ಗುಣಾತ್ಮಕ ಕಾಮಗಾರಿ ಕೈಗೊಳ್ಳಿ

Contributed bybeeresha.mahadeva@timesgroup.com|Vijaya Karnataka

ಶಾಸಕ ಕೆ. ಹರೀಶ್‌ ಗೌಡ ಅವರು ತಮ್ಮ ಕ್ಷೇತ್ರದ ಕಾಮಗಾರಿಗಳನ್ನು ಪರಿಶೀಲಿಸಿದರು. ಅವರು ಸ್ಕೂಟರ್‌ನಲ್ಲಿ ಸಂಚರಿಸಿ ರಸ್ತೆ, ಒಳಚರಂಡಿ ಕಾಮಗಾರಿಗಳನ್ನು ವೀಕ್ಷಿಸಿದರು. ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ಗುಣಮಟ್ಟದ ಕೆಲಸಕ್ಕೆ ಆದೇಶಿಸಿದರು. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕಠಿಣ ಕ್ರಮ ಎಚ್ಚರಿಕೆ ನೀಡಿದರು. ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿದರು.

mysore mlas surprise visit to check quality of construction work emphasis on quality

ವಿಕ ಸುದ್ದಿಲೋಕ ಮೈಸೂರು ಶಾಸಕ ಕೆ.ಹರೀಶ್ ಗೌಡ ಅವರು ದಿಢೀರ್ ಭೇಟಿ ನೀಡಿ ಕ್ಷೇತ್ರ ವ್ಯಾಪ್ತಿಯಲ್ಲಿನಡೆಯುತ್ತಿರುವ ನಾನಾ ಕಾಮಗಾರಿಗಳನ್ನು ಪರಿಶೀಲಿಸಿ ಗುಣಾತ್ಮಕ ಕೆಲಸ ಮಾಡುವುದಲ್ಲದೇ, ಸಕಾಲಕ್ಕೆ ಪೂರ್ಣಗೊಳಿಸುವಂತೆ ಸಲಹೆ ನೀಡಿದರು. ಸ್ಥಳೀಯ ಮುಖಂಡರೊಂದಿಗೆ ದ್ವಿಚಕ್ರವಾಹನಲ್ಲಿಯೇ ಪರಿವೀಕ್ಷಣೆ ಮಾಡುವ ಮೂಲಕ ಗಮನ ಸೆಳೆದರು. ಹೆಬ್ಬಾಳು, ಸುಬ್ರಮಣ್ಯ ನಗರ, ಲಕ್ಷೀಕಾಂತ ನಗರ, ಮಂಚೇಗೌಡನ ಕೊಪ್ಪಲು, ಕಟ್ಟೆ ಹೊಸೂರು, ಮಹಾಜನ ಬಡಾವಣೆ, ವಾಣಿವಿಲಾಸ ಬಡಾವಣೆಗೆ ದಿಢೀರ್ ಭೇಟಿ ನೀಡಿ, ಅಲ್ಲಿನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದರು. ಶಾಸಕರು ತಮ್ಮ ಕಾರನ್ನು ಬಿಟ್ಟು ಸ್ಕೂಟರ್ ನಲ್ಲಿಯೇ ಸ್ಥಳೀಯ ಮುಖಂಡರು, ಗುತ್ತಿಗೆದಾರರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ರಸ್ತೆ, ಒಳಚರಂಡಿ, ಮಳೆ ನೀರು ಚರಂಡಿ ಕಾಮಗಾರಿಗಳು ಪ್ರಗತಿಯಲ್ಲಿರುವ ಸ್ಥಳಗಳಿಗೆ ಭೇಟಿ ನೀಡಿದ ಶಾಸಕರು, ಕಾಮಗಾರಿಯ ಗುಣಮಟ್ಟ ಹಾಗೂ ವೇಗದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಸ್ಥಳೀಯರ ಕುಂದುಕೊರತೆಗಳನ್ನು ಆಲಿಸಿದರು. ಮುಖ್ಯವಾಗಿ ಮಳೆಗಾಲದಲ್ಲಿಉಂಟಾಗುವ ನೀರಿನ ಸಮಸ್ಯೆ, ರಸ್ತೆ ಗುಂಡಿಗಳು ಹಾಗೂ ಬೀದಿ ದೀಪಗಳ ಕೊರತೆ ಬಗ್ಗೆ ಸಾರ್ವಜನಿಕರು ಶಾಸಕರ ಗಮನ ಸೆಳೆದರು. ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ತಕ್ಷಣವೇ ಸ್ಥಳದಲ್ಲಿದ್ದ ಪಾಲಿಕೆ ಎಂಜಿನಿಯರ್ ಗಳು ಹಾಗೂ ಅಧಿಕಾರಿಗಳನ್ನು ಕರೆದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲಕಾಮಗಾರಿಗಳನ್ನು ಗುಣಮಟ್ಟದಿಂದ, ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಯಾವುದೇ ಲೋಪ ಕಂಡುಬಂದಲ್ಲಿಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದರು. ಎಕ್ಸಿಕ್ಯೂಟಿವ್ ಎಂಜಿನಿಯರ್ ಹಿತೇಂದ್ರ, ಕಾರ್ಯಪಾಲಕ ಎಂಜಿನಿಯರ್ ಅಶ್ವಿನ್ , ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶುಶ್ರುತ್ , ಎ.ಇ ಪ್ರಭಾಮಣಿ , ಅಶ್ವಿನಿ, ಮುದ್ದು ಮಲ್ಲೇಗೌಡ ಹಾಗೂ ಸ್ಥಳೀಯ ಮುಖಂಡರು ಇದ್ದರು.