲೂತೀವ್ರ ಶಾಖದ ಪರಿಸ್ಥಿತಿಗಳಲ್ಲಿಬಳಲುವ ಪ್ರಯಾಣಿಕರಿಗೆ ತಕ್ಷಣದ ಪರಿಹಾರವನ್ನು ನೀಡುವ ಗುರಿಯನ್ನು ಈ ಉಪಕ್ರಮ ಹೊಂದಿದೆ.